ನಾಯಿ ವಾಕಿಂಗ್ ಮಾಡಿಸೋ ಅಭ್ಯಾಸ ಇದ್ಯಾ? ಇದನ್ನೇ ಬ್ಯುಸಿನೆಸ್ ಯಾಕೆ ಮಾಡ್ಬಾರದು?

By Suvarna News  |  First Published Jan 27, 2024, 1:07 PM IST

ಹೆಡ್ ಲೈನ್ ನೋಡಿ ಇದೆಂಥ ಜಾಬ್ ಅಂದುಕೊಳ್ಬೇಡಿ. ಜಗತ್ತಿನಲ್ಲಿ ಎಲ್ಲ ಕೆಲಸಕ್ಕೂ ಜನ ಬೇಕು. ನಿಮಗೆ ಆಸಕ್ತಿ ಇದ್ರೆ ಇಂಥ ಕೆಲಸವನ್ನೂ ವೃತ್ತಿ ಮಾಡ್ಕೊಂಡು ಹಣ ಗಳಿಸಬಹುದು.
 


ಬೆಳಿಗ್ಗೆ – ಸಂಜೆ ರಸ್ತೆ ಬದಿಯಲ್ಲಿ ನಾಯಿ ಹಿಡಿದು ಜನ ಓಡಾಡೋದನ್ನು ನೀವು ನೋಡ್ಬಹುದು. ನಾಯಿಗಳನ್ನು ಸಾಕಿರುವ ಜನರಿಗೆ ನಾಯಿಗಳ ಮಲ –ಮೂತ್ರ ವಿಸರ್ಜನೆಗಾಗಿ ಹೊರಗೆ ಕರೆದುಕೊಂಡು ಬರುವ ಅಭ್ಯಾಸವಿರುತ್ತದೆ.  ಕೆಲವರು ಸ್ವಚ್ಛತೆ ಕಾರಣಕ್ಕೆ ಮಲ – ಮೂತ್ರವನ್ನು ಮನೆಯ ಶೌಚಾಲಯದಲ್ಲಿ ಮಾಡುವ ಅಭ್ಯಾಸವನ್ನು ನಾಯಿಗಳಿಗೆ ಕಲಿಸಿರ್ತಾರೆ. ಆದ್ರೆ ವಾಕಿಂಗ್ ಹೆಸರಿನಲ್ಲಿ ನಾಯಿಯನ್ನು ಹೊರಗೆ ಕರೆದುಕೊಂಡು ಬರ್ತಾರೆ. ನಾಯಿ ಜೊತೆ ನಾಯಿ ಮಾಲೀಕನಿಗೂ ಇದ್ರಿಂದ ವಾಕಿಂಗ್ ಆಗುತ್ತೆ. ಇದು ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಅಲ್ಲೇ ಒಂದಿಷ್ಟು ಸ್ನೇಹಿತರ ಆಗುವ ಕಾರಣ ನಾಯಿ ಮಾಲೀಕ ಸೋಶಿಯಲ್ ಆಗ್ತಾನೆ ಎಂದು ಕೆಲ ದಿನಗಳ ಹಿಂದೆ ಸಮೀಕ್ಷೆ ವರದಿ ಒಂದು ಹೇಳಿತ್ತು. ಅದೇನೇ ಇರಲಿ, ಈಗ ನಾವು ಹೇಳ್ತಿರುವ ವಿಷ್ಯ ಸ್ವಲ್ಪ ಭಿನ್ನವಾಗಿದೆ. ನಿಮಗೂ ನಾಯಿ ಮೇಲೆ ಪ್ರೀತಿ ಇದ್ದು, ನಾಯಿಯನ್ನು ವಾಕಿಂಗ್ ಗೆ ಕರೆದುಕೊಂಡು ಹೋಗುವ ಇಷ್ಟವಿದ್ದರೆ ಒಳ್ಳೆ ಬ್ಯುಸಿನೆಸ್ ಐಡಿಯಾ ಒಂದಿದೆ. ನೀವು ಈ ಮಹಿಳೆಯಂತೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸಬಹುದು. 

ನಾಯಿ (Dog) ಓಡಾಡಿಸಿಯೇ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುವ ಮಹಿಳೆಯೊಬ್ಬಳು ನಾರ್ವಿಚ್‌ (Norwich) ನಲ್ಲಿದ್ದಾಳೆ. ಆಕೆ ವಯಸ್ಸು 28 ವರ್ಷ. ಹೆಸರು ಗ್ರೇಸ್ ಬಟರಿ.  ಗ್ರೇಸ್ ಬರಿಸ್ಟಾ ಕಾಫಿ ಶಾಪ್ ನಲ್ಲಿ ಕೆಲಸ ಮಾಡ್ತಿದ್ದಳು. ಅಲ್ಲಿ ಆಕೆ ಸಂಬಳ ಹೆಚ್ಚೇನೂ ಇರಲಿಲ್ಲ. ಕೆಲವೊಮ್ಮೆ ದೀರ್ಘ ಸಮಯ ಕೆಲಸ ಮಾಡಿದ್ರೂ ಕೆಲಸಕ್ಕೆ ತಕ್ಕಂತೆ ಸಂಬಳ ಸಿಗ್ತಿರಲಿಲ್ಲ. ನಾಯಿ ಮೇಲೆ ಗೇಸ್ ಗೆ ಅಪಾರ ಪ್ರೀತಿ (love). ಇದು ಆಕೆಯ ಸ್ನೇಹಿತನಿಗೆ ತಿಳಿದಿತ್ತು. ಮಾತಿನ ಮಧ್ಯೆ ಆಕೆ ಸ್ನೇಹಿತ, ನಾಯಿ ವಾಕರ್ ಏಕೆ ಆಗ್ಬಾರದು ಎಂದು ಪ್ರಶ್ನಿಸಿದ್ದ. ಇದ್ರಿಂದ ಗ್ರೇಸ್ ಬಟರಿಗೆ ಅದ್ಭುತ ಐಡಿಯಾ ಒಂದು ಬಂತು. ಮುಂದೇನು ಎನ್ನುವ ಆಲೋಚನೆ ಮಾಡದೆ ಕೆಲಸಕ್ಕೆ ರಾಜೀನಾಮೆ ನೀಡಿದ ಗ್ರೇಸ್, ನಾಯಿ ವಾಕರ್ ಕೆಲಸ ಶುರು ಮಾಡಿದ್ಲು.

