ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮಹಿಳೆಯರು ಕೆಲ ಬಾರಿ ಮೇಕಪ್ ಧರಿಸೋದಿಲ್ಲ. ಅದಕ್ಕೆ ಅವರದ್ದೇ ನಾನಾ ಕಾರಣವಿರುತ್ತದೆ. ಆದ್ರೆ ಇದೇ ಮೇಕಪ್ ಒಂದು ಕೆಲಸ ಕಿತ್ತುಕೊಂಡಿದೆ ಅಂದ್ರೆ ನೀವು ನಂಬ್ತೀರಾ?
ಸಂದರ್ಶಕ್ಕೆ ಹೋದ ಎಲ್ಲ ಕಡೆ ನಿಮಗೆ ಉದ್ಯೋಗ ಸಿಗಬೇಕು ಎಂದೇನಿಲ್ಲ. ನಿಮ್ಮ ಸಾಮರ್ಥ್ಯ, ವಿದ್ಯಾರ್ಹತೆ, ಹಿಂದಿನ ಅನುಭವ ಹೀಗೆ ನಾನಾ ವಿಷ್ಯಗಳನ್ನು ಇಲ್ಲಿ ಪರಿಶೀಲಿಸಲಾಗುತ್ತದೆ. ಕೆಲ ಉದ್ಯೋಗ ಮಹಿಳೆಯರಿಗೆ ಮಾತ್ರ ಸೀಮಿತವಾಗಿರುತ್ತದೆ. ಆ ಕೆಲಸಕ್ಕೆ ಪುರುಷರ ನೇಮಕ ನಡೆಯೋದಿಲ್ಲ. ಮತ್ತೆ ಕೆಲ ಉದ್ಯೋಗಕ್ಕೆ ವಿದ್ಯಾರ್ಹತೆ ಜೊತೆ ಮಾತಿನ ಶೈಲಿ, ಧ್ವನಿಯನ್ನು ಗಮನಿಸಲಾಗುತ್ತದೆ. ಆದ್ರೆ ಇಲ್ಲೊಬ್ಬ ಯುವತಿ ಮೇಕಪ್ ಮಾಡದ ಕಾರಣ ಕೆಲಸ ಕಳೆದುಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಆಕೆ ಈ ವಿಷ್ಯವನ್ನು ಬಹಿರಂಗಪಡಿಸಿದ್ದಾಳೆ. ಮೇಕಪ್ ಕಾರಣಕ್ಕೆ ನಿಮಗೆ ಕೆಲಸ ಸಿಕ್ಕಿಲ್ಲ ಎನ್ನುವುದು ಸತ್ಯವಾಗಿದ್ದರೆ ನೀವು ಕೋರ್ಟ್ ಗೆ ಹೋಗಿ ನ್ಯಾಯ ಕೇಳಬಹುದು ಎಂದು ಅನೇಕ ಬಳಕೆದಾರರು ಸಲಹೆ ನೀಡಿದ್ದಾರೆ.
ಈ ಪೋಸ್ಟ್ ಹಾಕಿರುವ ಮಹಿಳೆ ನ್ಯೂಯಾರ್ಕ್ ನಿವಾಸಿ. ವಯಸ್ಸು ಮೂವತ್ತು ವರ್ಷ. ಮೆಲಿಸ್ಸಾ ವೀವರ್ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆ ಟೆಕ್ ಕಂಪನಿಯ ವಿಸಿ ಎಚ್ ಆರ್ ಪ್ರೊಫೈಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಳು. ಮೆಲಿಸ್ಸಾ ವೀವರ್ ಕೂಡ ಉದ್ಯೋಗಿ (Employee) ಗಳ ನೇಮಕಾತಿ (Recruitment) ಕೆಲಸ ಮಾಡುತ್ತಾಳೆ. ಹಾಗಾಗಿ ಸಂದರ್ಶನ ಹೇಗಿರುತ್ತದೆ, ಅಲ್ಲಿ ಏನೆಲ್ಲ ಪ್ರಶ್ನೆ ಕೇಳಬಹುದು ಎಂಬ ಸಾಮಾನ್ಯ ಜ್ಞಾನ ಮೆಲಿಸ್ಸಾ ವೀವರ್ ಗಿದೆ. ಸಂದರ್ಶನದ ಬಗ್ಗೆ ಹೇಳಿದ ಮೆಲಿಸ್ಸಾ ವೀವರ್, ಇಂಟರ್ವ್ಯೂ (Interview) ಚೆನ್ನಾಗಿತ್ತು. ಮ್ಯಾನೇಜ್ಮೆಂಟ್ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ್ದಲ್ಲದೆ, ಕೆಲಸದ ಬಗ್ಗೆ ನನಗಿರುವ ಜ್ಞಾನ ಹಾಗೂ ಸಾಮರ್ಥ್ಯವನ್ನು ಮೆಚ್ಚಿಕೊಂಡಿತ್ತು ಎಂದು ಮೆಲಿಸ್ಸಾ ವೀವರ್ ಹೇಳಿದ್ದಾಳೆ.
undefined
ದುಬಾರಿ ಕಾರು, ವಾಚ್ ಕಲೆಕ್ಷನ್ ಅಷ್ಟೇ ಅಲ್ಲ ಅನಂತ್ ಅಂಬಾನಿ ಬಳಿಯಿದೆ ಕೋಟಿ ಕೋಟಿ ಮೌಲ್ಯದ ಬ್ರೂಚ್!
