ಅನೈತಿಕ ಚಟುವಟಿಕೆಗಳ ತಾಣವಾದ Arkavathy Layout

By Suvarna News  |  First Published Jun 14, 2022, 6:27 PM IST

ರಾಮನಗರ ಪ್ರದೇಶದ ಕೂಗಳತೆ ದೂರದಲ್ಲಿ ಜನರಿಗೆ ರಿಯಾಯಿತಿ ದರದಲ್ಲಿ ನಿವೇಶನ ಕೊಡಬೇಕೆಂದು ನಿರ್ಮಿಸಿದ ಬಡಾವಣೆ ಇಪ್ಪತ್ತು ವರ್ಷಗಳೆ ಕಳೆದರೂ  ಮೂಲ ಭೂತ ಸೌಕರ್ಯವಿಲ್ಲದೇ ಕುಡುಕರ ಅಡ್ಡೆಯಾಗಿದೆ.


ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್ 

ರಾಮನಗರ (ಜೂ.14): ರಾಮನಗರ (ramanagara) ಪ್ರದೇಶದ ಕೂಗಳತೆ ದೂರದಲ್ಲಿ ಜನರಿಗೆ ರಿಯಾಯಿತಿ ದರದಲ್ಲಿ ನಿವೇಶನ ಕೊಡಬೇಕೆಂದು ನಿರ್ಮಿಸಿದ ಬಡಾವಣೆ ಅದು, ಬಡಾವಣೆ ನಿರ್ಮಿಸಿ 20 ವರ್ಷ ಕಳೆದ್ರೂ ಆ ಬಡಾವಣೆಯಲ್ಲಿ ಮೂಲಭೂತ ಸೌಕರ್ಯ ಇಲ್ಲದೇ, ನಿವೇಶನ ಕೊಂಡವರು ಮನೆ ಕಟ್ಟಲು ಹಿಂದೇಟು ಹಾಕ್ತಿದ್ದಾರೆ.

Tap to resize

Latest Videos

 ಅಲ್ಲಲ್ಲೇ ಬಿದ್ದಿರೋ ಮದ್ಯದ ಬಾಟಲಿಗಳು, ಕಾಡಿನಂತೆ ಕಾಣುವ ಪ್ರದೇಶ, ಸಂಪರ್ಕವಿಲ್ಲದ ವಿದ್ಯುತ್ ಕಂಬಗಳು ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು,  ರಾಮನಗರ ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಜೀಗೆನಹಳ್ಳಿ ಗ್ರಾಮದಲ್ಲಿ,  ಕಳೆದ 20 ವರ್ಷಗಳ ಹಿಂದೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ (ramanagara urban development authority) ಅಡಿಯಲ್ಲಿ ಸುಮಾರು 45 ಎಕರೆ ಪ್ರದೇಶದಲ್ಲಿ 720 ಕ್ಕೂ ಹೆಚ್ಚು ನಿವೇಶನಗಳನ್ನು ನಿರ್ಮಿಸಿದ್ರು, ರಾಮನಗರ ಜನತೆಗೆ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆ ಮಾಡುವ ಕನಸು ಹೊತ್ತು ನಿರ್ಮಿಸಿದ ಬಡಾವಣೆ ಇದಾಗಿತ್ತು.

ರಾಯಚೂರು; ಕಲುಷಿತ ನೀರು ಸೇವನೆ ಪ್ರಕರಣ, ಸಾವಿನ ಸಂಖ್ಯೆ 6ಕ್ಕೆ ಏರಿಕೆ!

ಆದ್ರೆ ಬಡಾವಣೆ ನಿರ್ಮಿಸಿ 20 ವರ್ಷ ಕಳೆದ್ರೂ ಇದುವರೆಗೂ ಆ ಬಡಾವಣೆಗೆ ಮೂಲಭೂತ ಸೌಕರ್ಯಗಳಾದ ವಿದ್ಯುತ್ ಸಂಪರ್ಕ, ವಾಟರ್ ಸಪ್ಲೈ, ಯುಜಿಡಿ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡದೇ ಪ್ರಾಧಿಕಾರ ನಿವೇಶನ ಕೊಂಡ ಮಾಲೀಕರಿಗೆ ವಂಚಿಸುತ್ತಿದೆ. 

ಅಂದಹಾಗೆ, ಈ ಬಡಾವಣೆಯಲ್ಲಿ ನಿವೇಶನ ಕೊಂಡವರು ಸ್ವಂತ ಸೂರು ಕಟ್ಟಿಕೊಳ್ಳದೇ ಇನ್ನೂ ಬಾಡಿಗೆ ಮನೆಯಲ್ಲೇ ವಾಸ ಮಾಡ್ತಿದ್ದಾರೆ. ಬಡಾವಣೆಗೆ ಮೂಲಭೂತ ಸೌಕರ್ಯಗಳ ಕೊರತೆ ಒಂದು ಕಡೆ ಆದ್ರೆ ಮತ್ತೊಂದು ಕಡೆ ಸಂಜೆ ಆದ್ರೆ ಸಾಕು ಹುಡುಗರು ಗುಂಪು ಕಟ್ಟಿಕೊಂಡು ಬಡಾವಣೆಯಲ್ಲಿ ಎಣ್ಣೆ ಪಾರ್ಟಿ ನಡೆಸಿ ಕುಡುಕರ ಅಡ್ಡೆಯಾಗಿ ನಿರ್ಮಾಣವಾಗಿದೆ.

Ballari ಪಾಲಿಕೆಯ ಆಯುಕ್ತೆಯ ದಿಟ್ಟ ನಿರ್ಧಾರಕ್ಕೆ, ಅಧಿಕಾರಿಗಳಿಗೆ ನಡುಕ!

ಬಡಾವಣೆ ನಿರ್ಮಾಣವಾಗಿ 20 ವರ್ಷಗಳೇ ಕಳೆದ್ರೂ ಪ್ರಾಧಿಕಾರ ಮಾತ್ರ ಅಭಿವೃದ್ಧಿ ಮಾಡುವ ಚಿಂತನೆ ಮಾಡಿಲ್ಲ,ಮತ್ತೊಂದು ಕಡೆ ಇನ್ನೂ ಕೆಲವರು  ಅರ್ಕಾವತಿ ಬಡಾವಣೆಯ ಪಕ್ಕದಲ್ಲಿರುವ ಖಾಸಗಿ ಬಡಾವಣೆಯ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡು ಮನೆ ಕಟ್ಟುತ್ತಿದ್ದಾರೆ. ಇತ್ತ ನಿವೇಶನ ಕೊಂಡವರು ಮಾತ್ರ ಮನೆ ಕಟ್ಟಲು ಆಗದೇ ಪ್ರಾಧಿಕಾರಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ.

ಒಟ್ಟಾರೆ, ಕಷ್ಟ ಪಟ್ಟು ನಿವೇಶನ ಕೊಂಡ ಜನ್ರೂ ಇದೀಗ ಮನೆ ಕಟ್ಟಿಕೊಳ್ಳಲು ಪರದಾಡ್ತಿದ್ದಾರೆ ಇನ್ನಾದರೂ ಪ್ರಾಧಿಕಾರ ಇತ್ತ ಕಡೆ ಗಮನಹರಿಸಿ ಮೂಲ ಸೌಕರ್ಯಗಳನ್ನು ಕೊಟ್ಟು ಬಡಾವಣೆ ಅಭಿವೃದ್ಧಿ ಮಾಡಬೇಕಾಗಿದೆ.

click me!