ಎನ್ಐಎಫ್‌ಟಿನಲ್ಲಿ ಪ್ರೊಫೆಸರ್ ಹುದ್ದೆ, 70 ಸಾವಿರ ರೂ.ವರೆಗೂ ವೇತನ

By Suvarna NewsFirst Published Mar 25, 2021, 3:51 PM IST
Highlights

ಫ್ಯಾಷನ್ ಟೆಕ್ನಾಲಜಿಯ ವಲಯದ ಪ್ರಮುಖ ಸಂಸ್ಥೆಯಾಗಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಟೆಕ್ನಾಲಜಿ(ಎನ್ಐಎಫ್‌ಟಿ) ಖಾಲಿ ಇರುವ 42 ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 70 ಸಾವಿರ ರೂ.ವರೆಗೂ ಸಂಬಳ ಸಿಗಲಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು 2021 ರ ಮೇ 7 ರಂದು ಅಥವಾ ಅದಕ್ಕೂ ಮೊದಲು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

42 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಈ ಪೈಕಿ 21 ಹುದ್ದೆಗಳು ಗುತ್ತಿಗೆಗೆ ಮತ್ತು 21 ಡೆಪ್ಯೂಟೇಷನ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬಹುದು.

Latest Videos

ಪತ್ರ ಬರೆದು, ಚಿನ್ನದ ಪದಕ ಗೆದ್ದು, ಸ್ವಿಜರ್ಲೆಂಡ್‌ಗೆ ಹೋಗಿ!

ಕಾಂಟ್ರಾಕ್ಟ್: ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಬೋಧನೆ ಅಥವಾ ಸಂಶೋಧನೆ ಮಾಡಿರಬೇಕು.  ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಕನಿಷ್ಠ ಹದಿನೈದು ವರ್ಷಗಳ ಅನುಭವ ಹೊಂದಿರಬೇಕು. ಅಥವಾ  ಸಂಬಂಧಿಸಿದ ಯಾವುದೇ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಪಿಎಚ್‌ಡಿ ಹೊಂದಿರಬೇಕು.

ಡೆಪ್ಯೂಟೇಷನ್:  ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕೇಂದ್ರ ಸರ್ಕಾರ/ರಾಜ್ಯ ಸರ್ಕಾರದ ಅಡಿಯಲ್ಲಿರುವ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಲ್ಲಿ ಬೋಧನಾ ಸಿಬ್ಬಂದಿಯ ಹುದ್ದೆಯಲ್ಲಿರಬೇಕು. ಅಥವಾ ಯಾವುದಾದ್ರೂ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಪಿಎಚ್‌ಡಿ ಪಡೆದ ಲೆವೆಲ್ -12 (7 ನೇ ಸಿಪಿಸಿ) ಯಲ್ಲಿ ನಿಯಮಿತವಾಗಿ ಅಥವಾ ಕನಿಷ್ಠ 5 ವರ್ಷಗಳ ನಿಯಮಿತ ಸೇವೆ ಸಲ್ಲಿಸಿರಬೇಕು.

ಕಾಂಟ್ರ್ಯಾಕ್ಟ್ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು 50 ವರ್ಷ ವಯಸ್ಸು ಮೀರಿರಬಾರದು. ಅದೇ ರೀತಿ, ಡೆಪ್ಯುಟೇಶನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ 56 ವರ್ಷ ಮಯೋಮಿತಿ ನಿಗದಿ ಮಾಡಲಾಗಿದೆ.

ಈ ಹುದ್ದೆಗಳಿಗೆ ಅರ್ಚಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 1,180 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ / ಮಹಿಳಾ ಅಭ್ಯರ್ಥಿಗಳು ಮತ್ತು ಎನ್‌ಐಎಫ್‌ಟಿ ಉದ್ಯೋಗಿಗಳಿಗೆ ಅಭ್ಯರ್ಥಿಗಳಿಗೆ ಯಾವುದೇ ನೋಂದಣಿ ಶುಲ್ಕವಿಲ್ಲ. ಅವರಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ ಅಥವಾ ಎನ್‌ಐಎಫ್‌ಟಿ ನಿಗದಿಪಡಿಸಿದ ಯಾವುದೇ ಮಾನದಂಡಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.

BSF ಕಾನ್ಸ್‌ಟೇಬಲ್ ಹುದ್ದೆಗಳಿಗೆ 10ನೇ ತರಗತಿ ಪಾಸಾದವರಿಗೆ ಅವಕಾಶ

ಅರ್ಜಿ ಸಲ್ಲಿಕೆ ಹೇಗೆ?
ಅರ್ಹತೆ, ಅನುಭವ, ವಯಸ್ಸು, ಜಾತಿ ಪ್ರಮಾಣಪತ್ರ (ಅನ್ವಯವಾಗುವಲ್ಲಿ), ಮತ್ತು ಅರ್ಜಿ ಶುಲ್ಕ ಖಾತೆಗೆ ಪಾವತಿಯಾಗುವ ನಾನ್-ರೀಫಂಡೇಬಲ್ ಡಿಮ್ಯಾಂಡ್ ಡ್ರಾಪ್ಟ್ ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ಸ್ವಯಂ ದೃಢಿಕರೀಸಿದ ಪ್ರತಿಗಳನ್ನ ಸಲ್ಲಿಸಬೇಕು. ರಿಜಿಸ್ಟ್ರಾರ್, ಎನ್‌ಐಎಫ್‌ಟಿ ಕ್ಯಾಂಪಸ್, ಹೌಜ್ ಖಾಸ್, ಗುಲ್‌ಮೋಹರ್ ಪಾರ್ಕ್ ಸಮೀಪ, ನವದೆಹಲಿ-110016 ಗೆ ಮೇ 5, 2020 ರೊಳಗೆ ಕಳುಹಿಸುವಂತೆ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಯ್ಕೆಯು ವೈಯಕ್ತಿಕ ಸಂದರ್ಶನದ ಕಾರ್ಯಕ್ಷಮತೆ ಅಥವಾ ಎನ್‌ಐಎಫ್‌ಟಿ ನಿಗದಿಪಡಿಸಿದ ಯಾವುದೇ ಮಾನದಂಡಗಳ ಆಧಾರದ ಮೇಲೆ ಇರಬೇಕು.

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಲೆವೆಲ್ -13 (7 ನೇ ಸಿಪಿಸಿ) / ಪಿಬಿ -4 [ರೂ 37, 400-ರೂ 67,000 + ಗ್ರೇಡ್ ಪೇ  8, 700 (6 ನೇ ಸಿಪಿಸಿ) ರೂಪಾಯಿವರೆಗೂ ಸಿಗಲಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2021 ಮೇ 7  ಕೊನೆಯ ದಿನವಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಹಾಗೂ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಎನ್ಐಎಫ್‌ಟಿಯ ಅಧಿಕೃತ ವೆಬ್‌ಸೈಟ್‌ https://nift.ac.in ಭೇಟಿ ನೀಡಬಹುದು.

ಬಿಇಸಿಐಎಲ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

click me!