ಟೆಕ್ ಕಂಪನಿಗಳ ಪೈಕಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಟಿಸಿಎಸ್ ಅಮೆರಿಕ ಟೆಕ್ಕಿಗಳ ಉದ್ಯೋಗ ಕಡಿತಗೊಳಿಸಿ ಈ ಸ್ಥಾನವನ್ನು H1-B ವೀಸಾ ಅಡಿಯಲ್ಲಿ ಭಾರತೀಯರಿಗೆ ನೀಡಲಾಗುತ್ತಿದೆ ಅನ್ನೋ ಆರೋಪ ಮಾಡಿದ್ದಾರೆ. ಏನಿದು ಪ್ರಕರಣ?
ನವದೆಹಲಿ(ಮಾ.30) ಭಾರತದ ಟೆಕ್ ಕಂಪನಿಗಳ ಪೈಕಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್(ಟಿಸಿಎಸ್) ದೇಶ ವಿದೇಶಗಳಲ್ಲಿ ಉದ್ಯೋಗಿಗಳನ್ನು ಹೊಂದಿದೆ. ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಅಮೆರಿಕದಲ್ಲಿ ಅಲ್ಲಿನ ಸ್ಥಳೀಯ ಟೆಕ್ಕಿಗಳ ಉದ್ಯೋಗವನ್ನು ಟಿಸಿಎಸ್ ಕಡಿತಗೊಳಿಸಿ, ಈ ಅವಕಾಶವನ್ನು H1-B ವೀಸಾ ಅಡಿಯಲ್ಲಿ ಭಾರತೀಯರಿಗೆ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರೆ. ನಮ್ಮನ್ನು ಅಕ್ರಮವಾಗಿ ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ ಎಂದು ಅಮೆರಿಕ ಟೆಕ್ಕಿಗಳು ಆರೋಪ ಮಾಡಿದ್ದಾರೆ. ಈ ಆರೋಪ ಅಮೆರಿಕ ಹಾಗೂ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
H1-B ವೀಸಾ ಮೂಲಕ ಅಮೆರಿಕದ ಕಂಪನಿಗಳು ವಿದೇಶದ ಪ್ರತಿಭಾನ್ವಿತರಿಗೆ ಉದ್ಯೋಗ ನೀಡುತ್ತಿದೆ. H1-B ವೀಸಾ ಅಡಿಯಲ್ಲಿ ವಿದೇಶಿ ಉದ್ಯೋಗಿಗಳು 3 ರಿಂದ 6 ವರ್ಷ ಅಮೆರಿಕದಲ್ಲಿ ಕೆಲಸ ಮಾಡಬಹುದು. ವೀಸಾ ನವೀಕರಣ ಮಾಡಬೇಕು. ಇನ್ನು ಅಮೆರಿಕದಲ್ಲೇ ನೆಲೆಸಲು ಗ್ರೀನ್ ಕಾರ್ಡ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇದೀಗ ಟಿಸಿಎಸ್ ಅಮೆರಿಕದ ಹಲವು ಟೆಕ್ಕಿಗಳನ್ನು ಅಕ್ರಮವಾಗಿ ಕೆಲಸದಿಂದ ತೆಗೆದು ಹಾಕುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ನೊಟಿಸ್ ನೀಡಿದ ಮರುದಿನ, ಕೆಲವೇ ಕ್ಷಣಗಳಲ್ಲಿ ಉದ್ಯೋಗ ಕಿತ್ತುಕೊಳ್ಳಲಾಗುತ್ತದೆ ಎಂದು ಕೆಲಸ ಕಳೆದುಕೊಂಡು ಅಮೆರಿಕದ ಟೆಕ್ಕಿಗಳು ಆರೋಪ ಮಾಡಿದ್ದಾರೆ.
undefined
ಕಚೇರಿಗೆ ಬನ್ನಿ ಇಲ್ಲ ಪರಿಣಾಮ ಎದುರಿಸಿ: ಟಿಸಿಎಸ್ ಉದ್ಯೋಗಿಗಳಿಗೆ ಸಂಸ್ಥೆಯ ಲಾಸ್ಟ್ ವಾರ್ನಿಂಗ್
ಅಮೆರಿಕದ ಸಮಾನ ಉದ್ಯೋಗ ಅವಕಾಶ ಕಮಿಷನ್‌ಗೆ ಕೆಲಸ ಕಳೆದುಕೊಂಡ ಟಿಸಿಎಸ್ ಟೆಕ್ಕಿಗಳುು ದೂರು ನೀಡಿದ್ದಾರೆ. 22 ಅಮೆರಿಕನ್ ಟೆಕ್ಕಿಗಳು ಈ ರೀತಿ ಅಕ್ರಮವಾಗಿ ಕೆಲಸ ಕಳೆದುಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ಟಿಸಿಎಸ್ ತಾರತಮ್ಯ ಮಾಡುತ್ತಿದೆ. ಯಾವುದೇ ಕಾರಣವಿಲ್ಲದೆ ಕೆಲಸದಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ಜನಾಂಗೀಯ ಕಾರಣ, ವಯಸ್ಸಿನ ಕಾರಣದಿಂದ ಟಾರ್ಗೆಟ್ ಮಾಡಿ ಕೆಲಸ ಕಿತ್ತುಕೊಳ್ಳಲಾಗುತ್ತಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಅಮೆರಿಕ ಟೆಕ್ಕಿಗಳು ಕಳೆದ ಹಲವು ವರ್ಷಗಳಿಂದ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಟಿಸಿಎಸ್ ಉದ್ಯೋಗ ಕಡಿತ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಶಾರ್ಟ್ ನೋಟಿಸ್ ಮೂಲಕ ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಹಲವು ವರ್ಷಗಳ ಸೇವೆಯನ್ನು ಕಂಪನಿ ಪರಿಗಣಿಸುತ್ತಿಲ್ಲ. ನಮ್ಮ ಕೆಲಸ ಕಿತ್ತುಕೊಂಡು H1-B ಅಡಿಯಲ್ಲಿ ಭಾರತೀಯರಿಗೆ ನೀಡಲಾಗುತ್ತಿದೆ ಎಂದಿದ್ದಾರೆ.
ವೇತನ ಹೆಚ್ಚಳ ಮತ್ತು ಬಡ್ತಿಗಾಗಿ ಉದ್ಯೋಗಿಗಳಿಗೆ ಷರತ್ತು ವಿಧಿಸಿದ ಐಟಿ ದಿಗ್ಗಜ ಟಿಸಿಎಸ್
ಈ ಆರೋಪಗಳಿಗೆ ಟಿಸಿಎಸ್ ಪ್ರತಿಕ್ರಿಯಿಸಿದೆ. ಟಿಸಿಎಸ್ ಯಾವುದೇ ಉದ್ಯೋಗಿಗಳನ್ನು ತಾರತಮ್ಯ ಮಾಡುತ್ತಿಲ್ಲ. ಪ್ರತಿಯೊಬ್ಬರಿಗೆ ಸಮಾನ ಅವಕಾಶ ನೀಡಲಾಗುತ್ತದೆ. ಯಾರಿಂದಲೂ ಕೆಲಸ ಕಿತ್ತುಕೊಂಡು ಇತರರಿಗೆ ನೀಡಲಾಗುತ್ತಿಲ್ಲ. ಉದ್ಯೋಗ ಕಡಿತ ಸೇರಿದಂತೆ ಹಲವು ಪ್ರಕ್ರಿಯೆಗಳು ಚಾಲನೆಯಲ್ಲಿದೆ. ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ಟಿಸಿಎಸ್ ಹೇಳಿದೆ.