
ನವದೆಹಲ (ನ.20 ) ಉದ್ಯೋಗ ಕಡಿತ ವಿಶ್ವದ ಹಲವು ದೇಶಗಳಲ್ಲಿ ತೀವ್ರವಾಗಿ ನಡೆಯುತ್ತಿದೆ. ಇದರ ಪರಿಣಾಮ ಭಾರತದ ಮೇಲೂ ತಟ್ಟಿದೆ. ಈಗಾಗಲೇ ಹಲವು ಕಂಪನಿಗಳು ಹಂತ ಹಂತವಾಗಿ ಉದ್ಯೋಗ ಕಡಿತ ಮಾಡಿದೆ. ಇದರಿಂದ ಹಲವರು ಉದ್ಯೋಗ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ನಿಫ್ಟಿ50 ಕಂಪನಿಯ ಉದ್ಯೋಗ ಕಡಿತಕ್ಕೆ ಸಿಲುಕಿ ಕೆಲಸ ಕಳೆದುಕೊಂಡ ಮ್ಯಾನೇಜರ್, ಬೇರೆ ಕೆಲಸವೂ ಸಿಗದೆ, ತನ್ನಲ್ಲಿ ಉಳಿತಾಯವೂ ಇಲ್ಲದೆ ಪರದಾಡುತ್ತಿದ್ದಾರೆ. ಕೆಲಸಕ್ಕಾಗಿ ಎಲ್ಲೆಡೆ ಅರ್ಜಿ ಹಾಕಿದರೂ ಎಲ್ಲೂ ಸಿಗುತ್ತಿಲ್ಲ, ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಅಳಲು ತೋಡಕೊಂಡಿದ್ದಾರೆ.
ರೆಡ್ಡಿಟ್ ಸೋಶಿಯಲ್ ಮೀಡಿಯಾ ಮೂಲಕ ನಿಫ್ಟಿ 50 ಕಂಪನಿಯ ಮ್ಯಾನೇಜರ್ ನೋವು ತೋಡಿಕೊಂಡಿದ್ದಾರೆ. ಆರ್ಥಿಕ ಹಿಂಜರಿತ, ವೆಚ್ಚ ಕಡಿತ ಸೇರಿದಂತೆ ಹಲವು ಕಾರಣಗಳಿಂದ ನಿಫ್ಟಿ 50 ಕಂಪನಿ ಉದ್ಯೋಗ ಕಡಿತ ಮಾಡಿತ್ತು. ಈ ಪೈಕಿ ಮ್ಯಾನೇಜರ್ ಕೂಡ ಕೆಲಸ ಕಳೆದುಕೊಂಡಿದ್ದರು. ಈ ಮ್ಯಾನೇಜರ್ ಸ್ಯಾಲರಿ ವರ್ಷಕ್ಕೆ 70 ಲಕ್ಷ ರೂಪಾಯಿ. ವೇತನಕ್ಕೆ ತಕ್ಕಂತೆ ತಮ್ಮ ಖರ್ಚು ವೆಚ್ಚಗಳು ಇದ್ದವೂ. ತಿಂಗಳ ಇಎಂಐ ಸೇರಿದಂತೆ ಹಲವು ಭಾದ್ಯತೆಗಳು ಈ ಮ್ಯಾನೇಜರ್ ಹೆಗಲ ಮೇಲಿತ್ತು. ಇದರ ನಡುವೆ ದಿಢೀರ್ ಉದ್ಯೋಗ ಕಡಿತದಿಂದ ಕಂಗಲಾಗಿದ್ದಾರೆ.
ರೆಡ್ಡಿಟ್‌ನಲ್ಲಿ ಹೇಳಿಕೊಂಡಿರುವಂತೆ ಬರೋಬ್ಬರಿ 18 ವರ್ಷದ ಅನುಭ ಕೆಲಸಕ್ಕೆ ಬರುತ್ತಿಲ್ಲ. ಉತ್ತಮ ಕೆಲಸ ಮಾಡಿ ತನ್ನ ಎಲ್ಲಾ ಟಾರ್ಗೆಟ್ ತಕ್ಕ ಸಮಯಕ್ಕೆ ಪೂರೈಸಿದರೂ ಇದೀಗ ಕೆಲಸ ಸಿಗುತ್ತಿಲ್ಲ. ನೌಕರಿ, ಲಿಂಕ್ಡ್‌ಇನ್ ಸೇರಿದಂತೆ ಎಲ್ಲಾ ವೇದಿಕೆಗಳ ಮೂಲಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಎಲ್ಲೂ ಓಪನಿಂಗ್ಸ್ ಇಲ್ಲ, ಕೆಲಸ ಸಿಗುತ್ತಿಲ್ಲ. 7 ತಿಂಗಳಿನಿಂದ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಇರುವ ಅಲ್ಪ ಸ್ವಲ್ಪ ಉಳಿತಾಯದಲ್ಲಿ ಇಲ್ಲೀವರೆಗೂ ಕುಟುಂಬ ನಿರ್ವಣಗೆ ಇತರ ಖರ್ಚು ವೆಚ್ಚ ನೋಡಿಕೊಂಡಿದ್ದಾರೆ. ಇತ್ತ ಬೇರೆ ಕೆಲಸ ಸಿಗುತ್ತಿಲ್ಲ. ಕೈಯಲ್ಲಿ ದುಡ್ಡಿಲ್ಲ. ಹೀಗಾಗಿ ತೀವ್ರ ಸಂಕಷ್ಟಕ್ಕ ಸಿಲುಕಿರುವುದಾಗಿ ಹೇಳಿಕೊಂಡಿದ್ದಾರೆ.
