ಉದ್ಯೋಗಿಗಳು ಅಂದ್ಮೇಲೆ ಸಂಬಳ ಮುಖ್ಯವಾಗುತ್ತೆ. ಅನೇಕ ಬಾರಿ ಕಡಿಮೆ ಸಂಬಳವಿದ್ರೂ ಕೆಲವರು ಅದೇ ಕಂಪನಿಯಲ್ಲಿ ಕೆಲಸ ಮಾಡ್ತಿರುತ್ತಾರೆ. ಇದಕ್ಕೆ ಕಾರಣವೇನು ಎಂಬುದನ್ನು ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಉದ್ಯೋಗಿಗಳ ಉತ್ತರ ಅಚ್ಚರಿಹುಟ್ಟಿಸಿದೆ.
ಪ್ರತಿಯೊಬ್ಬರೂ ಸಂಬಳಕ್ಕೆ ಹೆಚ್ಚಿನ ಆದ್ಯತೆ ನೀಡ್ತಾರೆ. ಸಂಬಳ ಏರಿಕೆಯಾಗುವ ಉದ್ಯೋಗಕ್ಕೆ ಆಫರ್ ಬಂದಾಗ ಹಳೆ ಕೆಲಸ ತೊರೆದು ಹೊಸ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ತಾರೆ ಎಂಬುದು ನಮ್ಮೆಲ್ಲರ ನಂಬಿಕೆ. ಹೊಸ ಕೆಲಸ ಹುಡುಕುವ ಸಮಯದಲ್ಲಿ ಕೂಡ ಬಡ್ತಿ ಹಾಗೂ ಸಂಬಳವನ್ನು ಜನರು ಮುಖ್ಯವಾಗಿ ಗಮನಿಸ್ತಾರೆ ಇದು ಸತ್ಯ. ಆದ್ರೆ ಎಲ್ಲ ಉದ್ಯೋಗಿಗಳೂ ಹೊಸ ಕೆಲಸದ ಆಫರ್ ಬಂದಾಗ ಹಳೆ ಕೆಲಸ ತೊರೆದು ಹೊಸದನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಅನೇಕ ಜನರು ಹಳೆ ಕೆಲಸದಲ್ಲಿಯೇ ಮುಂದುವರೆಯಲು ಇಚ್ಛಿಸುತ್ತಾರೆ. ಅದಕ್ಕೆ ಕಾರಣವೇನು ಎಂಬುದನ್ನು ಸಮೀಕ್ಷೆಯೊಂದರಲ್ಲಿ ಪತ್ತೆ ಮಾಡಲಾಗಿದೆ. ಉದ್ಯೋಗಿಗಳ ಸಮೀಕ್ಷೆ ವರದಿ ಅಚ್ಚರಿ ಹುಟ್ಟಿಸಿದೆ. ಸಂಬಳ ಕಡಿಮೆ ಇದ್ರೂ ಉದ್ಯೋಗಿಗಳು ಅದೇ ಉದ್ಯೋಗದಲ್ಲಿ ಮುಂದುವರೆಯಲು ಕಾರಣವೇನು, ಎಷ್ಟು ಉದ್ಯೋಗಿಗಳು ಸಂಬಳಕ್ಕಿಂತ ಕಚೇರಿಯಲ್ಲಿ ಮತ್ತೇನೆಲ್ಲ ವ್ಯವಸ್ಥೆಯ ಬಗ್ಗೆ ಗಮನ ಹರಿಸ್ತಾರೆ ಎಂಬುದರ ವಿವರ ಇಲ್ಲಿದೆ.
ವೃತ್ತಿಪರ (Professional) ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ Apna. Co ಈ ಬಗ್ಗೆ ಸಮೀಕ್ಷೆ ಮಾಡಿದೆ. ಅಪ್ರೈಸಲ್ ಸೀಸನ್‌ಗೆ ಮುಂಚಿತವಾಗಿ ಈ ಸಮೀಕ್ಷೆ (Survey) ನಡೆದಿದೆ. ಉದ್ಯೋಗ (Employment ) ಮಾರುಕಟ್ಟೆಯ ಬದಲಾವಣೆ ಅರ್ಥ ಮಾಡಿಕೊಳ್ಳಲು ದೇಶಾದ್ಯಂತ 10,000 ವೃತ್ತಿಪರರ ಸಮೀಕ್ಷೆ ನಡೆದಿದೆ. ಆನ್‌ಲೈನ್ (Online) ಮೂಲಕ ಉದ್ಯೋಗಿಗಳ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಶೇಕಡಾ 54 ರಷ್ಟು ಉದ್ಯೋಗಿಗಳು ವೃತ್ತಿಜೀವನದ ಪ್ರಗತಿಗೆ (Professional Growth) ಆದ್ಯತೆ ನೀಡೋದಾಗಿ ಹೇಳಿದ್ದಾರೆ. ಕಡಿಮೆ ವೇತನ ಒಂದು ಸಮಸ್ಯೆಯಾಗಿದ್ದರೂ ಸಹ, ವೃತ್ತಿಪರ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡಿರುವ ಕಾರಣ ಹಳೆ ಉದ್ಯೋಗದಲ್ಲೇ ಉಳಿಯುವ ಅವರು ಮನಸ್ಸು ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಅಬ್ಬಬ್ಬಾ..ಅಂಬಾನಿ ಸೊಸೆ ಧರಿಸಿದ್ದ ಚಿನ್ನ, ಬೆಳ್ಳಿ ಕಸೂತಿಯ ಮಿರಿ ಮಿರಿ ಮಿಂಚೋ ಸೀರೆ ಬೆಲೆ ಇಷ್ಟೊಂದಾ?
