
ಪ್ರೈವೇಟ್ ಜಾಬ್ (Private Job) ನಲ್ಲಿರೋರು ಕೆಲ್ಸ ಬದಲಿಸೋದು ಸಾಮಾನ್ಯ. ಸಂಬಳ, ಉನ್ನತ ಹುದ್ದೆ ಸೇರಿದಂತೆ ನಾನಾ ಕಾರಣಕ್ಕೆ ಜನರು ಜಾಬ್ ಬದಲಿಸ್ತಾರೆ. ಖಾಸಗಿ ಉದ್ಯೋಗಿಗಳು ಕೆಲ್ಸ ಬಿಡೋದು, ಬದಲಿಸೋದು ತಪ್ಪಲ್ಲ. ಆದ್ರೆ ಕೆಲ್ಸ ಬದಲಿಸುವ ಮುನ್ನ ಕೆಲ ವಿಷ್ಯಗಳನ್ನು ತಿಳಿದಿರ್ಬೇಕು. ಇದು ನಿಮ್ಮ ಮುಂದಿನ ಜೀವನಕ್ಕೆ ಸಹಾಯವಾಗಲಿದೆ. ಮುಂದೆ ಪಶ್ಚಾತಾಪಪಡುವಂತಹ ಸ್ಥಿತಿ ಬರೋದಿಲ್ಲ.
• ಬುದ್ದಿಗೆ ಕೆಲ್ಸ ಕೊಡಿ : ಕೆಲ್ಸ ಅಂದ್ಮೇಲೆ ನಾನಾ ಸಮಸ್ಯೆ ಸಾಮಾನ್ಯ. ಕೆಲ್ಸದ ಒತ್ತಡ, ಕಚೇರಿ ರಾಜಕೀಯ ಸೇರಿದಂತೆ ನೀವು ಅನೇಕ ಸವಾಲು, ಸಮಸ್ಯೆ ಎದುರಿಸಬೇಕಾಗುತ್ತೆ. ಆದ್ರೆ ಅದನ್ನೆಲ್ಲ ಬದಿಗಿಟ್ಟು ಕೆಲ್ಸದ ಬಗ್ಗೆ ಆಲೋಚನೆ ಮಾಡಿ. ಎಲ್ಲ ಕಚೇರಿಯಲ್ಲೂ ಇಂಥ ಸಮಸ್ಯೆಗಳು ಎದುರಾಗೇ ಆಗುತ್ವೆ. ಅದನ್ನು ತಿಳಿದೇ ನೀವು ಮುಂದಿನ ನಿರ್ಧಾರ ತೆಗೆದುಕೊಳ್ಳಿ.
• ನೋಟಿಸ್ ಪಿರಿಯಡ್ : ಏಕಾಏಕಿ ಕೆಲ್ಸ ಬಿಡೋದು ಕಷ್ಟ. ಸಾಮಾನ್ಯವಾಗಿ ಎರಡು – ಮೂರು ತಿಂಗಳು ನೋಟಿಸ್ ಪಿರಿಯಡ್ ಇದ್ದೇ ಇರುತ್ತೆ. ನಿಮ್ಮ ಸ್ಥಾನಕ್ಕೆ ಇನ್ನೊಬ್ಬರನ್ನು ನೇಮಿಸಿಕೊಳ್ಳಲು ಕಂಪನಿ ಅರ್ಜೆಂಟ್ ನಲ್ಲಿರುತ್ತೆ. ಅಂಥ ಟೈಂನಲ್ಲಿ ಗೊಂದಲ ಸಹಜ. ಇನ್ನೊಬ್ಬರನ್ನು ನೇಮಕ ಮಾಡ್ಕೊಂಡ್ಮೇಲೂ ನಾವೇಕೆ ಕೆಲ್ಸ ಮಾಡ್ಬೇಕು ಎನ್ನುವ ಮನೋಸ್ಥಿತಿ ಅನೇಕರಿಗಿರುತ್ತೆ. ಆದ್ರೆ ನಿಮ್ಮ ಜವಾಬ್ದಾರಿಯಂತೆ ನೀವು ನೋಟಿಸ್ ಪಿರಿಯಡ್ ಮುಗಿಸಿಯೇ ಕೆಲ್ಸ ಬಿಡಿ. ಇದು ನಿಮ್ಮ ಇಮೇಜ್ ಕಾಪಾಡುತ್ತೆ.
ಮೈಸೂರು ಬೃಹತ್ ಉದ್ಯೋಗ ಮೇಳ, 24000 ಕ್ಕೂ ಹೆಚ್ಚು ಯುವಕರ ನೋಂದಣಿ, 221 ಕಂಪನಿಗಳು ಭಾಗಿ, ಯಾವಾಗ? ಇಲ್ಲಿದೆ ವಿವರ
• ಕೆಲ್ಸ ಬಿಡುವಾಗ ದಾಖಲೆ ಮಿಸ್ ಮಾಡ್ಬೇಡಿ : ರಿಸೈನ್ ಲೆಟರ್ ಕೊಟ್ಟು ಕೈತೊಳೆದುಕೊಳ್ಳುವ ಆತುರದಲ್ಲಿ ಅನೇಕರಿರ್ತಾರೆ. ಈ ತಪ್ಪನ್ನು ಎಂದಿಗೂ ಮಾಡ್ಬಾರದು. ನೀವು ಕೆಲ್ಸ ಬಿಡುವ ಸಮಯದಲ್ಲಿ ಕಂಪನಿ ಹೇಳುವ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಅದನ್ನು ಪಡೆದುಕೊಳ್ಬೇಕು. ದಾಖಲೆಗಳನ್ನು ಸೇವ್ ಮಾಡಿ, ಪ್ರಿಂಟ್ ತೆಗೆದಿಟ್ಟುಕೊಳ್ಳಿ. ಇವು ಮುಂದೊಂದು ದಿನ ಬೇರೆ ಕೆಲ್ಸ ಪಡೆಯುವ ಟೈಂನಲ್ಲಿ ನಿಮಗೆ ಅತ್ಯಗತ್ಯವಾಗ್ಬಹುದು.
