ರಾಯಚೂರು(ಏ.10) ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಿಕೆ, ಸಹಕಾರದಿಂದ ಸ್ವಾಮಿತ್ವ ಯೋಜನೆ ಯಶಸ್ವಿಗೊಳಿಸಲು ಸಾಧ್ಯ ಎಂದು ಗ್ರಾಮೀಣ ಶಾಸಕ ಬಸನಗೌಡ (Basavanagowda) ದದ್ದಲ್ ತಿಳಿಸಿದರು. ತಾಲೂಕಿನ ಸಿಂಗನೋಡಿ (Singanodi) ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಡ್ಲಂದೊಡ್ಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ಭೂಮಾಪನಾ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಾಮಿತ್ವ ಯೋಜನೆಯಡಿ ಡ್ರೋಣ್ ತಂತ್ರಜ್ಞಾನ (Drone Technology) ಆಧಾರಿತ ಗ್ರಾಮೀಣ ಆಸ್ತಿಗಳ ಮಾಲಿಕತ್ವದ ದಾಖಲೆ (ಎಫ್‌ಪಿಆರ್) ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರದೊಂದಿಗೆ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸ್ವಾಮಿತ್ವ ಯೋಜನೆ ಯಶಸ್ವಿಗೊಳಿಸಬೇಕು. ಗ್ರಾಮೀಣ ಭಾಗದಲ್ಲಿ ಜನರು ಅಧಿಕೃತವಾಗಿ ಆಸ್ತಿ ದಾಖಲೆಗಳನ್ನು ಹೊಂದುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸ್ವಾಮಿತ್ವ ಯೋಜನೆಯು ಅತ್ಯಂತ ಉಪಯೋಗಕಾರಿಯಾಗಿದೆ. ಗ್ರಾಮೀಣ ರೈತರು ಜಮೀನಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪಡೆಯುತ್ತಾರೆ. ಅದೇ ಮಾದರಿಯಲ್ಲಿ ಮನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನ ಅಧಿಕೃತವಾಗಿ ಹೊಂದಬೇಕು. ಇದರಿಂದಾಗಿ ಯಾವುದೇ ಸಮಸ್ಯೆ ಎದುರಾದರೂ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.
undefined
ರಾಯಚೂರಲ್ಲಿ ಎಗ್ಗಿಲ್ಲದೆ ನಡೀತಿದೆ ಅಕ್ರಮ ಮದ್ಯ ಮಾರಾಟ ದಂಧೆ..!
ಅನಕ್ಷರಸ್ಥರಾಗಿರುವ ರೈತರು ಅಗತ್ಯ ದಾಖಲೆಗಳನ್ನು ಪಡೆಯುವುದಕ್ಕಾಗಿ ನಾನಾ ರೀತಿಯಲ್ಲಿ ಕಷ್ಟಗಳನ್ನು ಅನುಭವಿಸುತ್ತಾರೆ. ಕಚೇರಿಗಳಿಗೆ ಅಲೆದಾಡುತ್ತಾರೆ, ಮಧ್ಯವರ್ತಿಗಳ ಹಾವಳಿಯಿಂದ ಹಣ ಕಳೆದುಕೊಳ್ಳುತ್ತಾರೆ. ಆದರೆ ಸ್ವಾಮಿತ್ವದಡಿ ದಾಖಲೆಗಳನ್ನು ಪಡೆದರೆ ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಂದ ಪಾರಾಗಬಹುದು ಎಂದರು.
