ಒಂದು ವರ್ಷದಲ್ಲಿ ಬಯಲು ಸೀಮೆಗೆ ಎತ್ತಿನ ಹೊಳೆ ನೀರು ಲಭ್ಯ: ಸಚಿವ ಕೆ.ಎಚ್‌.ಮುನಿಯಪ್ಪ

By Kannadaprabha News  |  First Published Jan 15, 2024, 4:45 AM IST

ಇನ್ನು ಒಂದು ವರ್ಷದಲ್ಲಿ ಎತ್ತಿನ ಹೊಳೆ ಯೋಜನೆ ಪೂರ್ಣಗೊಂಡು ಬಯಲು ಸೀಮೆ ಜನರಿಗೆ ಕುಡಿಯುವ ನೀರು ದೊರಕಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು. 


ದೇವನಹಳ್ಳಿ (ಜ.15): ಇನ್ನು ಒಂದು ವರ್ಷದಲ್ಲಿ ಎತ್ತಿನ ಹೊಳೆ ಯೋಜನೆ ಪೂರ್ಣಗೊಂಡು ಬಯಲು ಸೀಮೆ ಜನರಿಗೆ ಕುಡಿಯುವ ನೀರು ದೊರಕಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಅಷ್ಟೇ ಅಲ್ಲ ಮೇಕೆದಾಟು ಯೋಜನೆಯೂ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು. ಈ ಭಾಗದ ರೈತರು ರೇಷ್ಮೆ ಬೆಳೆಯಿಂದಲೇ ಜೀವನ ನಡೆಸುತ್ತಿದ್ದಾರೆ. 

ಮಳೆ ಆಧಾರದಲ್ಲಿಯೇ ರಾಗಿ ಬೆಳೆಯುತ್ತಿದ್ದಾರೆ. ಹಾಗಾಗಿ ಎತ್ತಿನ ಹೊಳೆ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿಗಳು ಹೊತ್ತಿದ್ದು, ತಾಲೂಕಿನ ಕುಂದಾಣದಲ್ಲಿ ದೊಡ್ಡ ಟ್ಯಾಂಕ್‌ ಕಟ್ಟಿ ಈ ಭಾಗದ ಎಲ್ಲರಿಗೂ ಕುಡಿಯುವ ನೀರು ಪೂರೈಸಲಾಗುವುದು. ಬಯಲು ಸೀಮೆಯ ಎಲ್ಲ ಕೆರೆಗಳು ತುಂಬಲಿವೆ ಎಂದು ಹೇಳಿದರು. ಇದೇ ವೇಳೆ ದೇವನಹಳ್ಳಿ ತಾಲೂಕಿನ ಬೀಡಗಾನಹಳ್ಳಿಯ ಮಂಜುನಾಥ್‌, ಆನೇಕಲ್‌ ತಾಲೂಕಿನ ಮುರುಗೇಶ್‌, ವಿ. ಕಾಂತರಾಜು, ಹೊಸಕೋಟೆ ತಾಲೂಕಿನ ಮನೋಹರ್‌ಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Latest Videos

undefined

ಶಾಲಾ ಶೌಚಾಲಯ ಸ್ವಚ್ಛತೆಗೆ ಶೀಘ್ರ ಪರ್‍ಯಾಯ ವ್ಯವಸ್ಥೆ: ಸಿಎಂ ಜತೆ ಚರ್ಚಿಸಿ ಕ್ರಮವೆಂದ ಮಧು ಬಂಗಾರಪ್ಪ

ಗೂಳ್ಯ ಗ್ರಾಮಕ್ಕೆ ಶೀಘ್ರ ರಸ್ತೆ ನಿರ್ಮಾಣ: ಮುಖ್ಯರಸ್ತೆಯಿಂದ ಕೇವಲ 1 ಕಿ.ಮೀ ದೂರದಲ್ಲಿರುವ ಗೂಳ್ಯ ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಡುವಂತೆ ದಶಕಗಳಿಂದಲು ಮನವಿ ಮಾಡುತ್ತಲೇ ಬಂದಿದ್ದರು ಸಹ ಇದುವರೆಗೂ ರಸ್ತೆ ಸರಿಯಾಗಿಲ್ಲ ಎಂದು ಗ್ರಾಮಸ್ಥರು ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ಮನವಿ ಮಾಡಿದರು. 

