ಸಿರವಾರದಲ್ಲಿ ಭಾರೀ ಮಳೆ: ರಸ್ತೆ ಮೇಲೆ ನೀರು, ಜನರ ಪರದಾಟ

By Web Desk  |  First Published Oct 9, 2019, 2:58 PM IST

ಪಟ್ಟಣ ಸೇರಿ ಹಲವೆಡೆ ಸುರಿದ ಭಾರೀ ಮಳೆಯಿಂದಾಗಿ ಜಲಾವೃತವಾದ ಮುಖ್ಯ ರಸ್ತೆ| ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಸಾರ್ವಜನಿಕರಿಗೆ ತೊಂದರೆ| ಮುಖ್ಯ ರಸ್ತೆಯಲ್ಲಿರುವ ಚರಂಡಿಗೆ ನೀರು ಹೋಗಲು ನಿರ್ಮಾಣ ಮಾಡಿರುವ ಹೋಲ್‌ಗಳ ಬಂದ್‌ ಆಗಿರುವುದರಿಂದ ಗದ್ದೆಹಳ್ಳದಿಂದ ಎಪಿಎಂಸಿ ಕ್ರಾಸ್‌ನವರೆಗೂ ನೀರು ನಿಂತುಕೊಂಡು ಸಂಚಾರಕ್ಕೆ ತೊಂದರೆಯಾಗಿತ್ತು| ನವಲಕಲ್‌ ಶಾಖಾ ಮಠದ ಪಕ್ಕದಲ್ಲಿ ಚರಂಡಿ ತುಂಬಿರುವುದರಿಂದ ಮನೆಗಳಿಗೆ ನೀರು ನುಗ್ಗಿತು| 


ಸಿರವಾರ(ಅ.9): ಪಟ್ಟಣ ಸೇರಿ ಹಲವೆಡೆ ಸುರಿದ ಭಾರೀ ಮಳೆಯಿಂದಾಗಿ ಮುಖ್ಯ ರಸ್ತೆಯು ಜಲಾವೃತವಾದರೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಸಾರ್ವಜನಿಕರು ಸಮಸ್ಯೆ ಅನುಭವಿಸಿದ್ದಾರೆ.

ತಾಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ 1 ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಮುಖ್ಯ ರಸ್ತೆಯಲ್ಲಿರುವ ಚರಂಡಿಗೆ ನೀರು ಹೋಗಲು ನಿರ್ಮಾಣ ಮಾಡಿರುವ ಹೋಲ್‌ಗಳ ಬಂದ್‌ ಆಗಿರುವುದರಿಂದ ಗದ್ದೆಹಳ್ಳದಿಂದ ಎಪಿಎಂಸಿ ಕ್ರಾಸ್‌ನವರೆಗೂ ನೀರು ನಿಂತುಕೊಂಡು ಸಂಚಾರಕ್ಕೆ ತೊಂದರೆಯಾಗಿತ್ತು. ನವಲಕಲ್‌ ಶಾಖಾ ಮಠದ ಪಕ್ಕದಲ್ಲಿ ಚರಂಡಿ ತುಂಬಿರುವುದರಿಂದ ಮನೆಗಳಿಗೆ ನೀರು ನುಗ್ಗಿತು.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿರವಾರದಲ್ಲಿ ಸಂತೆ ಜರುಗುವುದರಿಂದ ದಸರಾ ಹಬ್ಬಕ್ಕೆ ವಿವಿಧ ವಸ್ತುಗಳ ಖರೀದಿಗೆ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರಿಗೆ ಮಳೆಯಿಂದಾಗಿ ತೊಂದರೆಯಾದರೆ. ದಿಢೀರ್ ಎಂದು ಆಗಮಿಸಿದ ಮಳೆಯಿಂದ ತರಕಾರಿ, ಕಾಳುಕಡಿ, ಸೇರಿದಂತೆ ವಸ್ತುಗಳು ಮಳೆಯಿಂದ ತೊಯ್ದವು. ವಾಹನಗಳನ್ನು ಅಡ್ಡಾ ದೀಡಿ ನಿಲ್ಲಿಸಿದ್ದರಿಂದ ಬಸವೇಶ್ವರ ವೃತ್ತದಲ್ಲಿ 1 ಗಂಟೆಗೂ ಅದಿಕ ಕಾಲ ಟ್ರಾಫಿಕ್‌ ಜಾಮ್‌ ಆಗಿ ಸಂಚಾರಕ್ಕೆ ತೊಂದರೆಯಾಗಿತು.
 

click me!