ಕರ್ನಾಟದ ನಿರುದ್ಯೋಗಿ ಯುವಕರಿಗೆ ಯಡಿಯೂರಪ್ಪ ಬಂಪರ್ ಆಫರ್

By Suvarna NewsFirst Published Feb 1, 2020, 7:12 PM IST
Highlights

ನಿರುದ್ಯೋಗ ಸಮಸ್ಯೆ ದೇಶದಲ್ಲಿ ಎತೇಚ್ಚವಾಗಿದೆ. ಸೂಕ್ತ ಶಿಕ್ಷಣ ಪಡೆದುಕೊಂಡು ಅದಕ್ಕೆ ತಕ್ಕಂತೆ ಉದ್ಯೋಗಗಳು ಸಿಗುತ್ತಿಲ್ಲ. ಇದರಿಂದ ಅಭ್ಯರ್ಥಿಗಳು ರೋಸಿ ಹೋಗಿದ್ದಾರೆ. ಇನ್ನು ಕರ್ನಾಟಕ್ಕೆ ಬಂದ್ರೆ ನಿರುದ್ಯೋಗಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬಿಎಸ್‌ವೈ ಬಂಪರ್ ಆಫರ್ ನೀಡಿದ್ದಾರೆ.

ಬೆಂಗಳೂರು, (ಫೆ.01): ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಯುವ ಸಮೂಹ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದ್ದಾರೆ.

SSLC ಪಾಸಾದವರಿಗೆ ಉದ್ಯೋಗವಕಾಶ: 2792 ಹುದ್ದೆಗೆ ಅರ್ಜಿ ಆಹ್ವಾನ

ಇಂದು (ಶನಿವಾರ) ವಿಧಾನಸೌಧ ಮುಂಭಾಗ ನೂರಕ್ಕೂ ಹೆಚ್ಚು ನಿರುದ್ಯೋಗಿ ಯುವಕ ಯುವತಿಯರಿಗೆ ಟೂರಿಸ್ಟ್ ಟ್ಯಾಕ್ಸಿಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರವಾಸಿ ಟ್ಯಾಕ್ಸಿ ಯೋಜನೆ ನಿರುದ್ಯೋಗ ಸಮಸ್ಯೆ ನಿವಾರಣೆಮಾಡಲು ಸಹಕಾರಿಯಾಗಿದೆ ಎಂದು ಹೇಳಿದರು.

ನೌಕರಿ ಪರ್ವ: 1112 FDA ಹುದ್ದೆಗೆ KPSC ಅರ್ಜಿ ಆಹ್ವಾನ

ನಿರುದ್ಯೋಗ ಸಮಸ್ಯೆ ಇರುವ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದ್ದು, ರಾಜ್ಯಾದ್ಯಂತ 450 ಟ್ಯಾಕ್ಸಿ ವಿತರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ ಯೋಜನೆ ಪಡೆಯಲು ಅರ್ಜಿ ಸಲ್ಲಿಸಬೇಕು. ಬಳಿಕ ಅರ್ಜಿಗಳನ್ನು  ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಫಲಾನುಭವಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಆಯ್ಕೆ ಮಾಡಲಾಗುತ್ತದೆ.

KPSC ನೇಮಕಾತಿ: ಪ್ರಥಮ ದರ್ಜೆ ಸಹಾಯಕ(FDA)ಹುದ್ದೆಗೆ ಆಹ್ವಾನ

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿಮ್ಮ ನಿಮ್ಮ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಲ್ಲಿ ವಿಚಾರಿಸಿ ಮಾಹಿತಿ ಪಡೆದುಕೊಳ್ಳಬಹುದು.

click me!