ಜಗದ್ಗುರು ಶಿವಾನಂದ ಮಠ ಸ್ವಾಮೀಜಿ, ರಾಯಚೂರು ಮುಖ್ಯ ಶಿಕ್ಷಕ ದೇವೇಂದ್ರಪ್ಪ ದುರಂತ ಅಂತ್ಯ

Published : Mar 19, 2026, 11:58 AM IST
Swamiji Found dead in Raichur

ಸಾರಾಂಶ

ಜಗದ್ಗುರು ಶಿವಾನಂದ ಮಠ ಸ್ವಾಮೀಜಿ, ರಾಯಚೂರು ಮುಖ್ಯ ಶಿಕ್ಷಕ ದೇವೇಂದ್ರಪ್ಪ ದುರಂತ ಅಂತ್ಯ, ಬೆಳಗ್ಗೆಯಿಂದ ಸಂಜೆ ವರೆಗೆ ಶಿಕ್ಷಕ ವೃತ್ತಿ,ಸಂಜೆಯಿಂದ ರಾತ್ರಿ ವರೆಗೆ ಸ್ವಾಮೀಜಿಯಾಗಿ ಪ್ರವಚನ ನೀಡುತಿದದ್ದ ದೇವೇಂದ್ರಪ್ಪ ಆತ್ಮ**ತ್ಯೆ ಮಾಡಿಕೊಂಡಿದ್ದಾರೆ.

ರಾಯಚೂರು (ಮಾ.19) ಶಿಕ್ಷಕನಾಗಿ, ಸ್ವಾಮೀಜಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ರಾಯಚೂರಿನ ದೇವೇಂದ್ರಪ್ಪ ಮುಳ್ಳೂರು ದುರಂತ ಅಂತ್ಯಕಂಡಿದ್ದಾರೆ. ಬೆಳಗ್ಗೆಯಿಂದ ಸಂಜೆ ವರೆಗೆ ಶಿಕ್ಷಕ ವೃತ್ತಿ,ಸಂಜೆಯಿಂದ ರಾತ್ರಿ ವರೆಗೆ ಸ್ವಾಮೀಜಿಯಾಗಿ ಪ್ರವಚನ ನೀಡುತ್ತಿದ್ದ ದೇವಂದ್ರಪ್ಪ ಮುಳ್ಳೂರು ಸಾವು ಭಕ್ತರಿಗೆ ಆಘಾತ ನೀಡಿದೆ. ಕಳೆದ ಕೆಲ ತಿಂಗಳುಗಳಿಂದ ಸತತವಾಗಿ ಸಂಕಷ್ಟ ಎದುರಿಸಿದ್ದ ದೇವೇಂದ್ರಪ್ಪ ಮುಳ್ಳೂರು ಬದುಕು ಅಂತ್ಯಗೊಳಿಸಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಇಜೆ ಬಸ್ಸಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ಶಿವಾನಂದ ಮಠ ಕಟ್ಟಿದ ದೇವೇಂದ್ರ ಮುಳ್ಳೂರು, ಅದೇ ಮಠದಲ್ಲಿ ಅಂತ್ಯ

ಕಳೆದ ಹಲವು ವರ್ಷಗಳಿಂದ ರಾಯಚೂರಿನ ಇಜೆ ಬಸ್ಸಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ದೇವೇಂದ್ರಪ್ಪ ಮುಳ್ಳೂರು, ಇದೇ ಗ್ರಾಮದಲ್ಲಿ ಜಗದ್ಗುರು ಶಿವಾನಂದ ಮಠ ಕಟ್ಟಿದ್ದರು. ಬೆಳಗ್ಗೆಯಿಂದ ಸಂಜೆವರಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ದೇವಂದ್ರಪ್ಪ ಮುಳ್ಳೂರು, ಸಂಜೆ ಬಳಿಕ ಮಠಜಲ್ಲಿ ಭಕ್ತರಿಗೆ ಆಶೀರ್ವಚನ ನೀಡುತ್ತಿದ್ದರು.ಗದಗ ಜಿಲ್ಲೆ ಗಜೇಂದ್ರಗಡ ತಾ. ಗುಳಗುಳ ಗ್ರಾಮದ ದೇವೇಂದ್ರಪ್ಪ ಶಿಕ್ಷಕನಾಗಿ, ಸ್ವಾಮೀಜಿಯಾಗಿ ಗುರುತಿಸಿಕೊಂಡಿದ್ದರು. ಶಿಕ್ಷಕ ಹುದ್ದೆ ಜೊತೆ ಸನ್ಯಾಸತ್ವ ಸ್ವೀಕರಿಸಿ ಅಪಾರ ಭಕ್ತವೃಂದಕ್ಕೆ ಗುರುಗಳಾಗಿದ್ದರು. ಜಗದ್ಗುರು ಶಿವಾನಂದ ಮಠದ ಭಜನಾ ಕೋಣೆಯಲ್ಲಿ ಸ್ವಾಮೀಜಿ ದೇವಂದ್ರಪ್ಪ ಮುಳ್ಳೂರು ಬದುಕು ಅಂತ್ಯಗೊಳಿಸಿದ್ದಾರೆ.

ಅಪಘಾತದಿಂದ ಖಿನ್ನತೆಗೆ ಜಾರಿದ್ದ ಮುಳ್ಳೂರು

ದೇವೇಂದ್ರಪ್ಪ ಮುಳ್ಳೂರು ಕೆಲದಿನಗಳಿಂದ ಮಾನಸವಾಗಿ ನೊಂದಿದ್ದರು. ಇತ್ತೀಚೆಗೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ದೇವಂದ್ರಪ್ಪ ಮುಳ್ಳೂರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಈ ಅಪಘಾತ ದೇವೇಂದ್ರಪ್ಪ ಮುಳ್ಳೂರಿಗೆ ಮಾನಸಿಕವಾಗಿ ತೀವ್ರ ಘಾಸಿ ಮಾಡಿತ್ತು. ಮಾನಸಿಕ ಹಿನ್ನಲೆಯಲ್ಲಿ ಬದುಕು ಅಂತ್ಯಗೊಳಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ತುರುವಿಹಾಳ ಪೊಲೀಸರು ಮಠದ ಭಜನಾ ಮಂದಿರದಲ್ಲಿ ಶವವಾಗಿದ್ದ ದೇವೇಂದ್ರ ಮುಳ್ಳೂರು ಮೃತದೇಹ ವಶಕ್ಕೆ ಪಡೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಮಠದ ಎಲ್ಲಾ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ.

 

PREV
Read more Articles on
click me!

Recommended Stories

ಬೇಸಿಗೆ ಮಳೆ: ಸಿಂಧನೂರಿನಲ್ಲಿ ಸಿಡಿಲು ಬಡಿದು 23 ವರ್ಷದ ಕುರಿಗಾಹಿ ದಾರುಣ ಸಾವು!
ರಾಜ್ಯದಲ್ಲಿ ಬೇಸಿಗೆ ಮಳೆ ಅವಾಂತರ: ಹೊತ್ತಿ ಉರಿದ ತೆಂಗಿನ ಮರ, ವ್ಯಕ್ತಿ ಸಿಡಿಲಿಗೆ ಬಲಿ, ಆಲಿಕಲ್ಲು ಮಳೆಗೆ ಭಾರಿ ಬೆಳೆ ಹಾನಿ