ಓದಿದ್ದು ಎಸ್ಸೆಸ್ಸೆಲ್ಸಿ ಆದರೂ ಬುದ್ಧಿವಂತಿಕೆಯಿಂದ ಬೆಳೆದ ವ್ಯಕ್ತಿ

By Kannadaprabha NewsFirst Published Oct 13, 2019, 7:47 AM IST
Highlights

ಪರಮೇಶ್ವರ್ ಪಿಎ ರಮೇಶ್ ಓದಿದ್ದು ಕೇವಲ ಎಸ್ ಎಸ್ ಎಲ್ ಸಿ ಆದರೂ ಬುದ್ದಿವಂತಿಕೆಯಿಂದ ಘಟಾನುಘಟಿ ನಾಯಕರ ಜೊತೆ ಸೇರಿ ಬೆಳೆದಿದ್ದರು.

ರಾಮ​ನ​ಗರ [ಅ.13]:  ಆದಾಯ ತೆರಿಗೆ ಅಧಿ​ಕಾ​ರಿ​ಗಳ ದಾಳಿಗೆ ಹೆದರಿ ಆತ್ಮ​ಹ​ತ್ಯೆಗೆ ಶರ​ಣಾ​ಗಿ​ದ್ದಾರೆ ಎನ್ನ​ಲಾದ ಮಾಜಿ ಉಪಮುಖ್ಯಮಂತ್ರಿ ಜಿ.ಪ​ರ​ಮೇ​ಶ್ವರ್‌ ಅವರ ಆಪ್ತ ಸಹಾ​ಯಕ ರಮೇಶ್‌ ಓದಿದ್ದು ಕೇವಲ ಎಸ್ಸೆ​ಸ್ಸೆಲ್ಸಿ ವರೆಗೆ ಆದರೂ, ಬಹಳ ಬುದ್ಧಿವಂತರಾಗಿದ್ದರು. ಇದೇ ಅವರನ್ನು ಉಪಮುಖ್ಯಮಂತ್ರಿಯ ಆಪ್ತ ಸಹಾಯಕನ ಸ್ಥಾನದ ವರೆಗೂ ಕರೆದೊಯ್ದಿತ್ತು.

ಮೂಲತಃ ರಾಮ​ನ​ಗರ ತಾಲೂ​ಕಿನ ಮೆಳೇ​ಹಳ್ಳಿಯ ಸಂಪ​ಗಯ್ಯ ಮತ್ತು ಸಾವಿ​ತ್ರಮ್ಮ ದಂಪ​ತಿಯ ಮೂರನೇ ಪುತ್ರ​ನಾದ ರಮೇಶ್‌, 2004ರಲ್ಲಿ ಧರಂಸಿಂಗ್‌ ಮುಖ್ಯ​ಮಂತ್ರಿ​ಯಾ​ಗಿದ್ದ ವೇಳೆ ಕರ್ನಾ​ಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆ​ಪಿ​ಸಿ​ಸಿ​) ​ಕ​ಚೇ​ರಿಯಲ್ಲಿ ಶೀಘ್ರ​ ಲಿ​ಪಿ​ಗಾರ (ಸ್ಟೆ​ನೋ​)​ಆಗಿ ಸೇರಿ​ಕೊಂಡಿ​ದ್ದರು. ನಂತರ ಪ​ರ​ಮೇಶ್ವರ್‌ ಕೆಪಿ​ಸಿಸಿ ಅಧ್ಯ​ಕ್ಷ​ರಾದ ಬಳಿಕ ಅವ​ರಿಗೆ ರಮೇಶ್‌ ಆಪ್ತ​ರಾದರು. 18 ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದ ರಮೇಶ್‌, ಕಂಪ್ಯೂಟರ್‌ ಆಪರೇಟರ್‌ ಆಗಿ, ನಂತರ ಪರಮೇಶ್ವರ್‌ ಅವರ ಆಪ್ತ ಸಹಾಯಕನಾಗಿ ಸುಮಾರು ಎಂಟು ವರ್ಷ ಪರಮೇಶ್ವರ್‌ ಅವರೊಂದಿಗೆ ಕಾರ್ಯನಿರ್ವಹಿಸಿದ್ದರು.

