ಯಾವ ರಾಶಿಯವರಿಗೆ ಯಾವ ರೀತಿ ಧನಲಾಭ?

By Suvarna NewsFirst Published Jun 4, 2020, 3:47 PM IST
Highlights

ಹಣ ಮಾಡೋಕೂ ಜಾತಕಬಲ ಬೇಕು. ಒಂದೊಂದು ರಾಶಿಗನುಗುಣವಾಗಿ ಒಂದೊಂದು ರೀತಿ ಧನಲಾಭ ಸಾಧ್ಯವಿರುತ್ತದೆ. ನೀವು ಏನು ಮಾಡಿದರೆ ಹೆಚ್ಚು ಹಣ ಸಂಪನ್ನರಾಗಬಹುದು?

ಹಣ ಮಾಡುವುದು, ಶ್ರೀಮಂತರಾಗುವುದು ಬಹುತೇಕ ಎಲ್ಲರ ಕನಸು. ಆದರೆ, ಸುಲಭದ ವಿಷಯವಲ್ಲ. ನೀವು ಚೆನ್ನಾಗಿಯೇ ಕೆಲಸ ಮಾಡುತ್ತಿರುತ್ತೀರಿ. ಎಲ್ಲರೂ ನಿಮ್ಮ ಕೆಲಸವನ್ನು ಹೊಗಳುತ್ತಾರೆ. ಆದರೆ, ಹಣ ಮಾತ್ರ ಅದಕ್ಕೆ ತಕ್ಕಂತೆ ನಿಮ್ಮ ಖಾತೆಗೆ ಹರಿಯುವುದಿಲ್ಲ. ಎಲ್ಲಿ ತಪ್ಪುತ್ತಿದ್ದೀರೆಂಬುದೇ ಅರಿವಾಗುವುದಿಲ್ಲ. ಬಹುಷಃ ಇದಕ್ಕೆ ನಿಮ್ಮ ಜಾತಕಫಲ ಕಾರಣವಿರಬಹುದು. 

ಶ್ರೀಮಂತರಾಗಲು ಪ್ರಾಮಾಣಿಕತೆ, ಹಾರ್ಡ್ ವರ್ಕ್, ಬದ್ಧತೆ, ಪ್ರಯತ್ನ ಮುಂತಾದವು ಬೇಕಾಗುತ್ತದೆ. ಆದರೆ, ಇವೆಲ್ಲ ತೋರಿದರೂ ಯಶಸ್ಸು ಸಿಗುತ್ತದೆಂದಿಲ್ಲ. ಕಾರಣ ಜ್ಯೋತಿಷ್ಯದಲ್ಲಿರಬಹುದು. ಪ್ರತಿ ರಾಶಿಯವರಿಗೂ ಕೆಲ ಮೂಲಗುಣಗಳಿರುತ್ತವೆ. ಅದಕ್ಕೆ ಅನುಗುಣವಾಗಿ ಅವರು ಉದ್ಯೋಗ ನೋಡಿಕೊಂಡು ಪ್ರಯತ್ನ ಹಾಕಿದರೆ ಹಣದ ಹರಿವು ಹೆಚ್ಚುತ್ತದೆ. 

