Employees Compensation Act: ಕಾರ್ಮಿಕರ ಮರಣದ ದಿನದಿಂದಲೇ ಪರಿಹಾರ ಎಂದು ಸುಪ್ರೀಂ ತೀರ್ಪು

By Suvarna News  |  First Published Mar 13, 2022, 9:16 PM IST

 ಕೆಲಸಗಾರ ಸಾವನ್ನಪ್ಪಿದ ಕ್ಷಣದಿಂದಲೇ ಪರಿಹಾರ ನೀಡುವ ಉದ್ಯೋಗದಾತರ ಹೊಣೆಗಾರಿಕೆ ಶುರುವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ.


ಹೊಸದಿಲ್ಲಿ: ಕೆಲಸಗಾರ ಸಾವನ್ನಪ್ಪಿದ ಕ್ಷಣದಿಂದಲೇ ಪರಿಹಾರ (Employees Compensation) ನೀಡುವ ಉದ್ಯೋಗದಾತರ ಹೊಣೆಗಾರಿಕೆ ಶುರುವಾಗುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court of India) ತೀರ್ಪಿತ್ತಿದೆ. ಅಲ್ಲದೆ, ಬಡ್ಡಿಯನ್ನು ಸಹ ಮರಣದ ದಿನಾಂಕದಿಂದಲೇ ವಿಧಿಸಲಾಗುತ್ತದೆ, ಆಯುಕ್ತರು, ಅಂಗೀಕರಿಸಿದ ಆದೇಶದ ದಿನಾಂಕದಿಂದ ಅಲ್ಲ ಎಂದು ನ್ಯಾಯಾಲಯ ಶುಕ್ರವಾರ ಹೇಳಿದೆ.

2009ರಲ್ಲಿ ಮಹಾರಾಷ್ಟ್ರದ (Maharashtra) ಸೋಲಾಪುರ ಜಿಲ್ಲೆಯ ಹೊಲದಲ್ಲಿ ಕಬ್ಬು ಕಡಿಯುತ್ತಿದ್ದಾಗ ಹಾವು ಕಡಿತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಆ ಸಂದರ್ಭದಲ್ಲಿ ಕಂಟ್ರ್ಯಾಕ್ಟರ್ ಆಗಲಿ ಫ್ಯಾಕ್ಟರಿಯವರಾಗಲಿ ಪರಿಹಾರ ನೀಡಲಿಲ್ಲ. ಮೃತರ ಕುಟುಂಬ ಅಯುಕ್ತರ ಮೊರೆ ಹೊಕ್ಕಿತ್ತು. ನಂತರ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಯುಕ್ತರು ಆದೇಶಿಸಿದ್ದರು. 

Tap to resize

Latest Videos

undefined

ಆಯುಕ್ತರ ಆದೇಶದ ದಿನದಿಂದ 12 % ಬಡ್ಡಿಯನ್ನು ವಿಧಿಸಲಾಗಿತ್ತು. ಅದರ ವಿರುದ್ಧ ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇದೀಗ ವ್ಯಕ್ತಿ ಮರಣ ಹೊಂದಿದ ದಿನಾಂಕದಿಂದಲೇ 12% ಬಡ್ಡಿ ಪರಿಗಣಿಸಲ್ಪಡುತ್ತದೆ, ಆಯುಕ್ತರು ಆದೇಶ ನೀಡಿದ ದಿನಾಂಕದಿಂದಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 

RCFL RECRUITMENT 2022: ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದಲ್ಲಿ ನೇಮಕಾತಿ

ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರ ಶೇ. 8.1ಕ್ಕೆ ಇಳಿಕೆ!: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಶನಿವಾರದಂದು ಪ್ರಸಕ್ತ ಹಣಕಾಸು ವರ್ಷ 2021-22 ಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲೆ ಶೇಕಡಾ 8.1 ಬಡ್ಡಿದರವನ್ನು ಪಾವತಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇಂದು ನಡೆದ  ಇಪಿಎಫ್‌ಓನ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಶನಿವಾರ ಗುವಾಹಟಿಯಲ್ಲಿ ನಡೆದ ಇಪಿಎಫ್‌ಒ ಮಂಡಳಿ ಸಭೆಯಲ್ಲಿ ಟ್ರೇಡ್ ಯೂನಿಯನ್‌ಗಳಿಂದ ಹೆಚ್ಚಿನ ಪ್ರತಿರೋಧದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.  

