ಕೈ-ಜೆಡಿಎಸ್ ಹೊಂದಾಣಿಕೆ : ಚುನಾ​ವಣೆ ಕಣದಿಂದ 26 ನಾಮ​ಪತ್ರ ವಾಪಸ್‌

By Kannadaprabha NewsFirst Published Nov 5, 2019, 10:40 AM IST
Highlights

ಚುನಾವನೆಯಲ್ಲಿ ಸ್ಪರ್ಧೆ ಮಾಡಿದ್ದ 26 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಇಲ್ಲಿ ಚುನಾವಣೆ ಎದುರಿಸುತ್ತಿವೆ. ಯಾವ ಚುನಾವಣೆ ಇಲ್ಲಿದೆ ಸಂಪೂರ್ಣ ಮಾಹಿತಿ

ಕನಕಪುರ [ನ.05]:  ಕನಕಪುರ ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ್ದ  26 ಮಂದಿ ನಾಮಪತ್ರ ವಾಪಸ್ಸು ಪಡೆದಿದ್ದಾರೆ. 

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆಯಾಗಿದ್ದು, ಕಣದಲ್ಲಿ ಕಾಂಗ್ರೆಸ್‌ನಿಂದ 18, ಜೆಡಿ​ಎಸ್‌ನಿಂದ 4 ಮಂದಿ ಸ್ಪರ್ಧೆಯಲ್ಲಿದ್ದರೆ, ಬಿಜೆಪಿಯಿಂದ 23, ಬಿಎಸ್ಪಿಯಿಂದ 6, ಪಕ್ಷೇತರರು 6 ಮಂದಿ ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.

ಅವಿರೋಧ ಆಯ್ಕೆ:

ಜೆಡಿ​ಎಸ್‌ - ಕಾಂಗ್ರೆಸ್‌ ನಡುವೆ ಸ್ಥಾನ ಹೊಂದಾಣಿಕೆಯಾದ ಹಿನ್ನೆಲೆಯಲ್ಲಿ ನಗರಸಭೆಯ 31 ಸ್ಥಾನಗಳ ಪೈಕಿ ಕಾಂಗ್ರೆಸ್‌ ಪಕ್ಷದಿಂದ 7 ಹಾಗೂ ಜೆಡಿಎಸ್‌ ಪಕ್ಷದಿಂದ ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2ನೇ ವಾರ್ಡ್‌ನಿಂದ ಎಂ.ಕಾಂತರಾಜು, 12ನೇ ವಾರ್ಡ್‌ನ ಕೆ.ರಾಜು, 19ನೇ ವಾರ್ಡಿನ ಮಕ್ಬೂಲ್‌ ಪಾಷ, 23ನೇ ವಾರ್ಡಿನ ಪುಟ್ಟಲಕ್ಷ್ಮಮ್ಮ, 27ನೇ ವಾರ್ಡಿನ ಮೋಹನ್‌, 29ನೇ ವಾರ್ಡಿನ ಪದ್ಮಮ್ಮ, 31ನೇ ವಾರ್ಡಿನ ಸುಲ್ತಾನಾಬಾನು ಕಾಂಗ್ರೆಸ್‌ ಪಕ್ಷದಿಂದ ಅವಿರೋಧವಾಗಿ ಆಯ್ಕೆಯಾದರೆ, 10ನೇ ವಾರ್ಡಿನಿಂದ ಜೆಡಿ​ಎಸ್‌ನ ನೀಲಮ್ಮ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

click me!