ವರ್ಕ್ ಫ್ರಮ್‌ ಆಫೀಸ್‌ ಕುರಿತಾಗಿ ಎಚ್ಚರಿಕೆ ನೀಡಿಲ್ಲ: ಟಿಸಿಎಸ್‌ ಸ್ಪಷ್ಟನೆ

By Santosh Naik  |  First Published Jun 1, 2023, 4:28 PM IST

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಅಥವಾ ಟಿಸಿಎಸ್‌ ಕಳೆದ ವರ್ಷ, ತನ್ನೆಲ್ಲಾ ಉದ್ಯೋಗಿಗಳು ಶೇ. 100 ವರ್ಕ್‌ ಫ್ರಮ್‌ ಹೋಮ್‌ನಿಂದ ಹೈಬ್ರಿಡ್‌ ಮಾಡೆಲ್‌ಗೆ ಶಿಫ್ಟ್‌ ಆಗಬೇಕು ಎಂದು ಹೇಳುವ ಮೂಲ, ಒಂದು ವಾರದಲ್ಲಿ ಮೂರು ದಿನ ಉದ್ಯೋಗಿಗಳು ಆಫೀಸ್‌ಗೆ ಬರಬೇಕು ಎಂದು ಸೂಚನೆ ನೀಡಿತ್ತು.
 


ಬೆಂಗಳೂರು (ಜೂ.1): ದೇಶದ ಅಗ್ರ ಐಟಿ ಸರ್ವೀಸ್‌ ಕಂಪನಿ ಟಿಸಿಎಸ್‌ ಅಥವಾ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌, ತನ್ನ ಉದ್ಯೋಗಿಗಳಿಗೆ ಕಡ್ಡಾಯವಾಗಿ ಆಫೀಸ್‌ಗೆ ಬಂದು ಕೆಲಸ ಮಾಡುವ ನಿಟ್ಟಿನಲ್ಲಿ ಕಠಿಣ ಎಚ್ಚರಿಕೆ ನೀಡಿರುವುದನ್ನು ನಿರಾಕರಿಸಿದೆ. ಮಾಧ್ಯಮ ವರದಿ ಬೆನ್ನಲ್ಲಿಯೇ ಹೇಳಿಕೆ ಬಿಡುಗಡೆ ಮಾಡಿರುವ ಟಿಸಿಎಸ್‌ ಕಂಪನಿಯ ವಕ್ತಾರರು, ನಾವು ನಮ್ಮ ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡಲು ಪ್ರೋತ್ಸಾಹ ನೀಡಿಲ್ಲ. ಆದರೆ, ಇದನ್ನು ಅವರ ಕೆಲಸ ಹಾಗೂ ಹರಿಹಾರಗಳಿಗೆ ಲಿಂಕ್‌ ಮಾಡಿಲ್ಲ' ಎಂದು ತಿಳಿಸಿದೆ. ಒಂದು ತಿಂಗಳಲ್ಲಿ ಕನಿಷ್ಠ 12 ದಿನಗಳ ಕೆಲಸವನ್ನು ಕಚೇರಿಯಲ್ಲಿ ಮಾಡದ  ಉದ್ಯೋಗಿಗಳಿಗೆ ಟಿಸಿಎಸ್‌ ಮೆಮೋಗಳನ್ನು ಕಳುಹಿಸಲು ಪ್ರಾರಂಭ ಮಾಡಿದೆ ಎಂದು ಮಾಧ್ಯಮ ವರದಿ ಬಂದ ಬಳಿಕ ಟಿಸಿಎಸ್‌ ತನ್ನ ಪ್ರಕಟಣೆ ನೀಡಿದೆ. ಹಾಗೇನಾದರೂ ನೌಕರರು ಕಂಪನಿಯ ನಿಯಮಗಳಿಗೆ ಬದ್ಧರಾಗಿರದೇ ಇದ್ದಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಮೆಮೊದಲ್ಲಿ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ವರದಿಯಾಗಿತ್ತು.

ನಮ್ಮ ಕ್ಯಾಂಪಸ್‌ಗಳು ಉದ್ಯೋಗಿಗಳಿಂದ ತುಂಬಿರಬೇಕು, ಅವರ ಶಕ್ತಿಯನ್ನು ನೋಡಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಎಲ್ಲಾ ಉದ್ಯೋಗಿಗಳು ಈ ರೋಮಾಂಚಕ ಪರಿಸರ ವ್ಯವಸ್ಥೆಯ  ಭಾಗವಾಗಬೇಕು ಅನ್ನೋದು ಆದ್ಯತೆ. ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಸಂಖ್ಯೆಯ ಉದ್ಯೋಗಿಗಳು ಟಿಸಿಎಸ್‌ಗೆ ಸೇರಿದ್ದಾರೆ. ಟಿಸಿಎಸ್‌ನ ಪರಿಸರವನ್ನು ಇವರುಗಳು ಅನುಭವಿಸುವುದು ಬಹಳ ಮುಖ್ಯವಾಗಿದೆ. ಅನುಭವಿ ಉದ್ಯೋಗಿಗಳ ಜೊತೆ ಬೆರೆತು, ಕಲಿಯಬೇಕು, ಬೆಳೆಯಬೇಕು ಹಾಗೂ ಒಟ್ಟಿಗೆ ಆನಂದಿಸಬೇಕು. ಆ ಮೂಲಕ ಸಂಸ್ಥೆಗೂ ನಾವು ಸೇರಿದ್ದವರು ಎನ್ನುವ ಬಂಧವನ್ನು ಬೆಳೆಸಲು ಹಾಗೂ ಇತರ ಉದ್ಯೋಗಳ ಜೊತೆ ಏಕೀಕರಣ ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ ಎಂದು ಟಿಸಿಎಸ್‌ ವಕ್ತಾರರು ತಿಳಿಸಿದ್ದಾರೆ.

