ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾದ ವೈ ಎಸ್ ವಿ ದತ್ತಾ ನಿರ್ಧಾರ
ಅಭಿಮಾನಿಗಳ ಸಭೆಯಲ್ಲಿ ಅಂತಿಮ ನಿರ್ಧಾರ ಘೋಷಿಸಿದ ಮೇಷ್ಟ್ರು
ಕಾಂಗ್ರೆಸ್ ಅಭ್ಯರ್ಥಿಯ ಸಂಧಾನಕ್ಕೆ ಮಣಿಯದೇ ಸ್ಪರ್ಧೆ ಪಟ್ಟು
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.09): ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಮಾಜಿ ಶಾಸಕ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ (ವೈ.ಎಸ್.ವಿ. ದತ್ತಾ) ಅವರಿಗೆ ಕಾಂಗ್ರೆಸ್ ಬಿ ಫಾರ್ಮ್ ಕೊಡದೇ ಕೈಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿಮಾನಿಗಳ ಒತ್ತಡಕ್ಕೆ ಮಣಿದ ಅವರು ಪಕ್ಷೇತರವಾಗೊ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ.
undefined
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ವೈಎಸ್‌ವಿ ದತ್ತಾ (YSV Datta) ಅವರು ಈ ಬಾರಿ ಜೆಡಿಎಸ್‌ನಲ್ಲಿ ಟಿಕೆಟ್ ಸಿಗುವುದು ಅನುಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಕಡೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬಿ ಫಾರ್ಮ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಕಾಂಗ್ರೆಸ್‌ನ 2ನೇ ಪಟ್ಟಿಯಲ್ಲಿ ಕಾಂಗ್ರೆಸ್ ಟಿಕೆಟ್ ಅನ್ನು ಆನಂದ್ ಕೆ.ಎಸ್. ( Kaduru Ticket Anand KS) ಅವರಿಗೆ ನೀಡಲಾಗಿದೆ. ಇದರಿಮದ ತೀವ್ರ ಬೇಸರಗೊಂಡಿದ್ದ ಅವರು ತಮ್ಮ ಅಭಿಮಾನಿಗಳ ಸಭೆಯನ್ನು ಕರೆಯಲಾಗಿದ್ದು, ಅವರು ಹೇಳಿದಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ. ಅಭಿಮಾನಿಗಳ ಒತ್ತಡ ಬಂದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದರು. ಅದರಂತೆ ಇಂದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳೊಂದಿಗೆ ಸಭೆ ಮಾಡಿದ ದತ್ತಾ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ ಸೇರಿದ ಶಿವಲಿಂಗೇಗೌಡ: ಜೆಡಿಎಸ್‌ನಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಉಚ್ಛಾಟನೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ದತ್ತಾ ಶಕ್ತಿ ಪ್ರದರ್ಶನ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ವೈಎಸ್ ದತ್ತಾಗೆ ಕಡೂರು ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದು, ಪಕ್ಷೇತರವಾಗಿ ಸ್ಪರ್ಧೀಸುವಂತೆ ಅಭಿಮಾನಿಗಳು ಮನವಿ ಮಾಡಿದ್ದರು. ಈ ವಿಚಾರವಾಗಿ ಇಂದು ಅಭಿಮಾನಗಳ ಸ್ವಾಭಿಮಾನದ ಸಭೆ ಕರೆದಿದ್ದರು. ಕಡೂರು ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು. ಸಭೆ ಆರಂಭಕ್ಕೂ ಮುನ್ನ ಕಡೂರು ಪಟ್ಟಣದಲ್ಲಿ ದತ್ತಾ ರವರ ಶಕ್ತಿ ಪ್ರದರ್ಶನ ನಡೆಯಿತು. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ದತ್ತಾ ಅಭಿಮಾನಿಗಳು ಬೃಹತ್ ರೋಡ್ ಶೋ ನಡೆಸಿದರು. ಸ್ವಾಭಿಮಾನಿ ಸಭೆಗೆ ಸುಮಾರು 4000 ಜನ ಭಾಗಿಯಾಗಿದ್ದರು.
ಅಭಿಮಾನಿಗಳನ್ನು ಕಂಡು ಕಣ್ಣೀರಿಟ್ಟ ದತ್ತಾ: ಕಾಂಗ್ರೆಸ್ ಟಿಕೆಟ್ ತಪ್ಪಿದ ವೇಳೆಯಲ್ಲಿ ಅಭಿಮಾನಿಗಳು ದತ್ತರಿಗೆ ಸ್ವತಂತ್ರವಾಗಿ ಸ್ಪರ್ಧಿಸಲು ಮನವಿ ಮಾಡಿದ್ದರು. ಆಗ 2 ದಿನ ಸಮಯ ಕೇಳಿದ್ದ ದತ್ತಾವರು ಇಂದು ರಾಜಕೀಯ ನಿರ್ಧಾರ ತೆಗೆದುಕೊಳ್ಳವ ನಿಟ್ಟಿನಲ್ಲಿ ಸಭೆ ಕರೆದಿದ್ದರು. ಕಲ್ಯಾಣ ಮಂಟಪದಲ್ಲಿ ಜಾಗ ಸಾಲದೆ ಮಂಟಪದ ಕೆಳಭಾಗದಲ್ಲಿ ಎಲ್.ಇ.ಡಿ. ವ್ಯವಸ್ಥೆ ಮಾಡಲಾಗಿತ್ತು. ಸಭೆ ಆರಂಭಕ್ಕೂ ಮುನ್ನವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ದತ್ತಾ ಆಗಮಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಕಂಡು ನಿಮ್ಮ ಪ್ರೀತಿಗೆ ನಾನು ಋಣಿ ಎಂದು ಜನರಿಗೆ ತಿಳಿಸಿದರು.
