ಸಂದರ್ಶನ ಸಖತ್ತಾಗಿ ಮಾಡಿದೀರಿ ಅನ್ನೋ ಸೂಚನೆಗಳಿವು...

By Suvarna News  |  First Published May 13, 2020, 5:58 PM IST

ಸಂದರ್ಶನ ಮುಗಿಸಿ ಕಾಲ್ ಬರುತ್ತೋ ಇಲ್ವೋ ಅನ್ನೋ ಅನುಮಾನದಲ್ಲಿ ಕೂತಿರಬೇಕಿಲ್ಲ, ನೀವು ಸಖತ್ತಾಗಿ ಮಾಡಿದ್ರೆ ನಿಮ್ಮನ್ನು ಸೆಲೆಕ್ಟ್ ಮಾಡೋ ಮನಸಿದೆ ಅನ್ನೋದನ್ನ ಸಂದರ್ಶಕರು ಅಲ್ಲೇ ಸೂಚಿಸಿರುತ್ತಾರೆ. 


ಉದ್ಯೋಗಕ್ಕೆ ಅಪ್ಲೈ ಮಾಡಿದ ಮೇಲೆ ಜನರ ತಲೆ ಕೊರೆಯುವುದು ಅದರ ಅಸ್ಪಷ್ಟತೆ. ಸಂದರ್ಶನ ಕೊಟ್ಟ ಮೇಲೆ ಆಯ್ಕೆಯಾಗ್ತೀನೋ ಇಲ್ವೋ, ಕಾಲ್ ಬರುತ್ತೋ ಇಲ್ವೋ ಎಂಬ ಗೊಂದಲದಲ್ಲಿ ದಿನ ತಳ್ಳುವುದಿದೆಯಲ್ಲ ಅದು ಬಹಳ ಕಠಿಣ ದಿನಗಳು. ಸಂದರ್ಶನದ ಬಳಿಕ ಶೇ.100ಕ್ಕೆ ನೂರರಷ್ಟು ಉದ್ಯೋಗ ಸಿಕ್ಕೇ ಸಿಗುತ್ತದೆ ಎಂದು ಹೇಳುವುದು ಕಷ್ಟವಾದರೂ, ಕೆಲವೊಂದು ಸೂಚನೆಗಳನ್ನು ಸರಿಯಾಗಿ ಗಮನಿಸಿದ್ರೆ ನಿಮಗೆ ಗುಡ್ ನ್ಯೂಸ್ ಇರಬಹುದಾದ ಹಿಂಟ್ ಸಿಕ್ಕಿರುತ್ತದೆ. ಮುಂದಿನ ಬಾರಿ ಸಂದರ್ಶನದಲ್ಲಿ ನಿಮ್ಮ ಭವಿಷ್ಯ ಏನಾಗುತ್ತದೆ ಎಂಬುದನ್ನು ಕಾಲ್ ಬರುವ ಮುನ್ನವೇ ಊಹಿಸಲು, ಸಖತ್ತಾಗಿ ಮಾಡಿದ್ದೀರಿ ಎಂದು ತಿಳಿಯಲು ಈ ವಿಷಯಗಳ ಬಗ್ಗೆ ಗಮನ ಹರಿಸಿ. 