ಭೂ ಮಾಪನ ಇಲಾಖೆ ತಪಾಸಕರಾದ ಭೀಮರಾಜ ಹವಲ್ದಾರ (Bhimaraj Havaldar) ಮಾತನಾಡಿ, ತಾಲೂಕಿನ ಶಾಖವಾದಿ, ಸಿಂಗನೋಡಿ, ಉಡಮಗಲ್ (Udamagal), ಪುರತಿಪ್ಲಿ, ಕಟಕನೂರು (katakanoor) , ಮಟಮಾರಿ (mataari)ಗ್ರಾಪಂ ವ್ಯಾಪ್ತಿಯ ಒಟ್ಟು 32 ಗ್ರಾಮಗಳಲ್ಲಿ ಮಾರ್ಕಿಂಗ್ ಕಾರ್ಯವು ಪೂರ್ಣಗೊಂಡಿದೆ. ಸರ್ವೇ ಆಫ್ ಇಂಡಿಯಾ ಸಹಯೋಗದಲ್ಲಿ 21 ಹಳ್ಳಿಗಳಲ್ಲಿ ಡ್ರೋಣ್ ಮೂಲಕ ಸರ್ವೇ ಮಾಡಲಾಗಿದೆ. ಇವುಗಳಲ್ಲಿ 18 ಗ್ರಾಮಗಳಲ್ಲಿ ಕರಡು ಆಸ್ತಿ ಮಾಲೀಕತ್ವದ ದಾಖಲೆ ಹಾಗೂ ನಕ್ಷೆ ವಿತರಿಸಲಾಗಿದೆ. ಅವುಗಳ ಪೈಕಿ ಅಂತಿಮವಾಗಿ ಐದು ಗ್ರಾಮಗಳ ಆಸ್ತಿಗಳ ಮಾಲೀಕತ್ವದ ದಾಖಲೆ ಹಾಗೂ ನಕ್ಷೆ ಸಿದ್ಧಗೊಂಡಿದ್ದು ಅದರಡಿ ವಡ್ಲಂದೊಡ್ಡಿ ಗ್ರಾಮದ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕಿ ರೇಷ್ಮಾ ಪಾಟೀಲ್ (Reshma Patil) , ತಾಪಂ ಇಒ ರಾಮರೆಡ್ಡಿ (RamareddY) ಮಾತನಾಡಿ, ಜಮೀನುಗಳಿಗೆ ಚೆಕ್ ಬಂದಿ, ಟಿಪ್ಪಣಿ, ನಕ್ಷೆ ಯಾವ ರೀತಿ ಇರುತ್ತದೇ ಅದೇ ಮಾದರಿಯಲ್ಲಿ ಮನೆಗಳಿಗೆ ಚೆಕ್ ಬಂದಿ ಇರುತ್ತದೆ. ಇದನ್ನು ಮಾಡಿಸುವುದರಿಂದ ಸರ್ಕಾರದಿಂದ ಸಾಲ ಇತರೆ ಸವಲತ್ತುಗಳು ಲಭ್ಯವಾಗಲಿವೆ. ಸವಲತ್ತುಗನ್ನು ಪಡೆದ ಫಲಾನುಭವಿಗಳು ಇಲಾಖೆ ಗಮಕ್ಕೆ ತಂದಲ್ಲಿ ನಾವು ಮಾಡಿರುವ ಕೆಲಸ-ಕಾರ್ಯಗಳ ಫಲಿತಾಂಶವು ನಮಗೆ ಲಭ್ಯವಾಗುತ್ತದೆ ಎಂದರು.
Raichur: ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರವಾಗಿ ಬಸನಗೌಡ ದದ್ದಲ್ ಅಸಮಾಧಾನ
ಈ ಸಂದರ್ಭದಲ್ಲಿ ಸಿಂಗನೋಡಿ ಗ್ರಾಪಂ ಅಧ್ಯಕ್ಷೆ ಅಂಜನಮ್ಮ(Anjanamma) , ಜಿಪಂ ಮುಖ್ಯ ಲೆಕ್ಕಾಧಿಕಾರಿ ಹಾಗೂ ಸ್ವಾಮಿತ್ವ ಯೋಜನೆ ನೋಡಲ್ ಅಧಿಕಾರಿ ನಾಗರಾಜ ನಾಯಕ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಬಾಲಪ್ಪಗೌಡ ಪಾಟೀಲ್, ಪಿಡಿಒ ವೆಂಟಕೇಶ, ಎಡಿಪಿಆರ್ ಅಣ್ಣಾರಾವ್ ಇದ್ದರು. 09ಕೆಪಿಆರ್‌ಸಿಆರ್01:ರಾಯಚೂರು ತಾಲೂಕಿನ ವಡ್ಲಂದೊಡ್ಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಫಲಾನುಭವಿಗಳಿಗೆ ಸ್ವಾಮಿತ್ವ ಯೋಜನೆಯಡಿ ಡ್ರೋಣ್ ತಂತ್ರಜ್ಞಾನ ಆಧಾರಿತ ಗ್ರಾಮೀಣ ಆಸ್ತಿಗಳ ಮಾಲಿಕತ್ವದ ದಾಖಲೆ ವಿತರಿಸಿದರು.