ಇನ್ನು, ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸುಮಾರು ಶೇಕಡಾ 37 ರಷ್ಟು ಉದ್ಯೋಗಿಗಳು ಸಾಧನೆ ಅಥವಾ ಸ್ವಾತಂತ್ರ್ಯಕ್ಕೆ ಮಹತ್ವ ನೀಡುವುದಾಗಿ ಹೇಳಿದ್ದಾರೆ. ಮತ್ತೆ ಶೇಕಡಾ 21 ರಷ್ಟು ಜನರು, ಅಂತರರಾಷ್ಟ್ರೀಯ ಕಾರ್ಯಯೋಜನೆ, ಕೆಲಸಕ್ಕೆ ಸಂಬಂಧಿಸಿದ ಪ್ರಯಾಣದಲ್ಲಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಅಚ್ಚರಿ ಅಂದ್ರೆ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 44 ರಷ್ಟು ಉದ್ಯೋಗಿಗಳು ಕಂಪನಿ ಕೆಲಸದ ಸಂಸ್ಕೃತಿಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಸಂಬಳಕ್ಕಿಂತ ಕಂಪನಿ ಸಂಸ್ಕೃತಿಗೆ ಅವರು ಆದ್ಯತೆ ನೀಡ್ತಿದ್ದಾರೆ.
ವೃತ್ತಿಪರ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉದ್ಯೋಗಿಗಳು ನಾಯಕತ್ವದ ಪಾತ್ರ ಮತ್ತು ಜವಾಬ್ದಾರಿಗೆ ಒತ್ತು ನೀಡೋದಾಗಿ ಹೇಳಿದ್ದಾರೆ. ಇನ್ನು ಸುಧಾರಿತ ತರಬೇತಿ ಕಾರ್ಯಕ್ರಮಕ್ಕೆ ಮಹತ್ವ ನೀಡುವ ಉದ್ಯೋಗಿಗಳಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಉದ್ಯೋಗಿಗಳ ಶೇಕಡಾ 36 ಮಂದಿ, ಕಚೇರಿ ಕೆಲಸದಲ್ಲಿ ಹಿರಿಯರ ಹಾಗೂ ಕಂಪನಿಯ ಮಾರ್ಗದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾಗಿ ತಿಳಿಸಿದ್ದಾರೆ.
ಅಪ್ನಾ ಡಾಟ್ ಕಾಂ (Apna.co) ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ನಿರ್ಮಿತ್ ಪಾರಿಖ್ ಈ ಸಮೀಕ್ಷೆ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಮೀಕ್ಷೆ ಇಂದಿನ ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ವೃತ್ತಿಪರರ ಆಕಾಂಕ್ಷೆ ಮತ್ತು ಆದ್ಯತೆ ಬಗ್ಗೆ ಮಾಹಿತಿ ನೀಡುತ್ತದೆ ಎಂದಿದ್ದಾರೆ. ವೃತ್ತಿಪರರ ದೊಡ್ಡ ಗುಂಪು ತಮ್ಮ ವೃತ್ತಿ ಕ್ಷೇತ್ರದಲ್ಲಿ ಉಳಿಯಲು ಬಯಸುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿ ಜೊತೆ ಕಂಪನಿ ಕೆಲಸದ ಸಂಸ್ಕೃತಿ, ಕೌಶಲ್ಯ ಅಭಿವೃದ್ಧಿ (Skill Development) ಸೇರಿದಂತೆ ಈಗಿನ ವೃತ್ತಿಪರರು ಅನೇಕ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ ಎಂದು ನಿರ್ಮಿತ್ ಪಾರಿಖ್ ಹೇಳಿದ್ದಾರೆ.
ಮನೆ ಮನೆಗೆ ತಾಜಾ ಮಾವು ತಲುಪಿಸಲು ಸಿದ್ದವಾದ ಭಾರತೀಯ ಅಂಚೆ ಇಲಾಖೆ! ಆರ್ಡರ್ ಮಾಡೋದು ಹೇಗೆ?
ಅಪ್ನಾ ಡಾಟ್ ಕಾಂ ನಡೆಸಿದ ಈ ವರದಿ ಅನೇಕ ಕಂಪನಿಗೆ ವರವಾಗಲಿದೆ. ಉದ್ಯೋಗಿಗಳನ್ನು ಸೆಳೆಯುವ ಜೊತೆಗೆ ಹೆಚ್ಚು ಉತ್ಪಾದನೆ ಹಾಗೂ ಲಾಭಕ್ಕಾಗಿ ಕಂಪನಿ ಅಡಿಪಾಯ ಹೇಗಿರಬೇಕು ಎಂಬುದನ್ನು ಇದು ತಿಳಿಸುತ್ತದೆ.