ಭವಿಷ್ಯ ಹೇಳೋ ಸ್ಟಾರ್ಟ್‌ ಅಪ್‌ಗೆ ದಿನಕ್ಕೆ 14 ಲಕ್ಷ ರೂ.ಲಾಭ 

ಮೇಷ
ನಿಮ್ಮನ್ನು ಮಿತಿ ಹಾಕಿ ಕೂಡಿ ಹಾಕಿದರೆ ಉಸಿರುಗಟ್ಟಿದಂತಾಗಿ ಖಿನ್ನತೆಯ ಅನುಭವವಾಗುತ್ತದೆ. ಹಾಗಾಗಿ, ಬೆಳೆಯುತ್ತಿರುವ ಸ್ಟಾರ್ಟಪ್ ಕಂಪನಿಗಳು ನಿಮಗೆ ಬೆಸ್ಟ್. ಅಲ್ಲಿ ಹೊಸ ಹೊಸ ಟಾಸ್ಕ್‌ಗಳು ನಿಮಗೆ ಸವಾಲೆಸೆಯುತ್ತವೆ. ಅಲ್ಲಿ ನೀವು ಕಂಪನಿಯ ಬೆಳವಣಿಗೆಗಾಗಿ ತೆಗೆದುಕೊಳ್ಳುವ ರಿಸ್ಕ್‌ಗಳು ಬಹಳ ವರ್ಷಗಳ ಬಳಿಕವೂ ನಿಮ್ಮ ಹೆಸರನ್ನು ಉಳಿಸುತ್ತವೆ. 

ವೃಷಭ
ನಿಮ್ಮ ಸಂಬಳ ನಿಮಗೆ ಹುರುಪು ತುಂಬುತ್ತದೆ. ಹಾಗಾಗಿ, ನೀವು ಅರ್ಹರೆನಿಸಿದಾಗ ಸ್ಯಾಲರಿ ಹೈಕ್ ಮಾಡಲು ಕೇಳುವುದು, ಬೋನಸ್ ಕೇಳುವುದಕ್ಕೆ ಹಿಂದೆ ಬೀಳಬೇಡಿ. ನಿಮ್ಮ ರಾಶಿಯ ಮತ್ತೊಂದು ಗುಣವೆಂದರೆ ಕೆಲಸಗಳು ಮುಂದೋಡುವಂತೆ  ನೋಡಿಕೊಳ್ಳುವುದು. ಹಾಗಾಗಿ, ಹಳೆಯ ಕೆಲಸಗಳಿಗೆೇ ಸ್ಟಕ್ ಆಗದೆ, ಸದಾ ಹೊಸ ಹೊಸ ಅವಕಾಶಗಳಿಗಾಗಿ ಎದುರು ನೋಡುತ್ತಿರಿ. ಈ ಬದಲಾವಣೆಗಳು ನಿಮಗೆ ಹಣ ಹಾಗೂ ಬೆಳವಣಿಗೆಯನ್ನು ತಂದುಕೊಡುತ್ತವೆ. 

ಮಿಥುನ
ನೀವು ಜನರೊಂದಿಗೆ ಚೆನ್ನಾಗಿ ಬೆರೆಯಬಲ್ಲವರು. ಹಾಗಾಗಿ, ಹೊಸ ಅವಕಾಶಗಳನ್ನು ಪಡೆಯಲು ನಿಮ್ಮ ಈ ಕೌಶಲ್ಯವನ್ನು ಬಳಸಿಕೊಳ್ಳಿ. ನಿಮ್ಮ ಗೆಳೆಯರು ಹಾಗೂ ಸಹೋದ್ಯೋಗಿಗಳೊಂದಿಗೆ ಸದಾ ಚೆನ್ನಾಗಿ ಮಾತನಾಡಿಕೊಂಡು ಉತ್ತಮ ನೆಟ್ವರ್ಕ್ ಬೆಳೆಸಿಕೊಳ್ಳಿ. ಇದು ನಿಮಗೆ ಹಣದ ಹರಿವು ಹೆಚ್ಚಿಸುವ ಅವಕಾಶಗಳನ್ನು ತಂದುಕೊಡುತ್ತದೆ. 

ಕಟಕ
ಈ ರಾಶಿಯವರ ದೊಡ್ಡ ಸಮಸ್ಯೆ ಎಂದರೆ ಅವರ ಎಮೋಶನ್ಸ್. ನೀವು ಹೋಮ್‌ಲಿ ವ್ಯಕ್ತಿಯಾಗಿರುವುದರಿಂದ ಮನೆಯಲ್ಲೇ ಕುಳಿತು ಮಾಡುವಂಥ ಕೆಲಸಗಳು ನಿಮಗೆ ಕೈ ಹಿಡಿಯುತ್ತವೆ. ಇದು ನಿಮಗೆ ನೆಮ್ಮದಿ, ಸಂತೋಷವನ್ನೂ ತಂದುಕೊಡುತ್ತದೆ. 

