
ಕೆಲಸ ಹುಡುಕುವುದು, ಸಂದರ್ಶನದಲ್ಲಿ ಭಾಗಿಯಾಗಿ ಕೆಲಸ ಗಿಟ್ಟಿಸಿಕೊಳ್ಳುವುದು ಸವಾಲು. ಅದರಲ್ಲೂ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಕಠಿಣ ಅಭ್ಯಾಸ, ತಯಾರಿ, ಪ್ರಯತ್ನಗಳು ಬೇಕಾಗುತ್ತದೆ. ಎಲ್ಲಾ ತಯಾರಿಯೊಂದಿಗೆ ಉದ್ಯೋಗ ಸಂದರ್ಶನದಲ್ಲಿ ಭಾಗಿಯಾದಾಗ ಕೇಳುವ ಪ್ರಶ್ನೆಗಳು ನಮ್ಮ ಆತ್ಮವಿಶ್ವಾಸವನ್ನೇ ಕುಗ್ಗಿಸಿ ಬಿಡುತ್ತದೆ. ಎಲ್ಲಾ ತಯಾರಿಯೊಂದಿಗೆ ತೆರಳಿದರೂ ಸಂದರ್ಶನದ ವೇಳೆ ಏನು ಗೊತ್ತಿಲ್ಲದಂತೆ ಭಾಸವಾಗುತ್ತದೆ. ಭಾರತೀಯ ಅಭ್ಯರ್ಥಿ ಕೆಲಸಕ್ಕಾಗಿ ಸಂದರ್ಶನದಲ್ಲಿ ಭಾಗಿಯಾದ ನಡೆದ ಘಟನೆಯನ್ನು ವಿವರಿಸಿದ್ದಾರೆ. ನಿಮಗೂ ಈ ರೀತಿಯ ಪ್ರಶ್ನೆಗಳು ಬಂದಿದೆಯಾ? ಬಂದರೆ ಈತ ನೀಡಿದ ಉತ್ತರ ನೆನಪಿನಲ್ಲಿ ಇಟ್ಟುಕೊಳ್ಳಿ.
ಟೆಕ್ಕಿ ಕೆಲಸಕ್ಕೆ ಸಂದರ್ಶನ ಕರೆಯಲಾಗಿತ್ತು. ಭಾರತೀಯ ಟೆಕ್ಕಿಯೊಬ್ಬರು ವಿದೇಶಿ ಮೂಲದ ಕಂಪನಿಯ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಸಂದರ್ಶನದ ವೇಳೆ ಕಂಪನಿಯ ಮ್ಯಾನೇಜರ್ ಸೇರಿದಂತೆ ಹಲವರು ಒಂದರ ಮೇಲೊಂದರಂತೆ ಪ್ರಶ್ನೆಗಳನ್ನು ಕೇಳಿದ್ದಾರೆ. ಕೆಲಸದ ಕುರಿತು, ತಾಂತ್ರಿಕ ಸವಾಲುಗಳ ಕುರಿತು ಪ್ರಶ್ನೆಗೆ ಭಾರತೀಯ ಅಭ್ಯರ್ಥಿ ತಾಳ್ಮೆಯಿಂದಲೇ ಉತ್ತರಿಸಿದ್ದಾರೆ. ಟೆಕ್ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಭಾರತೀಯ ಅಭ್ಯರ್ಥಿ ನಿಟ್ಟುಸಿರು ಬಿಟ್ಟಿದ್ದಾರೆ. ಇದರ ನಡುವೆ ಸಂದರ್ಶಕರು ಗೂಗ್ಲಿ ಪ್ರಶ್ನೆಯೊಂದನ್ನು ಕೇಳಿದ್ದಾರೆ.
ನೇಮಕಾತಿ ಇಂಟರ್ವ್ಯೂವ್‌ಗೆ ತಡವಾಗಿ ಬಂದ ಬಾಸ್, ಉದ್ಯೋಗ ಆಫರ್‌ನ್ನೇ ತಿರಸ್ಕರಿಸಿದ ಮಹಿಳೆ
ಸರಿ ಬಹುತೇಕ ಟೆಕ್ ಪ್ರಶ್ನೆಗಳನ್ನು ಕೇಳಿದ್ದೇವೆ. ಈಗ ನಮಗೆ ಏನಾದರೂ ಕಲಿಸಬೇಕು, ಆದರೆ ಅದು ಟೆಕ್ನಿಕಲ್ ಆಗಿರಬಾರದು ಎಂದಿದ್ದಾರೆ. ಈ ಪ್ರಶ್ನೆಗೆ ಅಭ್ಯರ್ಥಿ ತಬ್ಬಿಬ್ಬಾಗಿದ್ದಾರೆ. ಕಾರಣ ತನ್ನ ಕೆಲಸ, ಅನುಭವ, ಟೆಕ್ ಕ್ಷೇತ್ರದ ಪರಿಣಿತಿ ಕುರಿತು ಏನಾದರು ಕೇಳಿದರು ಹೇಳಿಬಿಡಬಹುದು. ಆದರೆ ಈ ಪ್ರಶ್ನೆಗೆ ನಾವು ಕೊಡುವ ಉತ್ತರ ಸರಿಯಾಗಿದೆಯಾ ಅಥವಾ ಸಮಂಜಸವೇ ಅನ್ನೋದು ತೀವ್ರ ಗೊಂದಲಕ್ಕೆ ಸಿಲುಕಿಸಿತ್ತು. 10 ಸೆಕೆಂಡ್ ಏನು ಹೇಳಬೇಕು ಅನ್ನೋದೇ ತೋಚಲಿಲ್ಲ. ಆದರೆ ತಕ್ಷಣ ಧೈರ್ಯ ಮಾಡಿ ಅಭ್ಯರ್ಥಿ ಉತ್ತರ ಆರಂಭಿಸಿದ್ದಾನೆ.
