ಆತ್ಮಹತ್ಯೆಗೆ ಶರಣಾದ ರಮೇಶ್‌ ಹುಲುವಾಡಿ ಅಳಿಯ

Published : Oct 13, 2019, 10:32 AM IST
ಆತ್ಮಹತ್ಯೆಗೆ ಶರಣಾದ ರಮೇಶ್‌ ಹುಲುವಾಡಿ ಅಳಿಯ

ಸಾರಾಂಶ

ಆತ್ಮಹತ್ಯೆಗೆ ಶರಣಾದ ಕಾಂಗ್ರೆಸ್ ಮುಖಂಡ ಪರಮೇಶ್ವರ್ ಅವರ ಪಿಎ ರಮೇಶ್ ಅವರು ಹುಲುವಾಡಿ ಅಳಿಯ ಎನ್ನುವ ಸಂಗತಿ ತಿಳಿದು ಬಂದಿದೆ. 

ಚನ್ನಪಟ್ಟಣ [ಅ.13]:  ಶನಿವಾರ ಆತ್ಮಹತ್ಯೆಗೆ ಶರಣಾದ ಜಿ. ಪರಮೇಶ್ವರ್‌ ಆಪ್ತ ಸಹಾಯಕ ರಮೇಶ್‌ ಅವರ ಪತ್ನಿ ತಾಲೂಕಿನ ಹುಲುವಾಡಿ ಗ್ರಾಮದವರು ಎಂಬ ಸಂಗತಿ ತಿಳಿದು ಬಂದಿದೆ.

ರಮೇಶ್‌ ಪತ್ನಿ ಸೌಮ್ಯ ಹುಲುವಾಡಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ನಾಗಮ್ಮ ಮತ್ತು ರಾಮಚಂದ್ರಯ್ಯ ದಂಪತಿಯ ಪುತ್ರಿ. ರಮೇಶ್‌ ನಗರದ ಹೊಸ ನ್ಯಾಯಾಲಯದ ಸಮೀಪ ಸ್ವಂತ ಮನೆಯನ್ನು ನಿರ್ಮಿಸಿದ್ದು, ಎರಡು ವರ್ಷಗಳ ಹಿಂದೆ ಈ ಮನೆಯ ಗೃಹಪ್ರವೇಶ ಸಮಾರಂಭ ನಡೆದಾಗ ಅಂದಿನ ಗೃಹಸಚಿವರಾಗಿದ್ದ ಜಿ. ಪರಮೇಶ್ವರ್‌ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರಿನಲ್ಲೇ ವಾಸವಾಗಿದ್ದ ರಮೇಶ್‌, ಇಲ್ಲಿನ ಮನೆಯನ್ನು ಬಾಡಿಗೆಗೆ ನೀಡಿದ್ದರು. ಕುಟುಂಬದ ಸಮಾರಂಭ, ಕಾರ್ಯಕ್ರಮಗಳಿಗೆ ಮಾತ್ರ ಬಂದು ಹೋಗುತ್ತಿದ್ದರು. ರಮೇಶ್‌ ಸಾವಿನ ಹಿನ್ನೆಲೆಯಲ್ಲಿ ಅವರ ಅತ್ತೆ ಮನೆಯಲ್ಲಿ ದುಃಖ ಮಡುಗಟ್ಟಿದೆ.

PREV
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!