ಕಳೆದ ಬಾರಿಯ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಅಲಹಾಬಾದ್‌ನ ಐಐಐಟಿಯಲ್ಲಿನ 5 ವಿದ್ಯಾರ್ಥಿಗಳು ವಾರ್ಷಿಕ ಪ್ಯಾಕೇಜ್ ರೂ 1 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಉದ್ಯೋಗ ಪಡೆದುಕೊಂಡರು.
ಅಲಹಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (IIIT), ಕಳೆದ ಬಾರಿಯ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ 5 ವಿದ್ಯಾರ್ಥಿಗಳು ವಾರ್ಷಿಕ ಪ್ಯಾಕೇಜ್ ರೂ 1 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಉದ್ಯೋಗ ಪಡೆದುಕೊಂಡರು.
ಪ್ರಪಂಚದಾದ್ಯಂತದ ಟೆಕ್ ಕಂಪನಿಗಳು ಮತ್ತು ಇತರ ಬಹುರಾಷ್ಟ್ರೀಯ ಸಂಸ್ಥೆಗಳು ಪ್ರತಿವರ್ಷದ ಋತುವಿನಲ್ಲಿ ಕೆಲವು ಅತ್ಯುತ್ತಮ ಪ್ರತಿಭೆಗಳನ್ನು ಆಫರ್‌ನಲ್ಲಿ ನೇಮಿಸಿಕೊಳ್ಳಲು ಭಾರತೀಯ ಶಿಕ್ಷಣ ಸಂಸ್ಥೆಯಲ್ಲಿ ಕ್ಯಾಂಪಸ್ ಸೆಲೆಕ್ಷನ್ ನಡೆಸುತ್ತವೆ. ಐಐಟಿಗಳು, ಐಐಎಂಗಳು ಮತ್ತು ಎನ್‌ಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳ ಹಲವಾರು ಭಾರತೀಯ ವಿದ್ಯಾರ್ಥಿಗಳು ಪ್ರತಿ ವರ್ಷ ಬೃಹತ್ ಉದ್ಯೋಗ ಪ್ಯಾಕೇಜ್‌ಗಳನ್ನು ಪಡೆಯುತ್ತಾರೆ.
ಯಾವ ಹಿರೋಯಿನ್‌ಗೂ ಕಮ್ಮಿ ಇಲ್ಲ ಈ ಯಶಸ್ವಿ ಮಹಿಳಾ ಉದ್ಯಮಿ, ವಾರ್ಷಿಕ 148 ಕೋಟಿ ನೆಟ್‌ವರ್ತ್!
ಅಲಹಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (IIIT), ಕಳೆದ ಬಾರಿ ಯಶಸ್ವಿ ಪ್ಲೇಸ್‌ಮೆಂಟ್ ಗಳಿಸಿಕೊಂಡಿತು. ಜೊತೆಗೆ 5 ವಿದ್ಯಾರ್ಥಿಗಳು ವಾರ್ಷಿಕ ಪ್ಯಾಕೇಜ್ ರೂ 1 ಕೋಟಿ ಹೆಚ್ಚು ಪ್ಯಾಕೇಜ್ ಪಡೆದುಕೊಂಡರು. ಇವರಲ್ಲಿ ಅನುರಾಗ್ ಮಕಾಡೆ ಅವರು ಅಮೆರಿಕ ಪ್ರಧಾನ ಇ-ಕಾಮರ್ಸ್ ದೈತ್ಯ ಅಮೆಜಾನ್‌ನಿಂದ 1.25 ಕೋಟಿ ರೂ.ಗಳ ಅತ್ಯಧಿಕ ಪ್ಯಾಕೇಜ್ ಪಡೆದರು.
ಈ ಬಗ್ಗೆ ಬರೆದುಕೊಂಡಿರುವ ಅನುರಾಗ್, ನಾನು ಅಮೆಜಾನ್‌ಗೆ ಫ್ರಂಟೆಂಡ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದೇನೆ ಎಂದು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. ನಾಸಿಕ್ ಮೂಲದ ಅನುರಾಗ್ ಐಐಐಟಿ ಅಲಹಾಬಾದ್‌ನಲ್ಲಿ ಬಿಟೆಕ್ ವಿದ್ಯಾರ್ಥಿಯಾಗಿದ್ದರು.
ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ಉದ್ಯೋಗಗಳಿವು
ಅನುರಾಗ್ ಕರ್ನಾಟಕದ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರಿಂಗ್ ಇಂಟರ್ನ್ ಆಗಿ ಮತ್ತು ಹರಿಯಾಣದ ಗುರುಗ್ರಾಮ್‌ನಲ್ಲಿ ವಿಶ್ಲೇಷಕ ಇಂಟರ್ನ್ ಆಗಿ ಅಮೇರಿಕನ್ ಎಕ್ಸ್‌ಪ್ರೆಸ್‌ನಲ್ಲಿ ಕ್ಯೂರ್-ಫಿಟ್‌ಗಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಮೆಜಾನ್‌ನಿಂದ ಅನುರಾಗ್ ಅವರನ್ನು ಪೂರ್ಣ ಸಮಯದ ಫ್ರಂಟೆಂಡ್ ಇಂಜಿನಿಯರ್ ಆಗಿ ನೇಮಿಸಲಾಗಿದ್ದು, ಸೆಪ್ಟೆಂಬರ್ 2022 ರಲ್ಲಿ ಕೆಲಸ ಪ್ರಾರಂಭಿಸಿದರು.
ಅನುರಾಗ್ ಹೊರತಾಗಿ ಐಐಐಟಿ ಅಲಹಾಬಾದ್‌ನ ಪ್ರಥಮ್ ಪ್ರಕಾಶ್ ಗುಪ್ತಾ ಅವರು ಗೂಗಲ್‌ನಿಂದ 1.4 ಕೋಟಿ ಪ್ಯಾಕೇಜ್ ಪಡೆದ ಮತ್ತೊಬ್ಬ ವಿದ್ಯಾರ್ಥಿಯಾಗಿದ್ದಾರೆ. ಪಾಲಕ್ ಮಿತ್ತಲ್ ಕೂಡ ಅಮೆಜಾನ್ ನಿಂದ 1 ಕೋಟಿ ರೂ. ಪಡೆದುಕೊಂಡಿದ್ದು, ಅಖಿಲ್ ಸಿಂಗ್ ಅವರನ್ನು ರೂಬ್ರಿಕ್ 1.2 ಕೋಟಿ ಪ್ಯಾಕೇಜ್‌ಗೆ ನೇಮಿಸಿಕೊಂಡಿದೆ.