ಕನಕಪುರದಲ್ಲಿ ಡಿಕೆಶಿ ಅದ್ದೂರಿ ಸ್ವಾಗತಕ್ಕೆ ಬ್ರೇಕ್

By Web Desk  |  First Published Oct 28, 2019, 8:35 AM IST

ಜೈಲಿನಿಂದ ಬಿಡುಗಡೆಯಾದ ಬಳಿಕ ತಮ್ಮೂರು ಕನಕಪುರಕ್ಕೆ ಮೊದಲ ಬಾರಿಗೆ ತೆರಳುತ್ತಿರುವ ಡಿಕೆ ಶಿವಕುಮಾರ್ ಅವರ ಅದ್ದೂರಿ ಸ್ವಾಗತಕ್ಕೆ ಬ್ರೇಕ್ ಬಿದ್ದಿದೆ. 


ರಾಮನಗರ [ಅ.28]: ಜೈಲಿನಿಂದ ಬಿಡುಗಡೆಯಾಗಿರುವ ಡಿ.ಕೆ.ಶಿವಕುಮಾರ್ ಅವರು ಇಂದು ಕನಕಪುರಕ್ಕೆ ಆಗಮಿಸುತ್ತಿದ್ದು, ಆದರೆ ಅವರ ಅದ್ದೂರಿ ಸ್ವಾಗತಕ್ಕೆ ಬ್ರೇಕ್ ಬಿದ್ದಿದೆ. 

ಅಭಿಮಾನಿಗಳು ಡಿಕೆಶಿ ಬ್ರದರ್ಸ್ ಅದ್ದೂರಿ ಸ್ವಾಗತಕ್ಕೆ ಸಜ್ಜಾಗಿದ್ದರು. ಆದರೆ ಇದಕ್ಕೆ ತಡೆಯಾಗಿದೆ. ಇದರಿಂದ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. 

Tap to resize

Latest Videos

ಕನಕಪುರದಲ್ಲಿ ನಗರಸಭೆ ಚುನಾವಣೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ನೀತಿ ಸಂಹಿತೆ ಹಿನ್ನೆಲೆ ಪಕ್ಷಗಳು ಕಾರ್ಯಕ್ರಮ ನಡೆಸುವುದಕ್ಕೆ ತಡೆ ಒಡ್ಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾರ್ಯಕರ್ತರು ಪಟಾಕಿ ಸಿಡಿಸುವಂತಿಲ್ಲ. ಅಲ್ಲದೇ ಯಾವುದೇ ರೀತಿಯ ಮೆರವಣಿಗೆಯನ್ನೂ ಮಾಡುವಂತಿಲ್ಲ. ಬೈಕ್ ಜಾಥಾ ಕೂಡ ಮಾಡುವಂತಿಲ್ಲ. ಇದರಿಂದ ತಮ್ಮ ನಾಯಕರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಾಧ್ಯವಾಗುತ್ತಿಲ್ಲವೆಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ. 

ಕಳೆದ ಎರಡು ದಿನಗಳ ಹಿಂದೆ ತಿಹಾರ್ ಜೈಲಿನಿಂದ ಡಿ.ಕೆ.ಶಿವಕುಮಾರ್ ಬಿಡುಗಡೆಯಾಗಿ ಬೆಂಗಳೂರಿಗೆ ಆಗಮಿಸಿದ್ದು, ಈ ವೇಳೆ ಅಭಿಮಾನಿಗಳು, ಕಾರ್ಯಕರ್ತರು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದರು. ಆದರೆ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತಕ್ಕೆ ಬ್ರೇಕ್ ಹಾಕಲಾಗಿದೆ. 

ಅಕ್ಟೋಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!