ರಮೇಶ್‌ ಎಸ್ಸೆ​ಸ್ಸೆ​ಲ್ಸಿ​ಯಲ್ಲಿ ಅನು​ತ್ತೀ​ರ್ಣ​ರಾಗಿದ್ದರಿಂದ ಉದ್ಯೋ​ಗ ಅರಸಿ ಬೆಂಗ​ಳೂರು ಸೇರಿದ ರಮೇಶ್‌ ಕಾಮಾಕ್ಷಿ​ಪಾ​ಳ್ಯ​ದಲ್ಲಿ ಸಣ್ಣ​ದಾದ ರೂಮ್‌ ಮಾಡಿ​ಕೊಂಡು ಸಹೋ​ದರ ಸಂಬಂಧಿಯ ಜತೆ​ಯ​ಲ್ಲಿ​ದ್ದರು. ವಿಧಾ​ನ​ಸೌ​ಧದ ಎಲ್‌ಎಚ್‌ ಬಳಿ ಜೆರಾಕ್ಸ್‌ ಅಂಗ​ಡಿ​ಯೊಂದ​ರಲ್ಲಿ ಟೈಪಿಂಗ್‌ ಕೆಲ​ಸಕ್ಕೆ ಸೇರಿ​ಕೊಂಡರು. ನಂತರ ಹೇಗೋ ಕಾಂಗ್ರೆಸ್‌ ಕಚೇರಿ ಸೇರಿಕೊಂಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಊರಿನ ಪಾಲಿಗೆ ಅಚ್ಚು ಮೆಚ್ಚು: ಕೆಪಿಸಿಸಿ ರಮೇಶ್‌ ಎಂದರೆ ಕಾಂಗ್ರೆಸ್‌ ಪಾಳಯದ ಮುಖಂಡರಿಗೆ ಆಪ್ತ​ವಾಗಿ ಸ್ಪಂದಿಸುವ ಸರಳ ವ್ಯಕ್ತಿಯಾಗಿದ್ದರು. ರಾಮನಗರ ಜಿಲ್ಲೆಯ ಕಾಂಗ್ರೆಸ್‌ ಮುಖಂಡರಿಗಂತೂ ಅಚ್ಚುಮೆಚ್ಚಿನ ಸ್ನೇಹಿತನಾಗಿ ಗುರುತಿಸಿಕೊಂಡಿದ್ದರು. ಎಲ್ಲರನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದ ರಮೇಶ್‌ ಹುಟ್ಟೂರಿನ ಬಗ್ಗೆ ಹೆಚ್ಚು ಕಾಳಜಿ ಇರಿಸಿಕೊಂಡಿದ್ದರು ಎನ್ನುತ್ತಾರೆ ಅವರ ಸ್ನೇಹಿತರು, ಸಂಬಂಧಿಕರು.

ನಾನು ಮತ್ತು ರಮೇಶ್‌ ಇಬ್ಬರು ಸಹ ಎಸ್ಸೆಸ್ಸೆಲ್ಸಿ ಫೇಲ್‌ ಆಗಿದ್ದೇವು. ಬಳಿಕ ಬೆಂಗಳೂರು ಸೇರಿ ಕಷ್ಟದ ದಿನ​ಗ​ಳನ್ನು ಎದು​ರಿ​ಸಿ​ದೆವು. ಸಾಕಷ್ಟುಪರಿ​ಶ್ರಮ ಪಟ್ಟು ರಮೇಶ್‌ ಮೇಲೆ ಬಂದ. ಎಲ್ಲ​ರೊಂದಿಗೆ ವಿಶ್ವಾ​ಸ​ದಿಂದ ನಡೆ​ದು​ಕೊ​ಳ್ಳು​ತ್ತಿ​ದ್ದ. ಅವನ ಸಾವು ನಿಜಕ್ಕೂ ನೋವು ತಂದಿ​ದೆ.

-ಪ್ರಕಾಶ್‌, ಮೃತ ರಮೇಶ್‌ ಸಂಬಂಧಿ.

click me!