ಅಭ್ಯರ್ಥಿ ಹೇಳಿದ ಉತ್ತರ, ಸೌತೆ ಕಾಯಿ ಜ್ಯೂಸ್ ಹೇಗೆ ಮಾಡುವುದು ಅನ್ನೋದನ್ನು ಕಲಿಸಿದ್ದಾನೆ. ಸೌತೆ ಕಾಯಿ ಜ್ಯೂಸ್ ಮಾಡುವಾಗ ಏನೆಲ್ಲಾ ಸೇರಿಸಬೇಕು, ಜ್ಯೂಸ್ ಹೇಗೆ ಮಾಡಬೇಕು ಎಂದು ವಿವರಿಸಿದ್ದಾರೆ. ಇಷ್ಟೇ ಅಲ್ಲ ಈ ಸೌತೆ ಕಾಯಿ ಜ್ಯೂಸ್‌ನ ಆರೋಗ್ಯ ಪ್ರಯೋಜನ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಿದ್ದಾನೆ. ಈತನ ಉತ್ತರಕ್ಕೆ ಸಂದರ್ಶಕರು ಇಂಪ್ರೆಸ್ ಆಗಿದ್ದಾರೆ. ಕಾರಣ ತಕ್ಷಣ ನಾನ್ ಟೆಕ್ನಿಕಲ್ ಎಂದು ಪ್ರಶ್ನೆ ಕೇಳಿದಾಗ ಈ ರೀತಿಯ ಉತ್ತರವನ್ನು ಸಂದರ್ಶಕರು ನಿರೀಕ್ಷಿಸಿರಲಿಲ್ಲ.
ಈ ಘಟನೆ ಕುರಿತು ಭಾರತೀಯ ಅಭ್ಯರ್ಥಿ ರೆಡ್ಡಿಟ್‌ನಲ್ಲಿ ವಿವರಿಸಿದ್ದಾನೆ. ಈ ಘಟನೆ ಕುರಿತು ಹಲವರು ಪ್ರತಿಕ್ರಿಯಿಸಿದ್ದಾರೆ. ಹಲವರು ತಮಗೆ ಸಂದರ್ಶನದಲ್ಲಿ ಆಗಿರುವ ಅನುಭವ ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಹಲವರು ಅಭ್ಯರ್ಥಿ ಉತ್ತರವನ್ನು ಪ್ರಶಂಸಿಸಿದ್ದಾರೆ. ಇದು ನಿಜಕ್ಕೂ ಗೂಗ್ಲಿ ಎಂದು ಹೇಳಿದ್ದಾರೆ. ಉತ್ತರ ನಮ್ಮನ್ನೂ ಇಂಪ್ರೆಸ್ ಮಾಡಿದೆ. ಬಹುಶ ಈ ಉತ್ತರ ಕೇಳಿದ ಎಲ್ಲರು ಖುಷಿಯಾಗಿದ್ದಾರೆ. ಆದರೆ ನನ್ನ ಪ್ರಶ್ನೆ ಇದಲ್ಲ. ಈ ಉತ್ತರ ಕೇಳಿ ಅವರು ಕೆಲಸ ಕೊಟ್ಟಿದ್ದಾರಾ ಅಥವಾ ತಿರಸ್ಕರಿಸಿದ್ದರಾ ಎಂದು ಪ್ರಶ್ನಿಸಿದ್ದಾರೆ.
ನೀವು ಟ್ರಾವೆಲ್ ಪ್ರಿಯರಾಗಿದ್ರೆ, ಈ ಟ್ರಾವೆಲ್ ಜಾಬ್ ಗಳು ಬೆಸ್ಟ್… ಊರು ಸುತ್ತುತ್ತಾ ಹಣ ಗಳಿಸಿ!