ಉದ್ಯೋಗ ಕಳೆದುಕೊಳ್ಳುವ ಭಯವೇ? ಈಗಿಂದಲೇ ತಯಾರಿ ಮಾಡಿಕೊಳ್ಳಿ

- 'ಒಂದು ವೇಳೆ' ಎನ್ನದೆ ನಿರ್ದಿಷ್ಟ ಪದಗಳನ್ನು ಬಳಸಿದರೆ...
ಸಂದರ್ಶಕರ ಮಾತಿನಲ್ಲೇ ನಿಮಗೊಂದಿಷ್ಟು ಕ್ಲೂಗಳು ಸಿಗುತ್ತವೆ. ಸಾಮಾನ್ಯವಾಗಿ ಸಂದರ್ಶಕರು, 'ಒಂದು ವೇಳೆ ಆಯ್ಕೆಯಾದರೆ ಇಂಥ ದಿನದಿಂದ ಬರಬೇಕಾಗಬಹುದು', 'ಈ ಪೊಸಿಶನ್‌ಗೆ ಆಯ್ಕೆಯಾಗುವ ವ್ಯಕ್ತಿ ಇಂತಿಂಥ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾಗುತ್ತದೆ' ಹೀಗೆ ಮಾತನಾಡುತ್ತಿರುತ್ತಾರೆ. ಆದರೆ, ನೀವು ಅವರು ನೋಡುತ್ತಿರುವ ಪೊಸಿಶನ್‌ಗೆ ಸರಿಯಾದ ವ್ಯಕ್ತಿ ಎಂದು ಎನಿಸಿದಾಗ ಉದ್ದೇಶರಹಿತವಾಗಿ ಅವರ ಬಾಯಿಂದ 'ಇಲ್ಲೇ ನೀವು ಕೆಲಸ ಮಾಡಬೇಕಾಗಿರುವುದು', 'ಎಚ್‌ಆರ್ ನಿಮಗೆ ತರಬೇತಿ ನೀಡಿದ ಬಳಿಕ ತಿಳಿಯುತ್ತದೆ' ಇತ್ಯಾದಿ ಇತ್ಯಾದಿ ನೇರವಾಗಿ ನಿಮ್ಮನ್ನೇ ಉದ್ದೇಶಿಸಿ ಹೇಳುತ್ತಿದ್ದರೆ, ಅವರ ಮನಸ್ಸಿನಲ್ಲಿ ಆ ಪೊಸಿಶನ್‌ಗೆ ನೀವೇ ಸರಿಯಾದ ವ್ಯಕ್ತಿ ಎಂಬ ಇಂಪ್ರೆಶನ್ ಮೂಡಿದೆ ಎಂದರ್ಥ. 

Tap to resize

Latest Videos

undefined

- ಸಂದರ್ಶಕರ ಬಾಡಿ ಲಾಂಗ್ವೇಜ್
ಸಂದರ್ಶಕರು ಅಭ್ಯರ್ಥಿಯ ಆಂಗಿಕ ಭಾಷೆ ಗಮನಿಸುತ್ತಿರುತ್ತಾರೆ ನಿಜ. ಹಾಗೆಯೇ ನೀವು ಕೂಡಾ  ಸಂದರ್ಶಕರ ದೇಹಭಾಷೆ ಗಮನಿಸಿದರೆ ನಿಮಗೆ ಅಲ್ಲಿಯೇ ಅವರ ಮನಸ್ಸಿನಲ್ಲೇನಿದೆ ಎಂಬುದು ತಿಳಿದು ಹೋಗುತ್ತದೆ. ಅವರು ನಿಮ್ಮೊಂದಿಗೆ ಸ್ನೇಹದಿಂದ ಮಾತನಾಡುತ್ತಿದ್ದು, ನಿಮ್ಮ ಮಾತುಗಳನ್ನು ಚೆನ್ನಾಗಿ ತಲೆಯಾಡಿಸುತ್ತಾ, ಒಪ್ಪಿಕೊಳ್ಳುವಂತೆ ಹಮ್ ಎನ್ನುತ್ತಾ ಕೇಳುತ್ತಿದ್ದರೆ ನೀವು ಅವರಿಗೆ ಬೇಕೆಂದರ್ಥ. ಸಾಮಾನ್ಯವಾಗಿ ಜನರ ಯೋಚನೆಗಳು ಹೀಗೆ ದೇಹ ಭಾಷೆಯಲ್ಲಿ ಪ್ರತಿಫಲನವಾಗುವುದು ಅವರ ಗಮನದಲ್ಲಿ ಇರುವುದಿಲ್ಲ. 

- ಮಾತುಕತೆ ಕ್ಯಾಶುಯಲ್ ಆಗಿರುತ್ತದೆ
ಸಂದರ್ಶನ ಗಂಭೀರವಾಗಿದ್ದುದು ಮಧ್ಯದಲ್ಲೆಲ್ಲೋ ಬ್ಯುಸಿನೆಸ್‌ನಿಂದ ಫ್ರೆಂಡ್ಲಿ ಟಾಕ್‌ ಆರಂಭಿಸಿದರೆ, ಅದರರ್ಥ ಹೈರಿಂಗ್ ಮ್ಯಾನೇಜರ್ ಇಂಪ್ರೆಸ್ ಆಗಿದ್ದಾರೆ ಎಂದು.  ಅವರು ನಿಮ್ಮ ಕ್ವಾಲಿಫಿಕೇಶನ್‌ನಿಂದ ತೃಪ್ತರಾಗಿದ್ದು, ನೀವು ಅವರ ಟೀಂ ಸೇರುವುದರಿಂದ ನಿಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ ಎಂದರ್ಥ.  

ಕೊರೋನಾ ಜೊತೆಗೇ ಬಾಳಬೇಕು ಅಂದ್ರಲ್ಲ ಮೋದಿ, ಹಾಗಂದ್ರೇನು?

