
ಬೆಂಗಳೂರು (ಡಿ.25) ವಿಶ್ವದ ಅತೀ ದೊಡ್ಡ ಐಟಿ ಕಂಪನಿಗಳಲ್ಲಿ ಇನ್ಫೋಸಿಸ್ ಕೂಡ ಒಂದು. ಬೆಂಗಳೂರಿನ ಹೆಮ್ಮೆಯ ಇನ್ಫೋಸಿಸ್ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ. ಇದೀಗ ಇನ್ಫೋಸಿಸ್ ಫ್ರೆಶರ್ಸ್‌ಗೆ ಗುಡ್ ನ್ಯೂಸ್ ನೀಡಿದೆ. ಇನ್ಫೋಸಿಸ್ ಕಾಲೇಜು ಕ್ಯಾಂಪಸ್ ಇಂಟರ್ವ್ಯೂಗಿಂತ ತನ್ನ ಕ್ಯಾಂಪಸ್‌ನಲ್ಲೇ ನೇರ ಸಂದರ್ಶನ ಮೂಲಕ ಪ್ರತಿಭೆಗಳನ್ನು ಆಯ್ಕೆ ಮಾಡಲು ಹೆಚ್ಚು ಒತ್ತು ನೀಡಲು ಮುಂದಾಗಿದೆ. ಸದ್ಯ ಎಐ (ಆರ್ಟಿಫೀಶಿಯಲ್ ಇಂಟಲಿಜೆನ್ಸ್ ), ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಪದವಿದವರಿಗೆ ಉತ್ತಮ ವೇತನ ನೀಡಿ ಆಯ್ಕೆ ಮಾಡಲು ಮುಂದಾಗಿದೆ. ಆಕರ್ಷಕ ವೇತನಕ್ಕಾಗಿ ಇದೀಗ ಇನ್ಫೋಸಿಸ್ ಹೊಸಬರ ವೇತನವನ್ನು ಗರಿಷ್ಠ 21 ಲಕ್ಷ ರೂಪಾಯಿಗೆ ಏರಿಕೆ ಮಾಡಲು ಮುಂದಾಗಿದೆ.
ಇನ್ಫೋಸಿಸ್ ಇದೀಗ ಹೊಸಬರಿಗೆ ಭರ್ಜರಿ ವೇತನದ ಆಫರ್ ನೀಡಿದೆ. ಈ ಮೂಲಕ ಉತ್ತಮ ಪ್ರತಿಭೆಗಳನ್ನು ಹುಡುಕಿ ಆಯ್ಕೆ ಮಾಡಲು ಇನ್ಫೋಸಿಸ್ ಮುಂದಾಗಿದೆ. ಪ್ರೋಗಾಮರ್ (ಲೆವರ್ 1 ರಿಂದ 3), ಡಿಜಿಟಲ್ ಸ್ಪೆಷಲಿಸ್ಟ್ ಎಂಜಿನೀಯರ್ (ಟ್ರೈನಿ) ಸೇರಿದಂತೆ ಕೆಲ ಹುದ್ದೆಗಳಿಗೆ ನೇರ ಕ್ಯಾಂಪಸ್ ಸಂದರ್ಶನ ಮೂಲಕ ಆಯ್ಕೆ ಮಾಡಲು ಇನ್ಫೋಸಿಸ್ ಮುಂದಾಗಿದೆ. ಕೆಲಸ ಹಾಗೂ ಜವಾಬ್ದಾರಿಗೆ ಅನುಗುಣವಾಗಿ ಹೊಸಬರಿಗೆ ವಾರ್ಷಿಕವಾಗಿ 7 ರಿಂದ 21 ಲಕ್ಷ ರೂಪಾಯಿವರೆಗೆ ವೇತನ ನೀಡಲು ಇನ್ಫೋಸಿಸ್ ಮುಂದಾಗಿದೆ. ಬಿಇ, ಬಿಟೆಕ್, ಎಂಇ, ಎಂಟೆಕ್, ಎಂಸಿಎ, ಎಂಎಸ್‌ಸಿ (ಕಂಪ್ಯೂಟರ್ ಸೈನ್ಸ್), ಐಟಿ (ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಎಂಜಿನೀಯರಿಂಗ್) ಸೇರಿದಂತೆ ಕೆಲ ಪದವೀದರಿಗೆ ಅತ್ಯುತ್ತಮ ಆಫರ್ ನೀಡಲಾಗಿದೆ.
ಟ್ರೈನಿ ಲೆವಲ್ 3 ಹೊಸಬರು ವಾರ್ಷಿಕ ಗರಿಷ್ಠ 21 ಲಕ್ಷ ರೂಪಾಯಿವರೆಗೆ ವೇತನ ಪಡೆಯಲಿದ್ದಾರೆ. ಲೆವಲ್ 2 ಟ್ರೈನಿ ಹುದ್ದೆಗೆ ವಾರ್ಷಿಕ 16 ಲಕ್ಷ ರೂಪಾಯಿ, ಲೆವಲ್ 1 ಹುದ್ದೆಗೆ 11 ಲಕ್ಷ ರೂಪಾಯಿ ನೀಡಲಾಗುತ್ತದೆ. ಸ್ಪೆಷಲಿಸ್ಟ್ ಎಂಜಿನಿಯರ್ ಟ್ರೈನಿ ಹುದ್ದೆಗೆ 7 ಲಕ್ಷ ರೂಪಾಯಿ ವಾರ್ಷಿಕ ವೇತನ ನಿಗದಿಪಡಿಸಲಾಗಿದೆ.
ಪದವಿ, ವೃತ್ತಿಪರ ಕೋರ್ಸ್ ಮುಗಿಸುವವರಿಗೆ ಉತ್ತಮ ವೇತನ ನೀಡಲಾಗುತ್ತದೆ. ಈ ಮೂಲಕ ಪ್ರತಿಭಾನ್ವಿತರನ್ನು ಇನ್ಫೋಸಿಸ್ ಕಂಪನಿಗೆ ಸೇರಿಸಿಕೊಳ್ಳಲಿದೆ. ಹೊಸಬರರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ವೇತನವನ್ನು ಇನ್ಫೋಸಿಸ್ ನೀಡುತ್ತದೆ. ಈ ಮೂಲಕ ಫ್ರೆಶರ್ಸ್ ತಮ್ಮ ಕರಿಯರ್ ರೂಪಿಸಿಕೊಳ್ಳಲು ನೆರವಾಗಲಿದೆ ಎಂದು ಇನ್ಫೋಸಿಸ್ CHRO ಶಾದಿ ಮ್ಯಾಥ್ಯೂ ಹೇಳಿದ್ದಾರೆ.