• ಕೆಲ್ಸದ ಮೇಲೆ ನಿರ್ಲಕ್ಷ್ಯ ಬೇಡ : ರಿಸೈನ್ ಲೆಟರ್ ನೀಡ್ತಿದ್ದಂತೆ ಅದೇನೋ ತಾತ್ಸಾರ ಬಂದ್ಬಿಟ್ಟಿರುತ್ತದೆ. ಮೂರು ಇಲ್ಲ ಎರಡು ತಿಂಗಳು ಆಫೀಸ್ ಗೆ ಬರ್ಬೇಕು, ಕೆಲ್ಸ ಮಾಡ್ಬೇಕು ಎಂಬುದಷ್ಟೇ ಜನರು ಗಮನಿಸ್ತಾರೆ. ಇದು ತಪ್ಪು. ರಿಸೈನ್ ಮಾಡುವ ಮೊದಲು ನೀವು ಪ್ರೀತಿಯಿಂದ, ನಿಷ್ಠೆಯಿಂದ ಕೆಲ್ಸ ಮಾಡಿದಂತೆ ರಿಸೈನ್ ಮಾಡಿದ್ಮೇಲೂ ಮಾಡ್ಲೇಬೇಕು. ನಿಮ್ಮ ತಂಡಕ್ಕೆ ಸಹಕಾರ ನೀಡ್ಬೇಕು. ನಿಮ್ಮ ಟಾರ್ಗೆಟ್ ಪೂರ್ಣಗೊಳಿಸಬೇಕು. ನಿಮ್ಮ ಹುದ್ದೆಗೆ ಹೊಸಬರು ನೇಮಕವಾದ್ರೆ ಅವ್ರಿಗೆ ನಿಮ್ಮ ಕೆಲ್ಸವನ್ನು ಕಲಿಸಬೇಕು. ಇದ್ರಿಂದ ಕಚೇರಿ ಸಿಬ್ಬಂದಿಗೆ ನಿಮ್ಮ ಮೇಲೆ ಗೌರವ ಹೆಚ್ಚಾಗುತ್ತದೆ. ನಿಮ್ಮ ಕೆಲ್ಸವನ್ನು ಅವ್ರು ಮೆಚ್ಚಿಕೊಳ್ಳಲಿ ಬಿಡಲಿ ಇದು ನಿಮ್ಮ ಮುಂದಿನ ವೃತ್ತಿ ಜೀವನಕ್ಕೆ ನೆರವಾಗುತ್ತದೆ.
ಈ ವರ್ಷ ಐಟಿ ವಲಯದಲ್ಲಿ 50 ಸಾವಿರ ಉದ್ಯೋಗ ಕಟ್!
• ಸಂಬಂಧ ಹಾಳ್ಮಾಡಿಕೊಳ್ಳುವ ಅಗತ್ಯವಿಲ್ಲ : ನೀವು ಯಾವುದೇ ಕಾರಣಕ್ಕೆ ಕೆಲ್ಸ ಬಿಡ್ತಿರಬಹುದು, ಕೆಲ್ಸ ಬಿಡುವ ಸಮಯದಲ್ಲಿ ಗಲಾಟೆಯ ಅಗತ್ಯವಿಲ್ಲ. ಯಾರು, ಯಾವಾಗ ಎಲ್ಲಿ ಮತ್ತೆ ಸಿಗ್ತಾರೆ ಹೇಳಲು ಸಾಧ್ಯವಿಲ್ಲ. ಎಲ್ಲರ ಜೊತೆ ನಗ್ತಾ, ಜಾಲಿಯಾಗಿರಲು ಸಾಧ್ಯವಿಲ್ಲ ಅಂದ್ರೂ ನೀವು ಸಂಬಂಧ ಹಾಳು ಮಾಡಿಕೊಳ್ಳುವ ಕೆಲ್ಸ ಮಾಡ್ಬೇಡಿ. ಅನಗತ್ಯ ಗಲಾಟೆ ಮಾಡ್ಬೇಡಿ. ಕಚೇರಿಯ ಫಾರ್ಮ್ ಭರ್ತಿಯಿಂದ ಹಿಡಿದು ಸಹೋದ್ಯೋಗಿಗಳಿಗೆ ಗುಡ್ ಬೈ ಹೇಳುವವರೆಗೆ ಎಲ್ಲ ಸಂದರ್ಭದಲ್ಲಿ ತಾಳ್ಮೆಯಿಂದ ವರ್ತಿಸಿ. ಹಿಂದಿದ್ದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಕಚೇರಿ ಬಿಡುವ ಪ್ರಯತ್ನ ಮಾಡಿ.