- ನೀವು ಹೆಚ್ಚು ಟೀಂ  ಮೆಂಬರ್ಸ್ ಮೀಟ್ ಆಗುತ್ತೀರಿ
ನಿಮಗೆ ಒಂದಾದ ಮೇಲೊಂದರಂತೆ ಇನ್ ಪರ್ಸನ್ ಮೀಟಿಂಗ್ ನಡೆಸುತ್ತಿದ್ದರೆ, ಒಬ್ಬರಾದ ಮೇಲೆ ಒಬ್ಬ ಟೀಂ ಮೆಂಬರ್ ಪರಿಚಯಿಸುತ್ತಾ ಅವರು ನಿಮ್ಮ ಸಂದರ್ಶನ ಮಾಡುತ್ತಿದ್ದರೆ ಇದೂ ಕೂಡಾ ಪಾಸಿಟಿವ್ ಸೈನ್ ಎಂಬುದರಲ್ಲಿ ಅನುಮಾನವೇ ಬೇಡ. ಸಂದರ್ಶಕರು ನಿಮ್ಮ ಬಗ್ಗೆ ಇಂಪ್ರೆಸ್ ಆಗಿದ್ದು,  ಇತರೆ ಸದಸ್ಯರ ಅಭಿಪ್ರಾಯವನ್ನೂ ತೆಗೆದುಕೊಳ್ಳುತ್ತಿರುತ್ತಾರೆ.  

- ಕಂಪನಿಯ ಮಾರ್ಕೆಟಿಂಗ್
ಸಂದರ್ಶನದ ಆರಂಭದಲ್ಲಿ ನಿಮ್ಮನ್ನು ನೀವು ಮಾರ್ಕೆಟಿಂಗ್ ಮಾಡಿಕೊಳ್ಳುವುದು ಇದ್ದೇ ಇದೆ. ನಂತರದಲ್ಲಿ ಇದ್ದಕ್ಕಿದ್ದಂತೆ ಸಂದರ್ಶಕರು ಗೇರ್ ಬದಲಿಸಿ, ಕಂಪನಿಯ ಮಾರ್ಕೆಟಿಂಗ್ ಶುರು ಹಚ್ಚಿದರೆ ಅವರಿಗೆ ನಿಮ್ಮನ್ನು ತೆಗೆದುಕೊಳ್ಳುವ ಇರಾದೆ ಇದೆ ಎಂದರ್ಥ. ಕಂಪನಿಯು ಉದ್ಯೋಗಿಗೆ ಕೊಡುವ ಸೌಲಭ್ಯಗಳ ಬಗ್ಗೆ ಅವರು ವಿವರಿಸುತ್ತಿದ್ದಾರೆಂದರೆ, ನೀವು ಹಲವೆಡೆ ಸಂದರ್ಶನ ಕೊಟ್ಟಿದ್ದರೂ ತಮ್ಮ ಕಂಪನಿಯನ್ನೇ ಆರಿಸಿಕೊಳ್ಳಲಿ ಎಂಬ ಉದ್ದೇಶ ಅವರದಾಗಿರುತ್ತದೆ. ನಿಮ್ಮನ್ನು ತೆಗೆದುಕೊಳ್ಳುವ ಮನಸ್ಸಿಲ್ಲದಿದ್ದಲ್ಲಿ, ಇಂಥ ಮಾತುಗಳಿಗಾಗಿ ಅವರಾದರೂ ಏಕೆ ಸಮಯ ವ್ಯರ್ಥ ಮಾಡುತ್ತಾರೆ ನೀವೇ ಹೇಳಿ?

- ಬಹಳ ಹೊತ್ತಿನ ಸಂದರ್ಶನ
ಸಂದರ್ಶನವು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು, ಸಂದರ್ಶಕರು ಹೆಚ್ಚಿನ ವಿವರಗಳನ್ನು ಹೆಕ್ಕುತ್ತಿದ್ದಾರೆಂದರೆ ನೀವು ಆ ಸಂದರ್ಶನ ಪಾಸ್ ಮಾಡಿದ್ದೀರಿ ಎಂದೇ ಅರ್ಥ. ಅವರ ಲಂಚ್ ಬ್ರೇಕ್ ಸಮಯವನ್ನು ಸ್ವಲ್ಪ ಕಟ್ ಮಾಡಿ ನಿಮ್ಮೊಂದಿಗೆ ಮಾತು ಮುಂದುವರಿಸುತ್ತಿದ್ದಾರೆಂದರೆ ನಿಮ್ಮನ್ನು ಫೈನಲ್ ಮಾಡಿ ಸಂದರ್ಶನದ ಕೆಲಸ ಮುಗಿಸಿಯೇ ಬಿಡೋಣ ಎಂದು ಯೋಚಿಸುತ್ತಿರಬಹುದು. 

click me!