ಕಾಂಗ್ರೆಸ್‌ಗೆ ಸೆಡ್ಡು ಹೊಡೆದ ವೈಎಸ್‌ವಿ ದತ್ತಾ: ವೈಎಸ್‌ವಿ ದತ್ತಾ ಅವರು ಮುಂದಿನ ರಾಜಕೀಯ ನಿಲುವುಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇಂದು ಅಭಿಮಾನಿಗಳ ಸಭೆಯನ್ನು ಕರೆದಿದ್ದು, ಮುಂದಿನ ನಡೆಯ ಬಗ್ಗೆ ಚರ್ಚೆ ಸಭೆಯಲ್ಲಿ ಚರ್ಚೆ ನಡೆಸಿದ್ದು, ಅಭಿಮಾನಿಗಳ ಅಭಿಪ್ರಾಯದಂತೆ ಅವರು ತಮ್ಮ ಮುಂದಿನ ರಾಜಕೀಯ ಹೆಜ್ಜೆ ಇಟ್ಟಿದ್ದು, ಪಕ್ಷೇತರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರಿಂದ ವೈಎಸ್‌ವಿ ದತ್ತಾ ಅವರು ಬೇಸರಗೊಂಡಿದ್ದರು. ಇದರಿಂದಾಗಿ ಕಡೂರು ವಿಧಾನಸಭಾ ಕ್ಷೇತ್ರದ ಆಭ್ಯರ್ಥಿ ಆನಂದ್ ಕಡೂರುನಲ್ಲಿರುವ ಯುಗಟಿ ಗ್ರಾಮದ ದತ್ತ ನಿವಾಸಕ್ಕೆ ಬೇಟಿ ನೀಡಿ ವೈಎಸ್‌ವಿ ದತ್ತ ಅವರಿಗೆ ಸಮಾಧಾನ ಪಡಿಸಲು ಯತ್ನಿಸಿದ್ದರು. ಆದರೆ ಅಂದೂ ಕೂ ಸಂಧಾನ ಸಭೆ ವಿಫಲವಾಗಿತ್ತು. ಜೆಡಿಎಸ್ ಅಭ್ಯರ್ಥಿ ಧನಂಜಯ್ ಕೂಡ ಪಕ್ಷಕ್ಕೆ ಮರಳಿ ವಾಪಾಸ್ ಬರುವಂತೆ ಆಹ್ವಾನಿಸಿದ್ದರು. ಆದರೆ ಇದ್ಯಾವುದಕ್ಕೂ ಮಣೆ ಹಾಕದ ದತ್ತಾ ಅಭಿಮಾನಗಳಿಂದ ಅಭಿಪ್ರಾಯ ಪಡೆದು ತಮ್ಮ ಅಂತಿಮ ನಿರ್ಧಾರ ಘೋಷಿಸಿದ್ದಾರೆ.
ಕಾಂಗ್ರೆಸ್‌ಗೆ ಸೆಡ್ಡುಹೊಡೆದು ಬಿಜೆಪಿ ಸೇರಿದ ನಾಗರಾಜ್ ಛಬ್ಬಿ: ಸಂತೋಷ್ ಲಾಡ್‌ಗೆ ಪೈಪೋಟಿ
ಚುನಾವಣೆ ಖರ್ಚಿಗಾಗಿ ವೈ.ಎಸ್.ವಿ.ದತ್ತಾ ಭಿಕ್ಷೆ: ಇಂದಿನ ಸ್ವಾಭಿಮಾನದ ಸಭೆಯಲ್ಲಿ ಸ್ವತಂತ್ರವಾಗಿ ನಿಲ್ಲುವಂತೆ ತೀರ್ಮಾನಿಸಿದ ವೈ.ಎಸ್.ವಿ.ದತ್ತಾ ಚುನಾವಣೆ ಖರ್ಚಿಗಾಗಿ ಭಿಕ್ಷೆಯನ್ನು ಬೇಡಿದ್ದರು. ಸ್ವಾಭಿಮಾನದ ಸಭೆಯಲ್ಲಿ ದತ್ತಾ ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಅನೌನ್ಸ್ ಮಾಡಿದ ದತ್ತ ಚುನಾವಣೆ ಖರ್ಚಿಗಾಗಿ ಹೆಗಲ ಮೇಲೆ ಟವೆಲ್ ಹಾಕಿಕೊಂಡು ಭಿಕ್ಷೆ ಬೇಡಿದರು.ವೈ.ಎಸ್.ವಿ.ದತ್ತಾ ಅವರ ಅಭಿಮಾನಿಗಳು 50 ಸಾವಿರ, ಲಕ್ಷ, 2 ಲಕ್ಷದ ಚೆಕ್ ನೀಡಿ ಮತ್ತಷ್ಟು ಹಣ ಕೊಡ್ತೀವಿ ಎಂದ ಅಭಿಮಾನಿಗಳು ಭರವಸೆ ನೀಡಿದ್ದಾರೆ.