ಇಪಿಎಫ್‌ಓ ಅಥವಾ ಸಿಬಿಟಿಯ ಟ್ರಸ್ಟಿಗಳ ಕೇಂದ್ರ ಮಂಡಳಿಯು ಸರ್ಕಾರ, ಕಾರ್ಮಿಕರು ಮತ್ತು ಉದ್ಯೋಗದಾತರ ಪ್ರತಿನಿಧಿಗಳನ್ನು ಒಳಗೊಂಡಿರುವ ತ್ರಿಪಕ್ಷೀಯ ಸಂಸ್ಥೆಯಾಗಿದೆ ಮತ್ತು ಸಿಬಿಟಿಯ ನಿರ್ಧಾರವು ಇಪಿಎಫ್‌ಒ ​​ಮೇಲೆ ಬದ್ಧವಾಗಿದ್ದು ಕಾರ್ಮಿಕ ಸಚಿವರು ಇದರ ನೇತೃತ್ವ ವಹಿಸುತ್ತಾರೆ.

8.5% ರಿಂದ 8.1%ಕ್ಕೆ ಇಳಿಕೆ:  ಈ ಹಿಂದೆ, ನಿವೃತ್ತಿ ಸಂಸ್ಥೆಯು ಜನರ ಆರ್ಥಿಕ ಸಂಪನ್ಮೂಲಗಳ ಮೇಲೆ ಕೋವಿಡ್‌ನ ಪ್ರಭಾವದ ಹಿನ್ನೆಲೆಯಲ್ಲಿ ಠೇವಣಿಗಳ ಗಣನೀಯ ಹಿಂಪಡೆಯುವಿಕೆಯ ಹೊರತಾಗಿಯೂ, 2020-21ರ ಆರ್ಥಿಕ ವರ್ಷಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 8.5 ಕ್ಕೆ ಬದಲಾಯಿಸದೆ ಇರಿಸಿತ್ತು. ಕೋವಿಡ್-19 ಸಾಂಕ್ರಾಮಿಕದ ನಂತರ ನಿವೃತ್ತಿ ನಿಧಿ ಸಂಸ್ಥೆಯು ಹೆಚ್ಚಿನ ಹಿಂಪಡೆಯುವಿಕೆ ಮತ್ತು ಕಡಿಮೆ ಠೇವಣಿಗಳನ್ನು ಕಂಡಿತು. ಅಲ್ಲದೇ ಡಿಸೆಂಬರ್ 31 ರವರೆಗೆ, ಮುಂಗಡ ಸೌಲಭ್ಯದ ಅಡಿಯಲ್ಲಿ ಒದಗಿಸಲಾದ 14,310.21 ಕೋಟಿ ಮೌಲ್ಯದ 56.79 ಲಕ್ಷ ಕ್ಲೈಮ್‌ಗಳನ್ನು ಇಪಿಎಫ್‌ಒ ಇತ್ಯರ್ಥಗೊಳಿಸಿದೆ.

BECIL Recruitment 2022: ನರ್ಸಿಂಗ್ ಟ್ಯೂಟರ್ ಹುದ್ದೆಗೆ ಬಿಇಸಿಐಎಲ್‌ ನೇಮಕಾತಿ

ಅದಕ್ಕೂ ಮೊದಲು, ಇಪಿಎಫ್‌ಓ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2019-20ಕ್ಕೆ ಏಳು ವರ್ಷಗಳ ಕನಿಷ್ಠ 8.5 ಪ್ರತಿಶತಕ್ಕೆ ಇಳಿಸಿತ್ತು. 2018-19ರಲ್ಲಿ ಬಡ್ಡಿ ದರ ಶೇ.8.65 ಇತ್ತು. ಇಪಿಎಫ್‌ಓ  ತನ್ನ ಚಂದಾದಾರರಿಗೆ 2017-18 ಕ್ಕೆ 8.55 ಶೇಕಡಾ ಬಡ್ಡಿದರವನ್ನು ಒದಗಿಸಿದೆ. 2016-17ರಲ್ಲಿ ಬಡ್ಡಿ ದರ ಶೇ.8.65 ಇತ್ತು.

ಹಣಕಾಸು ಸಚಿವಾಲಯದ ಅನುಮೋದನೆ ಅಗತ್ಯ:  ಇಪಿಎಫ್‌ಓಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿರುವ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ, ಪ್ರತಿ ವರ್ಷ ಭವಿಷ್ಯ ನಿಧಿ ಠೇವಣಿಗಳ ಮೇಲೆ ಒದಗಿಸಬೇಕಾದ ಬಡ್ಡಿದರಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಒಮ್ಮೆ ಸಿಬಿಟಿ ಒಂದು ಹಣಕಾಸಿನ ವರ್ಷಕ್ಕೆ ಇಪಿಎಫ್‌ಓ ಠೇವಣಿಗಳ ಮೇಲಿನ ಬಡ್ಡಿ ದರವನ್ನು ನಿರ್ಧರಿಸಿದರೆ, ಅದನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಹಣಕಾಸು ಸಚಿವಾಲಯದ ಮೂಲಕ ಸರ್ಕಾರವು ಅನುಮೋದಿಸಿದ ನಂತರವೇ ಇಪಿಎಫ್‌ಓ ​​ಬಡ್ಡಿದರವನ್ನು ಒದಗಿಸುತ್ತದೆ.

click me!