70 ಲಕ್ಷ ರೂಪಾಯಿ ವೇತನದ ಕಾರಣ ಐಷಾರಾಮಿ ಮನೆಯನ್ನು ಖರೀದಿಸಿದ್ದರು. ಮ್ಯಾನೇಜರ್ ಪೋಸ್ಟ್‌ಗೆ ಪ್ರಮೋಶನ್ ಬಳಿಕ ಈ ಮನೆ ಖರೀದಿ ಮಾಡಲಾಗಿತ್ತು. ಮನೆ ಕಂತಗಳು ವಿಪರೀತವಾಗಿದೆ. ವೇತನ ಇರುವಾಗ ಈ ಕಂತು ಗೊತ್ತಾಗುತ್ತಿರಲಿಲ್ಲ. ಇದೀಗ ಒಂದೊಂದು ತಿಂಗಳು ಕಳೆಯುವುದು ಸಾಹಸವಾಗಿದೆ. ಹೆಚ್ಚೆಂದರೆ ಇನ್ನು ಎರಡು ತಿಂಗಳು ಕಂತು ಕಟ್ಟಬಹುದು. ಅಲ್ಲಿನ ತನ್ನ ಎಲ್ಲಾ ಉಳಿತಾಯ ಮುಗಿಯಲಿದೆ. ಇತ್ತ ಕುಟುಂಬದ ಖರ್ಚು ವೆಚ್ಚ, ಸಾಲದ ಕಂತು ಕಟ್ಟಲು ಉದ್ಯೋಗ ಹಾಗೂ ಸ್ಯಾಲರಿ ಅನಿವಾರ್ಯವಾಗಿದೆ. ಕಳೆದ 7 ತಿಂಗಳಿಂದ ಪ್ರಯತ್ನ ಪಟ್ಟರೂ ಕೆಲಸ ಸಿಗುತ್ತಿಲ್ಲ. ಹೀಗಾಗಿ ಆತ್ಮಿವಿಶ್ವಾಸ, ಧೈರ್ಯ ಎಲ್ಲವೂ ನಡುಗಿ ಹೋಗಿದೆ. ಎಳು ತಿಂಗಳಲ್ಲಿ ಕೆಲಸ ಎಜೆನ್ಸಿಗಳಿಂದ 2 ಸಂದರ್ಶನಕ್ಕೆ ಬಂದಿತ್ತು. ಆದರೆ ಕೆಲಸ ಸಿಗಲಿಲ್ಲ. ನಾನು ಕಡಿಮೆ ವೇತನಕ್ಕೂ ದುಡಿಯಲು ಸಿದ್ಧನಿದ್ದೇನೆ. ಗೆಳೆಯರು, ಆಪ್ತರು ಪ್ರಯತ್ನಿಸಿದರೂ ಮಾರುಕಟ್ಟೆಯಲ್ಲಿ ಎಲ್ಲೂ ಕೆಲಸವಿಲ್ಲ. ನನಗೆ ಮಾತ್ರ ಹೀಗೆನಾ, ಅಥವಾ ಈ ರೀತಿಯ ಪರಿಸ್ಥಿತಿ ಯಾರಾದರೂ ಎದುರಿಸುತ್ತಿದ್ದಾರಾ? ಎಂದು ರೆಡ್ಡಿಟ್ ಮೂಲಕ ಪ್ರಶ್ನಿಸಿದ್ದಾರೆ. ಹಲವರು ಸಾಂತ್ವನ ಹೇಳಿದ್ದಾರೆ. ಆತ್ಮವಿಶ್ವಾಸದಿಂದ ಪ್ರಯತ್ನಿಸಲು ಸೂಚಿಸಿದ್ದಾರೆ. ಸ್ವಂತ ಉದ್ಯೋಗ ರೀತಿ ಏನಾದರು ಮಾಡಲು ಸಾಧ್ಯವೇ, ಅಥವಾ ಸಣ್ಣ ಕೆಲಸದ ಮೂಲಕ ಹೊಸ ಕರಿಯರ್ ಆರಂಭಿಸಲು ಸಾಧ್ಯವೇ ಎಂದು ಕೆಲ ಸಲಹೆಗಳನ್ನು ನೀಡಿದ್ದಾರೆ.