ಲೋಕಲ್ ಫೈಟ್ : ಡಿಕೆಶಿ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ

By Kannadaprabha News  |  First Published Nov 6, 2019, 8:54 AM IST

ಲೋಕಲ್ ಫೈಟ್ ನಲ್ಲಿ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 


ಕನಕಪುರ [ನ.06]: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಸ್ವಕ್ಷೇತ್ರ ಕನಕಪುರದ ನಗರಸಭೆಯ 7 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನಕಪುರ ನಗರಸಭೆಯಲ್ಲಿನ 31 ವಾರ್ಡ್‌ಗಳ ಪೈಕಿ 7 ಸ್ಥಾನಗಳನ್ನು ಕಾಂಗ್ರೆಸ್‌ ನಿರಾಯಾಸವಾಗಿ ಗೆದ್ದಿದ್ದು, ಇನ್ನುಳಿದ 24 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪುರಸಭೆ ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಪಟ್ಟಣ ಪಂಚಾಯತ್‌ನಲ್ಲಿ ತಲಾ ಒಂದು ವಾರ್ಡ್‌ನಲ್ಲಿ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಸರ್ವಾನುಮತದಿಂದ ಚುನಾಯಿತರಾಗಿದ್ದಾರೆ.

Tap to resize

Latest Videos

undefined

ಮತದಾನಕ್ಕೆ ಇವಿಎಂ ಬಳಕೆ:  ಮತದಾನದ ವೇಳೆ ಒಂದೇ ಹೆಸರಿನ ಅಭ್ಯರ್ಥಿಗಳಿಂದ ಉಂಟಾಗುವ ಗೊಂದಲಗಳಿಗೆ ಬ್ರೇಕ್‌ ಹಾಕಲು ಆಯೋಗ ಮುಂದಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಳಕೆಯಾಗುವ ಇವಿಎಂಗಳಲ್ಲಿ ಹುರಿಯಾಳುಗಳ ಹೆಸರಿನ ಜೊತೆಗೆ ಅವರ ಇತ್ತೀಚಿನ ಭಾವಚಿತ್ರ ಸಹ ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದ ಒಂದೇ ವಾರ್ಡ್‌ನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸಿದರೂ ಮತದಾರರಿಗೆ ಗೊಂದಲ ಮೂಡುವುದಿಲ್ಲ. ಈ ಚುನಾವಣೆಯಲ್ಲಿ ಮತದಾರರ ಎಡಗೈ ಉಂಗುರ ಬೆರಳಿಗೆ ಶಾಯಿ ಹಾಕಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಲ್ ಫೈಟ್ :  ರಾಜ್ಯದಲ್ಲಿ ವಿಧಾನಸಭಾ ಉಪ ಚುನಾವಣೆಗೂ ಮುನ್ನ ಲೋಕಲ್‌ ಫೈಟ್‌ಗೆ ಅಖಾಡ ಸಿದ್ಧವಾಗಿದ್ದು, 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಕಣದಲ್ಲಿ 1587 ಅಭ್ಯರ್ಥಿಗಳು ಸಮರಕ್ಕೆ ಸಜ್ಜಾಗಿದ್ದಾರೆ.

ರಾಜ್ಯದ ಎರಡು ಮಹಾನಗರ ಪಾಲಿಕೆಯ 105 ವಾರ್ಡ್‌, 6 ನಗರಸಭೆಗಳ 194 ವಾರ್ಡ್‌, 3 ಪುರಸಭೆಗಳ 69 ವಾರ್ಡ್‌, 3 ಪಟ್ಟಣ ಪಂಚಾಯಿತಿಯ 50 ವಾರ್ಡ್‌ ಸೇರಿದಂತೆ ಒಟ್ಟು 418 ವಾರ್ಡ್‌ಗಳ ಪೈಕಿ 9 ವಾರ್ಡ್‌ಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಉಳಿದ 409 ವಾರ್ಡ್‌ಗಳಿಗೆ ನ.12ರಂದು ಚುನಾವಣೆ ನಡೆಯಲಿದೆ. ಇದಕ್ಕಾಗಿ 1,388 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 13,04,614 ಮತದಾರರು ಇದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಖಾಡದಲ್ಲಿರುವ ಹುರಿಯಾಳುಗಳು:  ಸ್ಥಳೀಯ ಸಂಸ್ಥೆಗಳ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್‌-386, ಬಿಜೆಪಿ-363, ಜೆಡಿಎಸ್‌-233, ಸಿಪಿಐ-7, ಸಿಪಿಎಂ-12, ಬಿಎಸ್ಪಿ-24, ಎನ್‌ಸಿಸಿ-9, ಜೆಡಿಯು-5, ಎಸ್‌ಡಿಪಿಐ-16, ಕೆಪಿಜೆಪಿ-2, ಭಾರತೀಯ ಪ್ರಜಾಪಕ್ಷ-31, ಡಬ್ಲ್ಯುಪಿಐ-3, ಕರ್ನಾಟಕ ರಾಷ್ಟ್ರ ಸಮಿತಿ-2, ಐಯುಎಂಎಲ್‌-4, ಆರ್‌ಪಿಐ-15, ಪಕ್ಷೇತರರು 475 ಸೇರಿದಂತೆ ಒಟ್ಟಾರೆ 1587 ಅಭ್ಯರ್ಥಿಗಳು ಉಳಿದಿದ್ದಾರೆ.

ನವೆಂಬರ್ 06ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

click me!