ರಾಮ ಮತ್ತು ರಾಮಮಂದಿರವನ್ನು ಬಿಜೆಪಿ ಗುತ್ತಿಗೆ ಪಡೆದು ಸ್ವಂತ ಆಸ್ತಿ ಎಂದುಕೊಂಡಿದೆ. ಮಂದಿರ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುವುದನ್ನು ಬಿಟ್ಟು ಹಸಿದ ಬಡವರಿಗೆ ಅಕ್ಕಿ ಕೊಡಲಿ. ಆದರೆ ಮಂತ್ರಾಕ್ಷತೆ ಹಂಚಿ ಪಕ್ಷದ ಪ್ರಚಾರ ಮಾಡುವುದಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕಾರಟಗಿ (ಜ.15): ರಾಮ ಮತ್ತು ರಾಮಮಂದಿರವನ್ನು ಬಿಜೆಪಿ ಗುತ್ತಿಗೆ ಪಡೆದು ಸ್ವಂತ ಆಸ್ತಿ ಎಂದುಕೊಂಡಿದೆ. ಮಂದಿರ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುವುದನ್ನು ಬಿಟ್ಟು ಹಸಿದ ಬಡವರಿಗೆ ಅಕ್ಕಿ ಕೊಡಲಿ. ಆದರೆ ಮಂತ್ರಾಕ್ಷತೆ ಹಂಚಿ ಪಕ್ಷದ ಪ್ರಚಾರ ಮಾಡುವುದಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು. ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಾನು ರಾಮನ ಭಕ್ತ, ನಾವು ಸಹ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದೇವೆ. ಎಲ್ಲರೂ ದೇಣಿಗೆ ನೀಡಿದ್ದಾರೆ. ಆದರೆ, ಎಷ್ಟು ಜನ ಬಿಜೆಪಿಯವರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ? ಎಂದು ಪ್ರಶ್ನಿಸಿದರು. ರಾಮಮಂದಿರ ಬಿಜೆಪಿಯವರ ಸ್ವಂತದ್ದು ಎಂದು ಬಿಂಬಿಸುತ್ತಿದ್ದಾರೆ. ಮೊದಲು ಕೇಂದ್ರ ಸರ್ಕಾರ ಬಡವರಿಗೆ ಅನ್ನ ಕೊಡಲಿ. ನಮ್ಮ ಸರ್ಕಾರ ಕೇಂದ್ರಕ್ಕೆ ೫ ಕೆಜಿ ಅಕ್ಕಿ ಪೂರೈಸಿ ಎಂದು ಮನವಿ ಮಾಡಿದ್ದೆವು. ಪೂರೈಸುವ ಅಕ್ಕಿಗೆ ಹಣ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು. ಆಗ ಅಕ್ಕಿ ಕೊಡಲಿಲ್ಲ.
undefined
ಆ ಅಕ್ಕಿ ಪರವಾಗಿ ರಾಜ್ಯ ಸರ್ಕಾರ ಜನರಿಗೆ ಹಣ ನೀಡುತ್ತಿದೆ. ಈಗ ರಾಮಮಂದಿರದ ಹೆಸರಿನಲ್ಲಿ ಮಂತ್ರಾಕ್ಷತೆ ಹಂಚುತ್ತಿದೆ. ಬಡವರಿಗೆ ಹಸಿವಿದ್ದ ಜನರಿಗೆ ಅನ್ನ ಕೊಡುವ ಕೆಲಸವನ್ನು ಮೊದಲು ಕೇಂದ್ರ ಸರ್ಕಾರ ಮಾಡಲಿ ಎಂದರು. ರಾಮಮಂದಿರಕ್ಕೆ ನಾವು ವಿರೋಧ ಮಾಡುತ್ತಿಲ್ಲ. ಆಂಜನೇಯ ನಮ್ಮವ, ಶ್ರೀರಾಮನೂ ನಮ್ಮವ. ಅಯೋಧ್ಯೆಯಲ್ಲಿ ಮೊದಲು ರಾಮಮಂದಿರಕ್ಕಾಗಿ ಬಾಗಿಲು ತೆರೆಸಿದ್ದು ರಾಜೀವಗಾಂಧಿ. ನರೇಂದ್ರ ಮೋದಿನಾ? ಅಡ್ವಾಣಿನಾ? ಏನೂ ಅಮಿತ್ ಶಾ ನಾ? ಎಂದು ಪ್ರಶ್ನಿಸಿದರು.
ಅಯೋಧ್ಯೆ ರಾಮಮಂದಿರಕ್ಕೆ ತೆರಳಲು ಯಾರ ಅನುಮತಿಯೂ ಬೇಕಾಗಿಲ್ಲ: ದಿನೇಶ್ ಗುಂಡೂರಾವ್
ಹೈಕಮಾಂಡ್ ನಿರ್ಧಾರ: ಕೊಪ್ಪಳ ಲೋಕಸಭೆ ಕ್ಷೇತ್ರ ಟಿಕೆಟ್ ಕೊಡುವುದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈಗಾಗಲೇ ಉಸ್ತುವಾರಿ ಸಚಿವರ, ಶಾಸಕರ ಮತ್ತು ಜಿಲ್ಲೆಯ ಬ್ಲಾಕ್ ಅಧ್ಯಕ್ಷರ ಸಭೆಯನ್ನು ಹೈಕಮಾಂಡ್ ಮಾಡಿದ್ದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ೨೦ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.