ಸಿಂಹ
ಸೃಜನೆಶೀಲತೆಗೆ ಹೆಸರಾದ ಸಿಂಹ ರಾಶಿಯವರಿಗೆ ಕೋಟ್ಯಧಿಪತಿಯಾಗುವ ಅವಕಾಶಗಳಿವೆ. ನೀವು ಸುಲಭವಾಗಿ ನಿಮ್ಮತ್ತ ಇತರರ ಗಮನ ಸೆಳೆಯಬಲ್ಲಿರಿ. ಹಾಗಾಗಿ, ನಿಮಗೆ ಕೊಡುವ ಸರಳ ಟಾಸ್ಕ್ ಮಾಡಿಕೊಂಡು ಇದ್ದುಬಿಡಬೇಡಿ. ನಿಮ್ಮ ಸಾಮರ್ಥ್ಯ ತೋರಿಸಲು ಸಾಧ್ಯವಾಗುವ ಟಫ್ ಕೆಲಸಗಳನ್ನು ಹುಡುಕಿ. ಅವುಗಳಲ್ಲಿ ನಿಮ್ಮ ಯಶಸ್ಸು ಅಡಗಿದೆ. 

ಕನ್ಯಾ
ಹಣದ ವಿಷಯದಲ್ಲಿ ನೀವು ಪಕ್ಕಾ ಪ್ರಾಕ್ಟಿಕಲ್. ಬಹಳ ಸಂಬಳದ ಕೆಲಸ ಸಿಕ್ಕಲಿಲ್ಲವೆಂದು ದುಃಖಿಸುತ್ತಾ ಕೂರುವವರು ನೀವಲ್ಲ. ಬಂದಿದ್ದನ್ನೇ ಬುದ್ಧಿವಂತಿಕೆಯಿಂದ ಬಳಸಿ ಉಳಿಸುವವರು. ಕೇವಲ ಹಣವೊಂದೇ ನಿಮಗೆ ಮುಖ್ಯವಲ್ಲ, ಎಲ್ಲಿ ಕೆಲಸ ಮಾಡುತ್ತೀರಿ, ಅದು ಎಷ್ಟು ಗೌರವ ತಂದುಕೊಡುತ್ತದೆ ಎಂಬುದು ಕೂಡಾ ನಿಮಗೆ ಮುಖ್ಯವಾಗುತ್ತದೆ. ಸಂಶೋಧನೆ ಆಧಾರಿತ ಕೆಲಸಗಳು ನಿಮ್ಮ ಕೈ ಹಿಡಿಯಬಲ್ಲವು. 

ತುಲಾ 
ಶಾಂತಿಯುತವಾದ ಉತ್ತಮ ಕಚೇರಿ ವಾತಾವರಣ ಹುಟ್ಟು ಹಾಕುವಲ್ಲಿ, ಜನರನ್ನು ಖುಷಿಗೊಳಿಸುವಲ್ಲಿ ತುಲಾ ರಾಶಿಯವರು ಕಲಾಕಾರರು. ಆದರೆ ನೀವು ಮುಂಚೂಣಿಯಲ್ಲಿ ನಿಂತು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಜನರು ನಿಮ್ಮ ಮಾತುಗಳನ್ನು ಕೇಳುವಂತೆ ಮಾತನಾಡುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು. ಈ ಬೋಲ್ಡ್ ಆ್ಯಟಿಟ್ಯೂಡ್ ನಿಮ್ಮನ್ನು ಕಚೇರಿಯಲ್ಲಿ ಬೆಳೆಸುತ್ತದೆ. 

