ಬಹುತೇಕ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಸ್ಯಾಲರಿ ವಿಚಾರವನ್ನು ಪರಸ್ಪರ ಚರ್ಚಿಸಬಾರದು ಎಂಬ ಅಲಿಖಿತ ನಿಯಮವಿದೆ. ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವ ವೇಳೆಯ ಮಾನವ ಸಂಪನ್ಮೂಲ ಅಧಿಕಾರಿಗಳು ನಿಮ್ಮ ಸ್ಯಾಲರಿ ವಿಚಾರವನ್ನು ಯಾರಿಗೂ ತಿಳಿಸುವಂತಿಲ್ಲ.
ನವದೆಹಲಿ: ಬಹುತೇಕ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಸ್ಯಾಲರಿ ವಿಚಾರವನ್ನು ಪರಸ್ಪರ ಚರ್ಚಿಸಬಾರದು ಎಂಬ ಅಲಿಖಿತ ನಿಯಮವಿದೆ. ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವ ವೇಳೆಯ ಮಾನವ ಸಂಪನ್ಮೂಲ ಅಧಿಕಾರಿಗಳು ನಿಮ್ಮ ಸ್ಯಾಲರಿ ವಿಚಾರವನ್ನು ಯಾರಿಗೂ ತಿಳಿಸುವಂತಿಲ್ಲ. ಮತ್ತೊಬ್ಬ ಉದ್ಯೋಗಿಯ ಜೊತೆ ಚರ್ಚಿಸುವಂತಿಲ್ಲ ಎಂದು ನಿಮಗೆ ಎಚ್ಚರಿಕೆ ನೀಡಿರುತ್ತಾರೆ. ಇದು ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಬಹುತೇಕರಿಗೆ ತಿಳಿದಿರುವ ವಿಚಾರ. ಈ ಮಧ್ಯೆ ಯುವತಿಯೊಬ್ಬಳು ತನಗೆ ಸಂಸ್ಥೆ ಸ್ಯಾಲರಿ ಹೆಚ್ಚಳ ಮಾಡಿದ್ದನ್ನು ಟಿಕ್‌ಟಾಕ್‌ನಲ್ಲಿ ವಿವರವಾಗಿ ತಿಳಿಸಿದ್ದಾಳೆ. ಪರಿಣಾಮ ಸಂಸ್ಥೆ ಆಕೆಯನ್ನು ಕೆಲಸದಿಂದ ತೆಗದು ಮನೆಗೆ ನಡಿ ಎಂದು ಕಳುಹಿಸಿದ್ದಾರೆ.
ಸ್ಯಾಲರಿ ಹೆಚ್ಚಳವಾಗುವುದು ಎಲ್ಲರಗೂ ಮನಸ್ಸಿಗೆ ನೆಮ್ಮದಿ ಖುಷಿ ನೀಡುವ ವಿಚಾರವಾಗಿದೆ. ತಿಂಗಳ ಕೊನೆಯಲ್ಲಿ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಹಣ ಸಿಕ್ಕರೆ ಖುಷಿ ಎನಿಸುತ್ತದೆ. ಅಲ್ಲದೇ ಸಂಬಳದ ಏರಿಕೆಯೂ ವ್ಯಕ್ತಿಗೆ ಸಂತೋಷ ನೀಡುತ್ತದೆ. ಜೊತೆಗೆ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ. ಆದರೆ ಇದೆಲ್ಲವೂ ವೈಯಕ್ತಿಕವಾದುದಾಗಿದ್ದು, ಇದನ್ನು ಎಲ್ಲರಿಗೂ ತಿಳಿಸುವಂತಿಲ್ಲ. ಏನೇ ಹೆಚ್ಚು ಬಂದರೂ ಕಂಪನಿ ನಿಯಮಗಳ ಪ್ರಕಾರ ಮನಸೊಳಗೆ ಖುಷಿಪಡಬೇಕು. ಆದರೆ ಈಕೆ ಸಾಮಾಜಿಕ ಜಾಲತಾಣ ಟಿಕ್‌ಟಾಕ್‌ನಲ್ಲಿ ಹೇಳಿಕೊಂಡು ಸಂಭ್ರಮಿಸಿದ್ದಾಳೆ. ಪರಿಣಾಮ ಸಂಸ್ಥೆ ಆಕೆಯನ್ನು ಕೆಲಸದಿಂದ ವಜಾಗೊಳಿಸಿದೆ.
