ಇಂದು ಕಾಂಗ್ರೆಸ್ ಸೇರಲಿರುವ ಮಾಜಿ ಶಾಸಕ, ಬಿಜೆಪಿ ನಾಯಕ ವಿ.ಎಸ್.ಪಾಟೀಲ್

By Govindaraj S  |  First Published Dec 15, 2022, 9:31 AM IST

ಮಾಜಿ ಶಾಸಕ ವಿ.ಎಸ್. ಪಾಟೀಲ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ‌. ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಚಿವ ಆರ್.ವಿ.‌ದೇಶಪಾಂಡೆ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಬೆಳಿಗ್ಗೆ 10.30ಕ್ಕೆ ಕಾಂಗ್ರೆಸ್ ಸೇರಲಿದ್ದಾರೆ. 


ಬೆಂಗಳೂರು (ಡಿ.15): ಮಾಜಿ ಶಾಸಕ ವಿ.ಎಸ್. ಪಾಟೀಲ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ‌. ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಚಿವ ಆರ್.ವಿ.‌ದೇಶಪಾಂಡೆ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಬೆಳಿಗ್ಗೆ 10.30ಕ್ಕೆ ಕಾಂಗ್ರೆಸ್ ಸೇರಲಿದ್ದಾರೆ. 

ವಿ.ಎಸ್.ಪಾಟೀಲ್ ಜೊತೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀನಿವಾಸ ಧಾತ್ರಿ ಕೂಡಾ ಪಕ್ಷಕ್ಕೆ ಸೇರುತ್ತಿದ್ದು, ಈ ಮೂಲಕ ಯಲ್ಲಾಪುರ ಕ್ಷೇತ್ರದಲ್ಲಿ ರಾಜಕೀಯ ಆಟ ಚುರುಕುಗೊಳ್ಳಲಿದೆ.  ವಿ.ಎಸ್ ಪಾಟೀಲ್ ಒಬ್ಬರೇ ನಾಳೆ ಪಕ್ಷ ಸೇರುತ್ತಿದ್ದು, ಮುಂಡಗೋಡಿನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಸಿ ಅಲ್ಲಿ ತಮ್ಮ ಬಿಜೆಪಿ ಪಕ್ಷದಲ್ಲಿನ ಬೆಂಬಲಿಗರನ್ನ ಬಿಜೆಪಿಗೆ ಸೇರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Tap to resize

Latest Videos

ಒಳ ಮೀಸಲಾತಿ ಸಮಿತಿ ಕಣ್ಣೊರೆಸುವ ತಂತ್ರ: ಸಿದ್ದರಾಮಯ್ಯ

2008ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದ ವಿ.ಎಸ್ ಪಾಟೀಲ್ 2013 ಹಾಗೂ 2018 ರ ಚುನಾವಣೆಯಲ್ಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಸೋಲನ್ನು ಕಂಡಿದ್ದರು. ಕಳೆದ‌ ಚುನಾವಣೆಯಲ್ಲಿ ಕೆಲವೇ ಅಂತರದ ಮತಗಳಿಂದ ಸೋಲನ್ನು ಕಂಡಿದ್ದು, ಶಿವರಾಮ್‌ ಹೆಬ್ಬಾರ್ ಬಿಜೆಪಿಗೆ ಬಂದ ನಂತರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಕ್ಷೇತ್ರ ತ್ಯಾಗ ಮಾಡಿದ್ದರು. 

ಸಿ.ಟಿ.ರವಿ ವಿರುದ್ಧ ಇ.ಡಿ.ಗೆ ದೂರು: ಕಾಂಗ್ರೆಸ್‌

ಹೆಬ್ಬಾರ್ ಬಿಜೆಪಿಗೆ ಬಂದ ನಂತರ ಹೆಬ್ಬಾರ್ ಹಾಗೂ ಪಾಟೀಲ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದ್ದು, ಬಿಜೆಪಿ ನಾಯಕರ ಬಳಿಯೂ ತಾನು ಪಕ್ಷ ತೊರೆಯುವುದಾಗಿ ಪಾಟೀಲ್ ಹೇಳಿಕೊಂಡೇ ಕಾಂಗ್ರೆಸ್ ಸೇರುತ್ತಿದ್ದಾರೆ. ಕ್ಷೇತ್ರದಲ್ಲಿ ಸರಳ ವ್ಯಕ್ತಿತ್ವ ಎಂದು ಕರೆಸಿಕೊಂಡಿರುವ ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಿ ಟಿಕೇಟ್ ಪಡೆದರೆ ಯಲ್ಲಾಪುರ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ ಎನ್ನುವುದು ಕ್ಷೇತ್ರದ ಜನರ ಅಭಿಪ್ರಾಯ.

click me!