ಬೆಂಗಳೂರಲ್ಲಿ ನೀರಿಲ್ಲ, ಪರ್ಫ್ಯೂಮ್ ಕೊಡುತ್ತಿವೆ ಪ್ರೈವೇಟ್ ಕಂಪನಿಗಳು!

By Suvarna NewsFirst Published Mar 26, 2024, 12:02 PM IST
Highlights

ಉದ್ಯಾನ ನಗರಿ ಬೆಂಗಳೂರಿನಲ್ಲಿ ಜೀವ ಜಲದ ಸಮಸ್ಯೆ ಉಲ್ಬಣಿಸಿದೆ. ಕುಡಿಯೋಕೂ ನೀರಿಲ್ಲ ಎನ್ನುವ ಸ್ಥಿತಿ ಇದೆ. ಈ ಸಮಯದಲ್ಲಿ ನೀರಿನ ಸಮಸ್ಯೆ ನೀಗಿಸಲು ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಕೆಲಸ ನೀಡಿ ಊರಿಗೆ ಕಳಿಸೋದು ಬೆಸ್ಟ್ ಆಯ್ಕೆ ಎನ್ನುವ ಕೂಗು ಕೇಳಿ ಬಂದಿದೆ. 
 

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಬರ ದಿನೇ ದಿನೇ ಹೆಚ್ಚಾಗ್ತಿದೆ. ನೀರಿಲ್ಲದೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೀರಿಲ್ಲ.. ದಯವಿಟ್ಟು ಉದ್ಯಾನನಗರಿಗೆ ಬರಬೇಡಿ ಎನ್ನುವ ಮಾತುಗಳು ಕೇಳಿ ಬರ್ತಿವೆ. ಅನೇಕರು ಬೆಂಗಳೂರು ಬಿಟ್ಟು ಊರಿಗೆ ತೆರಳುವ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಐಟಿ ಕಂಪನಿಗಳು ಕೂಡ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.ತಾತ್ಕಾಲಿಕ ಆಧಾರದ ಮೇಲೆ ಪರಿಸ್ಥಿತಿಯನ್ನು ನಿಭಾಯಿಸಲು ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು (WFH) ನೀಡುವಂತೆ ಜಲ ತಜ್ಞರು ಮತ್ತು ಕಾನೂನು ತಜ್ಞರು ಐಟಿ (IT) ಕಂಪನಿಗಳಿಗೆ ಸೂಚಿಸುತ್ತಿದ್ದಾರೆ. ಬೆಂಗಳೂರಿ (Bangalore) ನಲ್ಲಿ ಜನಸಂಖ್ಯೆ ಕಡಿಮೆ ಆದ್ರೆ ನೀರಿನ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಬಹುದು ಎಂಬುದು ತಜ್ಞರ ತರ್ಕವಾಗಿದೆ. 

ಅಷ್ಟೇ ನೀರಿಲ್ಲದ ಪರದಾಡುತ್ತಿರವ ಕೆಲವು ಏರಿಯಾದ ಜನರು ಸ್ನಾವನ್ನೂ ಮಾಡದೇ ಆಫೀಸಿಗೆ ಹೋಗುವಂತಾಗಿದೆ. ಬೇಸಿಗೆ ಬೇರೆ. ಕೊಳಕು ದೇಹ ಮಾಡ್ಕೊಂಡು ಆಫೀಸಿಗೆ ಬಂದು, ಅಲ್ಲಿ ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡುವುದ ಕಂಟ್ರೋಲ್ ಮಾಡಲು ಪರ್ಫ್ಮೂಮ್ ಸಹ ನೀಡಲಾಗುತ್ತಿದೆ. ಛೇ ಸಿಲಿಕಾನಿ ನಗರಿ ಬೆಂಗಳೂರಿಗೆ ಇದ್ಯಾಕಪ್ಪ ಇಂಥ ಪರಿಸ್ಥಿತಿ ಬಂತೆಂದು ಮೂಲ ಬೆಂಗಳೂರಿಗರೆ ಬಾಯಿ ಬಾಯಿ ಬಡಿದುಕೊಳ್ಳುವಂತ ಪರಿಸ್ಥಿತಿ ಸೃಷ್ಟಿಯಾಗಿದೆ.