ವೃಶ್ಚಿಕ
ನೀವು ನಿಮ್ಮ ಕೆಲಸದ ಬಗ್ಗೆ ಸ್ವಯಂ ಪ್ರೇರಿತರಾಗುವವರು. ಜೊತೆಗೆಯೇ ಹೊಸ ಅವಕಾಶಗಳ ಬಗ್ಗೆ ಹೆಚ್ಚು ಓಪನ್ ಆಗಿದ್ದರೆ, ಹಣ ಮಾಡುವ ಹೊಸ ದಾರಿಗಳು ತೆರೆದುಕೊಳ್ಳುತ್ತವೆ. 

ಧನು
ಮೀಟಿಂಗ್ಸ್, ಕ್ಲೈಂಟ್ ವರ್ಕ್‌ಗಳಲ್ಲಿ ಧನು ರಾಶಿಯವರು ಉಳಿದವರಿಗಿಂತ ಒಂದು ಕೈ ಮುಂದೆಯೇ. ಹಾಗಾಗಿ, ಸಾಧ್ಯವಾದಷ್ಟು ಕಂಪನಿ ಸ್ಪಾನ್ಸರ್ಡ್ ಈವೆಂಟ್‌ಗಳನ್ನು ಮಾಡಿ ಜನಪ್ರಿಯತೆ ಹೆಚ್ಚಿಸಿಕೊಳ್ಳಿ ಹಾಗೂ ಹೊಸ ಅವಕಾಶಗಳನ್ನು ಪಡೆದುಕೊಳ್ಳಿ. 

ಖರ್ಚುವೆಚ್ಚ ತಗ್ಗಿಸಿದ ವಿವಾಹದ ಹೊಸ ಟ್ರೆಂಡ್, ಮಧ್ಯಮ ವರ್ಗಕ್ಕಿದು ವರ!

ಮಕರ
ಮಹತ್ವಾಕಾಂಕ್ಷೆಯವರೂ, ಉದ್ಯೋಗದ ಬಗ್ಗೆ ಪ್ರೀತಿ ಇರುವವರೂ ಆದ ಈ ರಾಶಿಯವರ ಉತ್ತಮ ಸ್ವಉದ್ಯೋಗದಾತರು ಆಗಬಹುದು. ಅವರ ಹಾರ್ಡ್ ವರ್ಕ್ ಹಾಗೂ ಹಣ ಬಳಕೆಯ ಕೌಶಲಗಳು ಅವರ ನೆರವಿಗೆ ಬರುತ್ತವೆ. ಆದರೆ, ನಿಮ್ಮ ಹಾರ್ಡ್ ವರ್ಕನ್ನು ತಪ್ಪು ದಿಕ್ಕಿನಲ್ಲಿ ಹಾಕಿ ವ್ಯರ್ಥ ಮಾಡಬೇಡಿ. 

ಕುಂಭ
ಹುಟ್ಟು ನಾಯಕರು ಇವರು. ಬುದ್ಧಿವಂತಿಕೆ ಹಾಗೂ ಕ್ರಿಯಾಶೀಲತೆ ಇವರ ಅಸ್ತ್ರಗಳು. ಆದರೆ, ನೀವು ಟೀಂ ಸದಸ್ಯರ ಬಗ್ಗೆ ಹೆಚ್ಚು ಸೆನ್ಸಿಟಿವ್ ಆಗುವ ಅಗತ್ಯವಿದೆ. ಅದರಲ್ಲೂ ಅಷ್ಟು ಚೆನ್ನಾಗಿ ಉದ್ಯೋಗ ತಿಳಿಯದಿರುವವರನ್ನು ಕಡೆಗಣಿಸದೆ ಪ್ರೋತ್ಸಾಹಿಸುವುದು ಮುಖ್ಯ. ಅವರ ಸಾಮರ್ಥ್ಯಗಳನ್ನು ಹೊರತೆಗೆವ ಕೆಲಸ ಮಾಡಿ. ಇದರಿಂದ ಉತ್ತಮ ಟೀಂ ಲೀಡರ್ ಆಗಿ ಪ್ರಮೋಶನ್‌ಗಳನ್ನು ಪಡೆಯಬಲ್ಲಿರಿ. 
 

click me!