Tap to resize

Latest Videos

ಐಐಟಿ ಡ್ರಾಪ್ಔಟ್ ಅವಳಿಗಳು, 15000 ಕೋಟಿ ಸಂಪತ್ತು ಹೊಂದಿರುವ ಶ್ರೀಮಂತ ಗೂಗಲ್ ಉದ್ಯೋಗಿ

2019ರಲ್ಲಿ ಗ್ರೇಸ್ ಸ್ವಂತ ಕಂಪನಿ ಶುರು ಮಾಡಿದ್ಲು. ಆರಂಭದಲ್ಲಿ ನಾಲ್ಕು ಗ್ರಾಹಕರು ಗ್ರೇಸ್ ಗೆ ಸಿಕ್ಕಿದ್ದರು. ನಾಯಿಗಳನ್ನು ವಾಕ್ ಮಾಡಿಸಿ ಮಾಲೀಕರ ಕೈಗೆ ನೀಡುವುದು. ಮಾಲೀಕರು ಇದಕ್ಕೆ ಹಣ ಪಾವತಿ ಮಾಡ್ತಾರೆ. ದಿನ ಕಳೆದಂತೆ ಗ್ರೇಸ್ ಬ್ಯುಸಿನೆಸ್ ನಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಈಗ 36 ನಾಯಿಗಳ ವಾಕಿಂಗ್ ಜವಾಬ್ದಾರಿ ಗ್ರೇಸ್ ಮೇಲಿದೆ. ದಿನಕ್ಕೆ ಆರು ಗಂಟೆ ಆಕೆ ಕೆಲಸ ಮಾಡ್ತಾಳೆ. ಪ್ರತಿ ವರ್ಷ 42 ಸಾವಿರ ಪೌಂಡ್ ಅಂದರೆ ಸರಿಸುಮಾರು 44 ಲಕ್ಷ ರೂಪಾಯಿಯನ್ನು ಗ್ರೇಸ್ ಗಳಿಸ್ತಾಳೆ. ಎಲ್ಲ ಖರ್ಚು ಕಳೆದ್ರೂ ಗ್ರೇಸ್ ಗೆ 34 ಲಕ್ಷ ರೂಪಾಯಿ ಉಳಿಯುತ್ತದೆ.

ನಾಯಿ ವಾಕರ್ (Dog Walker) ಆಗೋದು ಸುಲಭದ ಕೆಲಸವಲ್ಲ. ಅದ್ರಲ್ಲಿ ಕೆಲವೊಂದು ಸವಾಲುಗಳಿವೆ. ನೀವು ಕೆಲಸವನ್ನು ಪ್ರೀತಿಸಿದ್ರೆ ಕೆಲಸ ನಿಮಗೆ ಕಷ್ಟವೆನ್ನಿಸುವುದಿಲ್ಲ. ನನಗೆ ನಾಯಿ ಮೇಲೆ ಅಪಾರ ಪ್ರೀತಿ (Pet Love) ಇರುವ ಕಾರಣ ನನಗೆ ಈ ಕೆಲಸ ಸುಲಭ ಎನ್ನುತ್ತಾಳೆ ಗ್ರೇಸ್. ಯಾವುದೇ ಅಂಗಡಿ ಅಥವಾ ಕಂಪನಿ ನಡೆಸುವಾಗ ಖರ್ಚುಗಳು ಹೆಚ್ಚು. ಬಾಡಿಗೆ, ವಿದ್ಯುತ್ ಸೇರಿದಂತೆ ಅನೇಕ ಖರ್ಚು ಬರುತ್ತದೆ. ಆದ್ರೆ ನನ್ನ ಈ ವ್ಯವಹಾರದಲ್ಲಿ ದೊಡ್ಡ ಖರ್ಚು ಅಂದ್ರೆ ಪೆಟ್ರೋಲ್ ಮಾತ್ರ ಎನ್ನುತ್ತಾಳೆ ಗ್ರೇಸ್. ಬ್ಯುಸಿನೆಸ್ ಶುರು ಮಾಡಿ ಕೆಲವೇ ವರ್ಷವಾದ್ರೂ ಗ್ರೇಸ್ ಕಂಪನಿ ಆದಾಯ ಚೆನ್ನಾಗಿದೆ. ಕಂಪನಿ ವಹಿವಾಟು 50 ಲಕ್ಷಕ್ಕಿಂತ ಹೆಚ್ಚಿದೆ. 

ಬರೋಬ್ಬರಿ 99.34 ಕೋಟಿ ರೂಪಾಯಿ ಮೌಲ್ಯದ ವಾಣಿಜ್ಯ ಆಸ್ತಿ ಖರೀದಿಸಿದ ಈಜಿ ಮೈ ಟ್ರಿಪ್ ಸಂಸ್ಥಾಪಕ

click me!