
ದುಬೈ(ಮೇ.02) ಉತ್ತಮ ವೇತನದ ಕೆಲಸಕ್ಕೆ ಎಲ್ಲರು ಹಾತೊರೆಯುತ್ತಾರೆ. ಇದೇ ಕಾರಣಕ್ಕೆ ಹಲವರು ವಿದೇಶಕ್ಕೆ ತೆರಳುತ್ತಾರೆ. ಇದೀಗ ದುಬೈ ಎಜೆನ್ಸಿಯೊಂದು ಹಾಕಿದ ನೇಮಕಾತಿ ಜಾಹೀರಾತಿಗೆ ಅಭ್ಯರ್ಥಿಗಳು ಮುಗಿಬಿದ್ದಿದ್ದಾರೆ. ಪೋಸ್ಟ್ ಹಾಕಿದ ಬೆನ್ನಲ್ಲೇ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದೆ. ಕಾರಣ ಮ್ಯಾನೇಜರ್ ಕೆಲಸ, ಕೈಕೆಳಗಿನ ಒಂದಷ್ಟು ಸಿಬ್ಬಂದಿಗಳನ್ನು ನೋಡಿಕೊಳ್ಳಬೇಕು, ನಿರ್ವಹಣೆ ಮಾಡಬೇಕು. ಇಷ್ಟೇ ನೋಡಿ, ವೇತನ ಬರೋಬ್ಬರಿ 84 ಲಕ್ಷ ರೂಪಾಯಿ. ಹೀಗಾಗಿ ಈ ನೇಮಕಾತಿ ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಕೊನೆಯ ದಿನಾಂಕ ಇನ್ನು ಬಾಕಿ ಇರುವ ಕಾರಣ ಈಗಲೂ ಅರ್ಜಿ ಸಲ್ಲಿಕೆಯಾಗುತ್ತಿದೆ.
ಆಯ್ಕೆಯಾದವರಿಗೆ ಕಾದಿಗೆ 84 ಲಕ್ಷ ರೂಪಾಯಿ ಸ್ಯಾಲರಿ
ದುಬೈನಲ್ಲಿರುವ ರಾಯಲ್ ಮೈಸನ್ ಉದ್ಯೋಗ ನೇಮಕಾತಿ ಎಜೆನ್ಸಿ ಈ ಕುರಿತು ಪೋಸ್ಟ್ ಹಾಕಿದೆ. ದುಬೈ ಹಾಗೂ ಅಬುಧಾಬಿಯಲ್ಲಿ ಅತೀ ದೊಡ್ಡ ಉದ್ಯೋಗ ನೇಮಕಾತಿ ಎಜೆನ್ಸಿ ಆಗಿರುವ ರಾಯಲ್ ಮೈಸನ್ ಇದೀಗ ವಾರ್ಷಿಕ 84 ಲಕ್ಷ ರೂಪಾಯಿ ಅಂದರೆ ತಿಂಗಳಿಗೆ 7 ಲಕ್ಷ ರೂಪಾಯಿ ಸ್ಯಾಲರಿಯ ಹೌಸ್ ಮ್ಯಾನೇಜರ್ ನೇಮಕಾತಿಗೆ ಆಸಕ್ತರು ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
ಯೂನಿಯನ್ ಬ್ಯಾಂಕ್ 500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ ₹85,000 ಸಂಬಳ
ಎರಡು ಹುದ್ದೆಗೆ ನೇಮಕಾತಿ
ರಾಯಲ್ ಮೈಸನ್ ಜಾಹೀರಾತಿನಲ್ಲಿರುವ ಮಾಹಿತಿ ಪ್ರಕಾರ, ಫುಲ್ ಟೈಮ್ ಉದ್ಯೋಗ ಇದಾಗಿಗೆ. ಹುದ್ದೆ ಹೌಸ್ ಮ್ಯಾನೇಜರ್. ದುಬೈ ಹಾಗೂ ಅಬುಧಾಬಿ ಮೂಲದ ಎರಡು ವಿಐಪಿ ಮನೆಗಳನ್ನು ನಿರ್ವಹಣೆ ಮಾಡಲು ಹೌಸ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಮಾಡಲಾಗುತ್ತಿದೆ. ಖಾಲಿ ಇರುವ ಹುದ್ದೆ ಎರಡು. ತಿಂಗಳ ವೇತನ 30,000 AED ಅಂದರೆ ಭಾರತೀಯ ರೂಪಾಯಿಗಳಲ್ಲಿ 7 ಲಕ್ಷ ರೂಪಾಯಿ. ವಾರ್ಷಿತ ವೇತನ 84 ಲಕ್ಷ ರೂಪಾಯಿ.