 

ಬೆಂಗಳೂರು ನೀರಿನ ಸಮಸ್ಯೆ; 15 ಲಕ್ಷ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಕೊಡಲು ಸಲಹೆ

ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ನೀಡಿದ್ರೆ ಬೆಂಗಳೂರು ಸ್ವಲ್ಪ ಮಟ್ಟಿಗೆ ಖಾಲಿಯಾಗುತ್ತದೆ. ಇದ್ರಿಂದ ಬೆಂಗಳೂರಿನಲ್ಲಿರುವ ಜನರಿಗೆ ನೀರು ಒದಗಿಸಲು ಸುಲಭವಾಗುತ್ತದೆ ಎಂಬುದು ಅನೇಕರ ಅಭಿಪ್ರಾಯ. ಇದನ್ನು ಕರ್ನಾಟಕ ಮತ್ತು ಅಸ್ಸಾಂನ ಹೈಕೋರ್ಟ್‌ಗಳ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೆ ಶ್ರೀಧರ್ ರಾವ್ ಕೂಡ ಒಪ್ಪಿಕೊಂಡಿದ್ದಾರೆ. ನೀರಿನ ಸಮಸ್ಯೆ ನೀಗಿಸಲು ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡುವುದು ಯೋಗ್ಯವೆಂದು ಸಲಹೆ ನೀಡಿದ್ದಾರೆ.  ನೌಕರರು ತಮ್ಮ ಸ್ವಂತ ಊರಿನಿಂದಲೇ ತಮ್ಮ ಕೆಲಸ ಮಾಡಲು ಅವಕಾಶ ನೀಡುವ ಕಲ್ಪನೆ ಒಳ್ಳೆಯದು ಎಂದಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 15 ಲಕ್ಷ ಐಟಿ ಉದ್ಯೋಗಿಗಳಿದ್ದು, ಅವರು ಮನೆಯಿಂದಲೇ ಕೆಲಸ ಮಾಡಿದ್ರೆ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ರಾವ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.  ಐಟಿ ಕಂಪನಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿದ್ರೆ 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಊರಿಗೆ ವಾಪಸ್ ಆಗ್ತಾರೆ ಎಂಬುದು ರಾವ್ ಅಭಿಪ್ರಾಯವಾಗಿದೆ. ಅವರು 1980 ರ ದಶಕದಲ್ಲಿ ಬೆಂಗಳೂರಿನಲ್ಲಿ ನೀರಿನ ಕೊರತೆಯನ್ನು ಆಧರಿಸಿ ತಮ್ಮ ಸಲಹೆಯನ್ನು ನೀಡಿದ್ದಾರೆ. ಆಗ ನಗರದ ಜನಸಂಖ್ಯೆ 25ರಿಂದ 30 ಲಕ್ಷ ಇದ್ದು, ಈಗ 1.5 ಕೋಟಿ ದಾಟಿದೆ.

ಬೆಂಗಳೂರಿನ ಬೋರ್‌ವೆಲ್‌ಗಳಿಗೆ ಎಐ ತಂತ್ರಜ್ಞಾನ ಅಳವಡಿಕೆ; ನೀರು ಎಷ್ಟಿದೆ ಎಂದು ಹೇಳಲಿದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್

ಮನೆಯಲ್ಲಿ ನೀರಿಲ್ಲವೆಂದು ನಿತ್ಯ ಕರ್ಮಗಳಿಗಾಗಿ ಸಮೀಪದ ಮಾಲ್‌ಗಳಿಗೆ ಜನರು ನುಗ್ಗುತ್ತಿದ್ದು, ಸಮಸ್ಯೆಯ ತೀವ್ರತೆ ಎಷ್ಟಿದೆ ಎಂಬುವುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಇಷ್ಟೆಲ್ಲಾ ನೀರಿನ ಅಭಾವವಿದ್ದರೂ, ಬಿಬಿಎಂಪಿ ನೀರಿಲ್ಲಿ ಹೋಳಿ ಆಡಬಾರೆಂದು ಸೂಚಿಸಿದ್ದರೂ ನಿನ್ನೆ ಮಂದೆ ಎಲ್ಲೆಡೆ ನೀರಿನಲ್ಲಿ ಹೋಳಿ ಆಡಿದ್ದು, ಜನರ ಬೇಜಾವಾಬ್ದಾರಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಬಿಬಿಎಂಪಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡಿಲ್ಲ ಜನರು. ಅದರಲ್ಲಿಯೂ ಹೋಳಿ ಉತ್ತರ ಭಾರತೀಯ ಹಬ್ಬವಾಗಿದ್ದು, ಅವರೇ ಹೆಚ್ಚು ತುಂಬಿರುವ ಬೆಂಗಳೂರಿನ ಸಮಸ್ಯೆ ಅರ್ಥ ಮಾಡಿಕೊಳ್ಳಲು ವಿಫಲರಾಗುತ್ತಿದ್ದಾರೆಂದೂ ಬೆಂಗಳೂರಿಗರು ದೂರಲು ಶುರು ಮಾಡಿದ್ದಾರೆ. 

click me!