15 ದಿನದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೆಲ್ಸ ಕೊಟ್ಟ ಕ್ಯಾಂಪಸ್‌ ನೇಮಕಾತಿ

By Web DeskFirst Published Jun 17, 2019, 5:37 PM IST
Highlights

ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಇತ್ತೀಚಿನ ದಿನಗಳಲ್ಲಿ ಕ್ಯಾಂಪಸ್‌ ನೇಮಕಾತಿ ಗಣನೀಯವಾಗಿ ತಗ್ಗಿದೆ. ಇದರ ನಡುವೆಯೇ ಕ್ಯಾಂಪಸ್‌ ನೇಮಕಾತಿಯೊಂದರಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

ಗ್ರೇಟರ್‌ ನೋಯ್ಡಾ, (ಜೂ.17): ಗ್ರೇಟರ್‌ ನೋಯ್ಡಾದಲ್ಲಿರುವ ಗಲ್ ಗೋಟಿಯಾ ವಿಶ್ವವಿದ್ಯಾಲಯ ಈ ವರ್ಷ ಅಂದರೆ 2019ರ ಕ್ಯಾಂಪಸ್ ನೇಮಕಾತಿಯಲ್ಲಿ ಗರಿಷ್ಠ ಮಟ್ಟ ತಲುಪಿ ದಾಖಲೆ ಬರೆದಿದೆ.

ಗಲ್ ಗೋಟಿಯಾ ವಿಶ್ವವಿದ್ಯಾಲದಲ್ಲಿ ನಡೆದ ಕ್ಯಾಂಪಸ್ ನೇಮಕಾತಿಯಲ್ಲಿ ಮೊದಲ 15 ದಿನಗಳಲ್ಲಿ ಬರೋಬ್ಬರಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಅಮೆಜಾನ್, ಸ್ಯಾಮ್‌ಸಂಗ್,  ಫ್ಲಿಪ್‌ಕಾರ್ಟ್, ಎರಿಕ್ಸನ್, ಐಸಿಐಸಿಐ ಬ್ಯಾಂಕ್, ಫ್ಯೂಚರ್ ಗ್ರೂಪ್, ಹ್ಯಾವೆಲ್ಸ್, ಎಲ್‌ಜಿ ಎಲೆಕ್ಟ್ರಾನಿಕ್ಸ್ ಮತ್ತು ಅಶೋಕ್ ಲೇಲ್ಯಾಂಡ್ ಸೇರಿದಂತೆ 400 ಕ್ಕೂ ಹೆಚ್ಚು ಕಂಪನಿಗಳು ಕ್ಯಾಂಪಸ್ ನೇಮಕಾತಿ ನಡೆಸಿದ್ದವು.

ಇದರಲ್ಲಿ ಬಿಟೆಕ್ ವಿದ್ಯಾರ್ಥಿಗಳಲ್ಲಿ ಸುಮಾರು 71% ಮತ್ತು  ಶೇ.92ರಷ್ಟು ಎಂಬಿಎ ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರೆ, ಕಂಪ್ಯೂಟರ್ ಸೈನ್ಸ್ / ಐಟಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಶೇ. 90ರಷ್ಟು ಉದ್ಯೋಗಾವಕಾಶಗಳನ್ನು ಕಂಡಿಕೊಂಡಿದ್ದಾರೆ. ಇದಲ್ಲದೆ, ವಿಶ್ವವಿದ್ಯಾಲಯದ ಶೇ. 34ರಷ್ಟು ವಿದ್ಯಾರ್ಥಿಗಳು ವಿವಿಧ ಉದ್ಯೋಗ ಅವಕಾಶಗಳನ್ನು ಪಡೆದುಕೊಂಡಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಸುಮಾರು 90% ನಷ್ಟು ವಿದ್ಯಾರ್ಥಿಗಳು ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಐಟಿ / ಐಟಿಇಎಸ್, ಲಾ, ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಫಾರ್ಮಸಿ ಕ್ಷೇತ್ರಗಳಲ್ಲಿ ಆಯ್ಕೆಯಾಗಿರುವುದು ವಿಶೇಷ.

ಗಲ್ ಗೋಟಿಯಾ  ವಿಶ್ವವಿದ್ಯಾನಿಲಯವು ಹಲವಾರು ಸಾಂಸ್ಥಿಕ ಸಂಸ್ಥೆಗಳು ಮತ್ತು ಎಂಎನ್‌ಸಿ ಕಂಪನಿಗಳ ಜತೆ ಒಪ್ಪಂದಗಳನ್ನು ಹೊಂದಿದ್ದು, ಇದೀಗ ವಿದ್ಯಾಭ್ಯಾಸದ ಜತೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ನೀಡುವಲ್ಲಿ ಯಶಸ್ವಿಯಾಗಿದೆ.

ಆಗಾಗ ಇಂತಹ ಕ್ಯಾಂಪಸ್‌ ನೇಮಕಾತಿಗಳು ನಡೆಯುತ್ತಿದ್ದರೆ ವಿದ್ಯಾರ್ಥಿಗಳು ನೌಕರಿಗಾಗಿ ಅಲೆದಾಡುವುದು ತಪ್ಪುತ್ತದೆ.

click me!