undefined
ಡೆನ್ವರ್‌ನ ಲೆಕ್ಸಿ ಲಾರ್ಸನ್ ಎಂಬಾಕೆ ತನ್ನ ಟಿಕ್‌ಟಾಕ್ ಖಾತೆಯಲ್ಲಿ ಅನೇಕ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದು ಇದು ಹೊಸ ಕೆಲಸ ಹುಡುಕುವ ಆಕಾಂಕ್ಷಿಗಳಿಗೆ ಮಾರ್ಗದರ್ಶನ ಮಾಡುವ ಸಲುವಾಗಿ ಈ ವಿಡಿಯೋ ಮಾಡಿದ್ದರು. ಟೆಕ್ ಉದ್ಯಮದಲ್ಲಿ ತಾನು ತನಗೆ ನೀಡಿದ 70,000 ಡಾಲರ್ ಸಂಬಳದ ಭರವಸೆಯಿಂದ $90,000ದ ಸಂಬಳಕ್ಕೆ ಹೇಗೆ ಹಾರಿದೆ ಎಂಬುದನ್ನು ವಿವರಿಸಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದರು ಸಹ ಆಕೆಗೆ ಕೆಲಸ ನೀಡಿದ ಸಂಸ್ಥೆ ಮಾತ್ರ ಆಕೆಯ ವಿಡಿಯೋವನ್ನು ಇಷ್ಟಪಡಲಿಲ್ಲ.
ಆಕೆಯನ್ನು ಮೀಟಿಂಗ್ ಗೆ ಕರೆದ ಸಂಸ್ಥೆ ನಂತರ ಸ್ಯಾಲರಿ ಬಗ್ಗೆ ವಿಡಿಯೋ ಮಾಡಿರುವುದಕ್ಕೆ ಕೆಲಸದಿಂದ ತೆಗೆದು ಹಾಕಿರುವುದಾಗಿ ಹೇಳಿದರು. ಒಂದೆರಡು ವಾರಗಳ ಹಿಂದೆ ನಾನು ಟೆಕ್ ಉದ್ಯಮದಲ್ಲಿ ಹೇಗೆ ಕೆಲಸ ಪಡೆದುಕೊಂಡೆ ಎಂಬುದರ ಕುರಿತು ಹಂಚಿಕೊಳ್ಳಲು ಪ್ರಾರಂಭಿಸಿದೆ. ಆದರೆ ಸಂಸ್ಥೆ ನನ್ನನ್ನು ಕೆಲಸದಿಂದ ತೆಗೆದು ಹಾಕಿತು ಎಂದು ಆಕೆ ವಿಡಿಯೋದಲ್ಲಿ ವಿವರಿಸಿದ್ದಾಳೆ.
ತಾನು ಮಾಡಿದ ಎಲ್ಲಾ ವಿಡಿಯೋಗಳನ್ನು ಅಳಿಸುವೆ ಎಂದರೂ ಕೂಡ ನನ್ನನ್ನು ಕೆಲಸದಲ್ಲಿ ಉಳಿಸಲಿಲ್ಲ. ಆಕೆಯ ವಿಡಿಯೋಗಳು ಭದ್ರತಾ ಲೋಪಕ್ಕೆ ಕಾರಣವಾಗಿವೆ ಎಂದು ಸಂಸ್ಥೆ ಹೇಳಿದೆ ಎಂದು ಆಕೆ ಹೇಳಿದ್ದಾಳೆ. ತಾನು ಯಾವುದೇ ಅನಾಹುತ ಮಾಡಿಲ್ಲ ಎಂದರು ಸಂಸ್ಥೆ ಆಕೆಯ ಮಾತು ಕೇಳಿಲ್ಲ. ಆದರೆ ಲೆಕ್ಸಿ ಅಕ್ರಮ ಕೆಲಸವೇನು ಮಾಡಿಲ್ಲ. 1935ರ ರಾಷ್ಟ್ರೀಯ ಕಾರ್ಮಿಕ ಸಂಬಂಧಗಳ ಕಾಯಿದೆಯ ಅಡಿ ಸ್ಯಾಲರಿಯನ್ನು ಚರ್ಚಿಸುವ ಹಕ್ಕು ಉದ್ಯೋಗಿಗಳಿಗೆ ಇದೆ. ಅದೇನೆ ಇರಲಿ ಹೊಸ ಸಂಸ್ಥೆ ಕೆಲಸದಿಂದ ತೆಗೆದು ಹಾಕಿದರೂ ಲೆಕ್ಸಿಗೆ ತಾನು ಕೆಲಸ ಮಾಡುತ್ತಿದ್ದ ಹಳೆಯ ಸಂಸ್ಥೆಯೊಂದು ಕರೆದು ಕೆಲಸ ನೀಡಿದೆ.