ಹೌಸ್ ಮ್ಯಾನೇಜರ್ ಕೆಲಸವೇನು?
ದುಬೈ ಹಾಗೂ ಅಬುಧಾಬಿಯಲ್ಲಿರುವ ಎರಡು ವಿಐಪಿ ಮನೆಗಳನ್ನು ನೋಡಿಕೊಳ್ಳಲು ಇಬ್ಬರು ಹೌಸ್ ಮ್ಯಾನೇಜರ್ ಬೇಕಾಗಿದ್ದಾರೆ. ಮನೆ ಕೆಲಸಗಳಿಗೆ ಸಿಬ್ಬಂದಿಗಳಿದ್ದಾರೆ, ಅವರನ್ನು ನಿಭಾಯಿಸಬೇಕು. ಸೂಪರ್‌ವೈಸರ್ ಆಗಿ ಕೆಲಸ ಮಾಡಬೇಕು. ಮನೆಯ ನಿರ್ವಹಣೆ ಸಿಬ್ಬಂದಿಗಳ ಜೊತೆ ಕಾರ್ಡಿನೇಟ್ ಮಾಡಬೇಕು. ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕು. ಮನೆಯ ಎಲ್ಲಾ ವಸ್ತುಗಳು ಉತ್ತವಾಗಿ, ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಶುಚಿಯಾಗಿಟ್ಟುಕೊಳ್ಳುವುದು ಸೇರಿದಂತೆ ಸಂಪೂರ್ಣ ಮನೆಯ ಜವಾಬ್ದಾರಿ ತೆಗೆದುಕೊಳ್ಳಬೇಕು.
ಪ್ರತಿಭಾನ್ವಿತ, ನುರಿತರಿಗೆ ಮೊದಲ ಆದ್ಯತೆ
ಮನೆ ನಿರ್ವಹಣೆ ಅಥವಾ ಈ ಕ್ಷೇತ್ರದಲ್ಲಿ ನುರಿತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ರಾಯಲ್ ಮೈಸನ್ ಎಜೆನ್ಸಿ ಹೇಳಿದೆ. ಆಸಕ್ತರು ರೆಸ್ಯೂಮ್ ಇಮೇಲ್ ಮಾಡಲು ಸೂಚಿಸಿದೆ. recruitment@royal-maison.com ಇಮೇಲ್ ವಿಳಾಸಕ್ಕೆ ಅರ್ಜಿ ಕಳುಹಿಸಲು ಸೂಚಿಸಿದೆ. ಅರ್ಹತೆ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದಿದೆ.
ರಾಯಲ್ ಮೈಸನ್ ಈ ಕುರಿತು ಜಾಹೀರಾತು ನೀಡಿದೆ. ಉದ್ಯೋಗ ಹಾಗೂ ನೇಮಕಾತಿ ಕುರಿತು ರಾಯಲ್ ಮೈಸನ್ ಅಧಿಕೃತ ಸಿಬ್ಬಂದಿಗಳನ್ನು, ಅಥವಾ ವೆಬ್‌ಸೈಟ್ ಮೂಲಕ ಸಂಪರ್ಕಿಸಿ ಮಾಹಿತಿ ಖಚಿತಪಡಿಸಿಕೊಳ್ಳಿ.
12000 ಮಂದಿ ಪೌರಕಾರ್ಮಿಕರ ನೌಕರಿ ಕಾಯಂ, ನುಡಿದಂತೆ ನಡೆದ ರಾಜ್ಯ ಸರ್ಕಾರ!