ಕಿರಿದಾದ ಹಾಗೂ ಗುಂಡಿಗಳ ರಸ್ತೆಯಲ್ಲಿ ಸೈಕಲ್‌, ಬೈಕ್‌ಗಳು ಸಹ ಬರುವುದು ಕಷ್ಟವಾಗಿದೆ. ಅದರಲ್ಲೂ ಮಳೆಗಾಲದಲ್ಲಿ ರೈತರು ತರಕಾರಿ ಸೇರಿದಂತೆ ಇತರೆ ಸರಕುಗಳನ್ನು ನಗರದ ಮಾರುಕಟ್ಟೆಗೆ ಕೊಂಡೊಯ್ಯಲು ಪರದಾಡುವಂ ತಾಗಿದೆ. ರಸ್ತೆ ನಿರ್ಮಾಣಕ್ಕೆ ಭೂಮಿ ಬಿಟ್ಟುಕೊಡಲು ರಸ್ತೆ ಬದಿಯಲ್ಲಿನ ರೈತರು ಸಿದ್ದರಿದ್ದಾರೆ. ಆದರೆ ರಸ್ತೆ ನಿರ್ಮಾಣಕ್ಕೆ ಅಗತ್ಯ ಇರುವ ಆರ್ಥಿಕ ನೆರವನ್ನು ನೀಡಿಲ್ಲ ಎಂದು ಗ್ರಾಮಸ್ಥರು ದೂರಿದರು. ಗ್ರಾಮಸ್ಥರ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ, ಇನ್ನೂ 15 ದಿನಗಳಲ್ಲಿ ರಸ್ತೆ ಕಾಮಗಾರಿಯ ಪ್ರಾಥಮಿಕ ಕಾಮಗಾರಿ ಪ್ರಾರಂಭ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. 

ಶಾಲಾ ಶೌಚಾಲಯ ಸ್ವಚ್ಛತೆಗೆ ಶೀಘ್ರ ಪರ್‍ಯಾಯ ವ್ಯವಸ್ಥೆ: ಸಿಎಂ ಜತೆ ಚರ್ಚಿಸಿ ಕ್ರಮವೆಂದ ಮಧು ಬಂಗಾರಪ್ಪ

ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಿಗೂ ಸಹ ವಾಹನಗಳ ಸಂಚಾರ ಹೆಚ್ಚಾಗಿದೆ. ಹಾಗಾಗಿ ರಸ್ತೆ ವಿಸ್ತಾರವಾಗಿ ನಿರ್ಮಿಸಲು ರಸ್ತೆ ಬದಿಯಲ್ಲಿನ ರೈತರು ಯಾವುದೇ ಅಡ್ಡಿಪಡಿಸದೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಆಗ ಮಾತ್ರ ಕಾಮಗಾರಿ ತ್ವರಿತವಾಗಿ ಮಾಡಿ ಮುಗಿಸಲಾಗುವುದು ಎಂದರು. ಸ್ಥಳದಲ್ಲೇ ಇದ್ದ ತಹಸೀಲ್ದಾ‌ರ್ ವಿಭಾ ವಿದ್ಯಾ ರಾಥೋಡ್, ತಾಪಂ ಇಒ ಎನ್.ಮುನಿರಾಜು ಅವರಿಗೆ 15 ದಿನಗಳ ಒಳಗೆ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿ ವರದಿ ನೀಡಿವಂತೆ ಸಚಿವರು ಸೂಚನೆ ನೀಡಿದರು.

click me!