ಸಂದರ್ಶನದ ನಂತ್ರ ಕೆಲಸ ಸಿಗಬಹುದೆಂದು ಮೆಲಿಸ್ಸಾ ವೀವರ್ ಭಾವಿಸಿದ್ದಳು. ಆದ್ರೆ ಆಕೆ ನಂಬಿಕೆ ಸುಳ್ಳಾಗಿತ್ತು. ಮ್ಯಾನೇಜ್ಮೆಂಟ್ ಕ್ಷುಲ್ಲಕ ಕಾರಣ ಹೇಳಿ ಮೆಲಿಸ್ಸಾ ವೀವರ್ ನೇಮಕಾತಿಯಿಂದ ಹಿಂದೆ ಸರಿದಿದೆ. ಮೆಲಿಸ್ಸಾ ವೀವರ್, ಸಂದರ್ಶನಕ್ಕೆ ಮೇಕಪ್ ಇಲ್ಲದೆ ಹೋಗಿರೋದೇ ಇದಕ್ಕೆ ಕಾರಣವಾಗಿದೆ.
ಮೆಲಿಸ್ಸಾ ವೀವರ್ ಪ್ರಕಾರ, ಮ್ಯಾನೇಜ್ಮೆಂಟ್ ಮೇಕಪ್ ಇಲ್ಲದ ಕಾರಣ ನಿಮ್ಮನ್ನು ಕೆಲಸಕ್ಕೆ ಆಯ್ಕೆ ಮಾಡುತ್ತಿಲ್ಲ ಎಂದಿದೆಯಂತೆ. ನೀವು ಕೆಲಸದಲ್ಲಿ ಉತ್ತಮ ಅನುಭವ ಹೊಂದಿದ್ದೀರಿ. ನಿಮಗೆ ಈ ಉದ್ಯೋಗ ಮಾಡುವ ಸಾಮರ್ಥ್ಯವಿದೆ. ಆದ್ರೆ ವೈಯಕ್ತಿಕವಾಗಿ ನಿಮ್ಮನ್ನು ಗಮನಿಸಿದಾಗ ನಿಮ್ಮ ನೋಟ ನಿಮ್ಮ ಕೆಲಸಕ್ಕೆ ಅಡ್ಡಿಯಾಯ್ತು ಎಂದಿದ್ದಾರೆ. ನಿಮ್ಮ ವೈಯಕ್ತಿಯ ಸೌಂದರ್ಯ ವೃದ್ಧಿಸಿಕೊಳ್ಳಲು ನೀವು ಹೆಚ್ಚು ಪ್ರಯತ್ನಿಸಿದಂತೆ ಕಾಣುತ್ತಿಲ್ಲ ಎಂದು ಮ್ಯಾನೇಜ್ಮೆಂಟ್ ಹೇಳಿದೆ.
ನಾನೇಕೆ ಮೇಕಪ್ ಮಾಡಿಲ್ಲ ಎನ್ನುವ ಬಗ್ಗೆಯೂ ಮೆಲಿಸ್ಸಾ ವೀವರ್ ಹೇಳಿದ್ದಾಳೆ. ಆಕೆ ಕೂದಲಿಗೆ ಬ್ಲೋಔಟ್ ಮಾಡಿದ್ದಳು. ಉತ್ತಮ ಟಾಪ್, ಬ್ಲೇಸರ್ ಧರಿಸಿ ಸಂದರ್ಶನಕ್ಕೆ ತೆರಳಿದ್ದಳು. ಆದ್ರೆ ಯಾವುದೇ ರೀತಿಯ ಮೇಕಪ್ ಮಾಡಿರಲಿಲ್ಲ. ಮೇಕಪ್ ನನ್ನ ಚರ್ಮ ಮತ್ತು ಕಣ್ಣಿಗೆ ಹಾನಿಯುಂಟು ಮಾಡುತ್ತದೆ. ಇದ್ರಿಂದ ನನ್ನ ಕಣ್ಣಿಗೆ ತುಂಬಾ ಕಿರಿಕಿರಿಯಾಗುತ್ತದೆ. ಹಾಗಾಗಿ ನಾನು ಮೇಕಪ್ ಮಾಡಿರಲಿಲ್ಲ ಎಂದು ಮೆಲಿಸ್ಸಾ ವೀವರ್ ಹೇಳಿದ್ದಾಳೆ.
ಫೇಸ್‌ಬುಕ್‌ನಿಂದ ಪತ್ನಿಗೆ ಗೊತ್ತಾಯ್ತು ಗಂಡನ ರಾಸಲೀಲೆ! ಮಾಡಿದ್ದೇನು?
ಮೆಲಿಸ್ಸಾ ವೀವರ್ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು ಏಳು ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಇದನ್ನು ಕಾನೂನು ಬಾಹಿರ ಎಂದು ಅನೇಕರು ಹೇಳಿದ್ದಾರೆ. ಬಣ್ಣ (Skin Complexion), ಲಿಂಗ (Gender), ಜನಾಂಗವನ್ನು (Community) ನೋಡುವ ಕಂಪನಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ನೋಟದ ಆಧಾರದ ಮೇಲೆ ನೌಕರಿ ನಿರಾಕರಿಸಿಲು ಸಾಧ್ಯವಿಲ್ಲ ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ರೆ, ಪುರುಷರು ಮೇಕಪ್ ಮಾಡಿಲ್ಲ ಎನ್ನುವ ಕಾರಣಕ್ಕೆ ಅವರ ಮೇಲೂ ಇದೇ ಕ್ರಮ ಕೈಗೊಳ್ಳುತ್ತೀರಾ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.