ಕೊಪ್ಪಳ ಸಂಸದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

By Web Desk  |  First Published Oct 16, 2019, 3:14 PM IST

ಬಸನಗೌಡ ತುವಿರಹಾಳ ಅವರಿಗೆ ಉಪ ಕದನದಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಗುವ ಲಕ್ಷಣಗಳು ಕಡಿಮೆಯಾಗುತ್ತಿವೆ| ಕಳೆದ ಬಾರಿಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್‌ ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುವಿರಹಾಳ 213 ಮತಗಳ ಅಂತರದಿಂದ ಸೋತಿದ್ದರು| ಈಗಾಗಲೆ ಕಾಡಾ ಅಧ್ಯಕ್ಷರನ್ನಾಗಿ ಬಸನಗೌಡರನ್ನು ನೇಮಸಿ ಸರ್ಕಾರ ಆದೇಶ ಹೊರಡಿಸಿದೆ| ಹೊಂದಾಣಿ ಮಾಡಿಸಲು ಮುಂದಾಗಿರುವ ಸಂಸದ ಸಂಗಣ್ಣ ಕರಡಿ ಅವರ ವಿರುದ್ಧ ಬಸನಗೌಡ ಅಭಿಮಾನಿ ಕಾರ್ಯಕರ್ತರು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ|
 


ಮಸ್ಕಿ[ಅ.16]: ಪ್ರತಾಪ್‌ಗೌಡ ಪಾಟೀಲ್‌ ರಾಜೀನಾಮೆಯಿಂದ ಮಸ್ಕಿ ಕ್ಷೇತ್ರದಲ್ಲಿ ಎದುರಾಗಬಹುದಾದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಹೇಗಾದರೂ ಮಾಡಿ ಸ್ಪರ್ಧಿಸಬೇಕೆಂದು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಮುಖಂಡರ ಹಾಗೂ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿರುವ ಬಸನಗೌಡ ತುವಿರಹಾಳ ಅವರಿಗೆ ಉಪ ಕದನದಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಗುವ ಲಕ್ಷಣಗಳು ಕಡಿಮೆಯಾಗುತ್ತಿವೆ.

ಕಳೆದ ಬಾರಿಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್‌ ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುವಿರಹಾಳ 213 ಮತಗಳ ಅಂತರದಿಂದ ಸೋತಿದ್ದರು. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರತಾಪ್‌ಗೌಡ ಪಾಟೀಲ್‌ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ರಾಜ್ಯ ಮುಖಂಡರು ಬಹುತೇಕ ಒಪ್ಪಿಗೆ ಸೂಚಿಸಿ ಸ್ಥಳೀಯ ನಾಯಕರ ಹೊಂದಾಣಿಕೆ ಮಾಡಿಸಲು ಮುಂದಾಗಿದ್ದಾರೆ. ಅಲ್ಲದೇ ಈಗಾಗಲೆ ಕಾಡಾ ಅಧ್ಯಕ್ಷರನ್ನಾಗಿ ಬಸನಗೌಡರನ್ನು ನೇಮಸಿ ಸರ್ಕಾರ ಆದೇಶ ಹೊರಡಿಸಿದೆ. ಅದರ ಭಾಗವಾಗಿ ಹೊಂದಾಣಿ ಮಾಡಿಸಲು ಮುಂದಾಗಿರುವ ಸಂಸದ ಸಂಗಣ್ಣ ಕರಡಿ ಅವರ ವಿರುದ್ಧ ಬಸನಗೌಡ ಅಭಿಮಾನಿ ಕಾರ್ಯಕರ್ತರು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ.

Latest Videos

undefined

ಪೋನ್‌ ಕರೆ:

ಕೊಪ್ಪಳ ಸಂಸದ ಸಂಗಣ್ಣ ಕರಡಿಯವರು ಪೋನ್‌ ಕರೆ ಮಾಡಿ ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್‌ ಅವರಿಗೆ ಉಪಚುನಾವಣೆಯಲ್ಲಿ ಬೆಂಬಲಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಕಳೆದ ಎಂಪಿ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಿಂದ ಅತಿ ಹೆಚ್ಚು ಮತಗಳನ್ನು ತಂದು ಕೊಟ್ಟಿದ್ದಾರೆ. ಎಲ್ಲವನ್ನು ಮರೆತಿದ್ದಾರೆ ಎಂದು ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್‌ ಹರಿ ಬಿಟ್ಟು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಹುನ್ನಾರ:

ಸ್ವ-ಪಕ್ಷದ ಬಿಜೆಪಿಯ ಸಂಸದರೆ ಬಸನಗೌಡರನ್ನು ರಾಜಕೀಯವಾಗಿ ಮೂಲೆ ಗುಂಪು ಮಾಡಲು ಹಪಹಪಿಸುತ್ತಿದ್ದಾರೆ. ಕೊಪ್ಪಳದಲ್ಲಿ ಈಗಾಗಲೆ ಸಿ.ವಿ.ಚಂದ್ರಶೇಖರ ಅವರನ್ನು ಮುಗಿಸಿ, ಈಗ ಬಸನಗೌಡರನ್ನು ಮುಗಿಸುವ ಹುನ್ನಾರ ಮಾಡುತ್ತಿದ್ದಾರೆ. ನಿಮ್ಮ ಈ ಸೂಟ್‌ ಕೇಸ್‌ ನಾಟಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ಸಾಮಾಜಿಕ ತಾಣಗಳಲ್ಲಿ ಬಸನಗೌಡ ಅಭಿಮಾನಿಗಳು ಬರೆದುಕೊಂಡು ಅಸಮಧಾನ ತಿಳಿಸಪಡಿಸಿದ್ದು, ಇದು ಮುಂದೆ ರಾಜಕೀಯವಾಗಿ ಯಾವ ಸ್ವರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಮಾತನಾಡಿದ ಸಂತೆಕಲ್ಲೂರಿನ ಬಿಜೆಪಿ ಕಾರ್ಯಕರ್ತ ಬಸವರಾಜ ಕಂದಗಲ್‌ ಅವರು, ಸಂಸದ ಸಂಗಣ್ಣ ಕರಡಿಯವರು ಪ್ರತಾಪಗೌಡ ಪಾಟೀಲ ಅವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೊಗುವಂತೆ ಹೇಳುತ್ತಿದ್ದಾರೆ. ಈಗ ಬಿಜೆಪಿ ಕಾರ್ಯಕರ್ತರು ಎನು ಮಾಡಬೇಕು ಎಂದು ತಿಳಿಯದಂತಾಗಿದೆ ಎಂದು ಹೇಳಿದ್ದಾರೆ. 

click me!