ಡಿಕೆ ಬ್ರದರ್ಸ್ ಇಲ್ಲದ ಚುನಾವಣೆ: ರಾಮನಗರ ಜಿ.ಪಂ ಅಧ್ಯಕ್ಷರಾಗಿ ಬಸಪ್ಪ ಆಯ್ಕೆ

By Web Desk  |  First Published Oct 15, 2019, 1:35 PM IST

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ ಅವರ ಅನುಪಸ್ಥಿತಿಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಅದ್ಯಕ್ಷ ಚುನಾವಣೆ| ಜಿ.ಪಂ ಅಧ್ಯಕ್ಷರಾಗಿ ಎಚ್ ಬಸಪ್ಪ ಅವಿರೋಧವಾಗಿ ಆಯ್ಕೆ| ಡಿಕೆ ಬ್ರದರ್ಸ್ ಇಲ್ಲದ ಮೊದಲ ಚುನಾವಣೆಯಾಗಿದೆ| 10 ತಿಂಗಳ ಅವಧಿಯ ಜಿ.ಪಂ ಅದ್ಯಕ್ಷ ಗಾದಿಗಾಗಿ ನಡೆದ ಚುನಾವಣೆ| ಡಿಕೆ ಬ್ರದರ್ಸ್ ಸೂಚನೆ ಮೇರೆಗೆ ಬಸಪ್ಪ ಅವಿರೋಧವಾಗಿ ಆಯ್ಕೆ| ನೂತನ ಅಧ್ಯಕ್ಷ ಬಸಪ್ಪ ಅವರು ಕನಕಪುರ ವಿಧಾನಸಭಾ ಕ್ಷೇತ್ರದ ಹೊಸದುರ್ಗ ಜಿ.ಪಂ ಸದಸ್ಯರಾಗಿದ್ದಾರೆ|


ರಾಮನಗರ[ಅ.15]:  ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯತ್ ಅದ್ಯಕ್ಷ ಚುನಾವಣೆ ನಡೆದಿದೆ. ಜಿ.ಪಂ ಅಧ್ಯಕ್ಷರಾಗಿ ಎಚ್ ಬಸಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಿಕೆ ಬ್ರದರ್ಸ್ ಇಲ್ಲದ ಮೊದಲ ಚುನಾವಣೆಯಾಗಿದೆ. 10 ತಿಂಗಳ ಅವಧಿಯ ಜಿ.ಪಂ ಅದ್ಯಕ್ಷ ಗಾದಿಗಾಗಿ ನಡೆದ ಚುನಾವಣೆಯಲ್ಲಿ ಡಿಕೆ ಬ್ರದರ್ಸ್ ಸೂಚನೆ ಮೇರೆಗೆ ಬಸಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಬಸಪ್ಪ ಅವರು ಕನಕಪುರ ವಿಧಾನಸಭಾ ಕ್ಷೇತ್ರದ ಹೊಸದುರ್ಗ ಜಿ.ಪಂ ಸದಸ್ಯರಾಗಿದ್ದಾರೆ. ಬಸಪ್ಪ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಈ ಮೊದಲೇ ಡಿಕೆ ಬ್ರದರ್ಸ್ ಹೆಸರು ಸೂಚಿಸಿದ್ದರು. ಈ ಚುನಾವಣೆಗೆ ಡಿಕೆ ಬೆಂಬಲಿಗರು ಆಸಕ್ತಿ ತೋರಿಲ್ಲ ಎಂದು ತಿಳಿದು ಬಂದಿದೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಧ್ಯ ಡಿ.ಕೆ. ಶಿವಕುಮಾರ್ ಅವರು ಅಕ್ರಮ ಹಣ ಹಾಗೂ ಆಸ್ತಿ ಪತ್ತೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿ, ತಿಹಾರ್ ಜೖಲಿನಲ್ಲಿದ್ದಾರೆ. ಜಾಮೀನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಅ. 25 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.
 

click me!