ಕಳೆದ ಕೆಲವೊಂದು ತಿಂಗಳುಗಳಿಂದ ಭಾರತದಲ್ಲಿ ನಮ್ಮ ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡುವಂತೆ ತಿಳಿಸುತ್ತಿದ್ದೇವೆ. ಕಚೇರಿಗೆ ಮರಳಿದ ಬಳಿಕ ನಾವೂ ಕೂಡ ಉತ್ತಮ ಫಲಿತಾಂಶವನ್ನು ಅವರಿಂದ ಕಾಣುತ್ತಿದ್ದೇವೆ. ನಮ್ಮ  ಎಲ್ಲಾ ಉದ್ಯೋಗಿಗಳು ವಾರದಲ್ಲಿ ಮೂರು ದಿನ ಹಾಗೂ ಒಂದು ತಿಂಗಳ ಸರಾಸರಿಯಲ್ಲಿ ಕಚೇರಿಗೆ ಬರಬೇಕು ಎಂದು ಆಶಿಶುತ್ತೇವೆ. ಆದರೆ, ತಕ್ಷಣದ ಮಟ್ಟಿಗೆ ಇದನ್ನು ಅವರ ವೃತ್ತಿ ಹಾಗೂ ಪರಿಹಾರ ವಿಚಾರಗಳಿಗೆ ಲಿಂಕ್‌ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಕೊರೋನಾವೈರಸ್‌ ವ್ಯಾಪಕವಾಗಿದ್ದ ನಡುವೆಯೂ ಟಿಸಿಎಸ್‌ ತನ್ನ ಉದ್ಯೋಗಿಗಳು ಸಂಪೂರ್ಣ 100ರಷ್ಟು ವರ್ಕ್‌ ಫ್ರಮ್‌ ಹೋಮ್‌ ನೀಡಿರಲಿಲ್ಲ. ಸಾಧ್ಯವಾದಷ್ಟು ಕಚೇರಿಗೆ ಬಂದು ಕೆಲಸ ಮಾಡುವಂತೆ ತಿಳಿಸಿತ್ತು. ಅದರೊಂದಿಗೆ ಉದ್ಯೋಗಿಗಳಿಗೆ ಈ ಮೇಲ್‌ ಮಾಡಿದ್ದ ಕಂಪನಿ, ವಾರದಲ್ಲಿ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡುವಂತೆ ತಿಳಿಸಿತ್ತು.ವಾರದಲ್ಲಿ ಮೂರು ದಿನ ನೌಕರರನ್ನು ಕಚೇರಿಗೆ ಕರೆಯುವ ಟಿಸಿಎಸ್‌ ಮಾದರಿಯ ಪ್ರಕಾರ, ಶೇಕಡಾ 25 ಕ್ಕಿಂತ ಹೆಚ್ಚು ಟಿಸಿಎಸ್‌ ಉದ್ಯೋಗಿಗಳು ಒಂದು ನಿರ್ದಿಷ್ಟ ಹಂತದಲ್ಲಿ ಕಚೇರಿಯಿಂದ ಕೆಲಸ ಮಾಡಬೇಕಾಗುತ್ತದೆ.

 

Latest Videos

undefined

ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮ ಕಂಪನಿಗಳ ಟಾಪ್‌-10 ಲಿಸ್ಟ್‌, ನಿಮ್ಮ ಕಂಪನಿ ಇದ್ಯಾ ನೋಡಿ!

ರೋಸ್ಟರಿಂಗ್ ಯೋಜನೆಯ ಅವಶ್ಯಕತೆಗಳನ್ನು ಆಧರಿಸಿದೆ ಮತ್ತು ಫ್ರೆಷರ್‌ಗಳು ಮತ್ತು ಅನುಭವಿ ವೃತ್ತಿಪರರ ಮಿಶ್ರಣವನ್ನು ಕಚೇರಿಗೆ ಕರೆಯಲಾಗುವುದು ಎಂದು ಕಂಪನಿಯು ಕಳೆದ ವರ್ಷ ಹೇಳಿತ್ತು. ಈ ಪ್ರಕ್ರಿಯೆಯು ಕಂಪನಿಯ ಸುರಕ್ಷಿತ ಬಾರ್ಡರ್‌ಲೆಸ್ ವರ್ಕ್‌ಸ್ಪೇಸ್‌ಗಳಿಂದ (SBWS) ಹೆಚ್ಚು ಹೈಬ್ರಿಡ್ ಮಾದರಿಗೆ ಹಂತ ಹಂತದ ಪರಿವರ್ತನೆಯ ಭಾಗವಾಗಿದೆ ಎಂದು TCS ಹೇಳಿದೆ, ಇದು ತನ್ನ ಹೆಚ್ಚಿನ ಉದ್ಯೋಗಿಗಳಿಗೆ ವಾರದ ಕೆಲವು ದಿನಗಳವರೆಗೆ ಕಚೇರಿಯಿಂದ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

ಭಿನ್ನಾಭಿಪ್ರಾಯದಿಂದ ಟಿಸಿಎಸ್‌ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ರಾ ರಾಜೇಶ್ ಗೋಪಿನಾಥನ್!

click me!