ಬಿಎಸ್‌ವೈ ಪದತ್ಯಾಗ ಬಿಜೆಪಿಗೆ ನಡುಕ, ಕಾಂಗ್ರೆಸ್‌-ಜೆಡಿಎಸ್‌ಗೆ ಸುವರ್ಣಾವಕಾಶ!

By Suvarna NewsFirst Published Jul 26, 2021, 3:43 PM IST
Highlights

* ಯಡಿಯೂರಪ್ಪ ರಾಜೀನಾಮೆಯಿಂದ ರಾಜ್ಯ ರಾಜಕೀಯದಲ್ಲಿ ಹೊಸ ಅಲೆ

* ಬಿಜೆಪಿಗೆ ಶಾಪವಾಗುತ್ತಾ ಬಿಎಸ್‌ವೈ ಪದತ್ಯಾಗ

* ಅವಕಾಶದ ಲಾಭ ಪಡೆಯುತ್ತಾ ಕಾಂಗ್ರೆಸ್?

ಬೆಂಗಳೂರು(ಜು.26) ಕಳೆದ ಕೆಲ ವಾರಗಳಿಂದ ಕರ್ನಾಟಕ ರಾಜಕಾರಣದಲ್ಲಿ ಎದ್ದಿದ್ದ ಎಲ್ಲಾ ಗೊಂದಲಗಳಿಗೆ ಬಿ. ಎಸ್‌. ಯಡಿಯೂರಪ್ಪನವರ ರಾಜೀನಾಮೆ ತೆರೆ ಎಳೆದಿದೆ. ಹೀಗಿದ್ದರೂ ಬಿಎಸ್‌ವೈ ಈ ನಿರ್ಧಾರದಿಂದ ಕರ್ನಾಟಕ ಬಿಜೆಪಿಗೆ ದೊಡ್ಡ ಸವಾಲೆಸೆಯುವುದರೊಂದಿಗೆ, ವಿರೋಧ ಪಕ್ಷಗಳಿಗೆ ಸುವರ್ಣಾವಕಾಶ ಒದಗಿಸಿದೆ ಎಂಬುವುದು ರಾಜಕೀಯ ವಿಶ್ಲೇಷಕರ ಮಾತಾಗಿದೆ. 

ವಾಜಪೇಯಿ ಹೆಸರೆತ್ತಿ ಕೇಂದ್ರಕ್ಕೆ ಪರೋಕ್ಷ ಸಂದೇಶ ಕೊಟ್ರಾ ಬಿಎಸ್‌ವೈ?

ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಮೈಸೂರು ವಿಶ್ವವಿದ್ಯಾನಿಲಯದ ರಾಜಕೀಯ ತಜ್ಞ ಪ್ರೊಫೆಸರ್ ಎಸ್‌. ಮುಜಫ್ಫರ್ ಅಸ್ಸಾದಿ "ಬಿಜೆಪಿ ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಒಗ್ಗಟ್ಟಿನ ಮೂಲಕ ಗಳಿಸಿದ 3B ಬ್ರಾಹ್ಮಣ, ಬನಿಯಾ ಹಾಗೂ ಬಿಲ್ಲವ ಜಾತಿಯ  ವಿಶ್ವಾಸ ಹಾಗೂ ಅಹಿಂದ(ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ)ರ ಬೆಂಬಲ ಬಿಜೆಪಿ ಕೈತಪ್ಪಬಹುದು. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಈ ಕೆಲ ವರ್ಗಗಳು ಮತ್ತೆ ತಮ್ಮ ಮೂಲ ಪಕ್ಷಕ್ಕೆ ಬೆಂಬಲ ಸೂಚಿಸುವ ಸಾಧ್ಯತೆಗಳಿವೆ. ಇದರಿಂದ ಬಿಜೆಪಿ ಕರ್ನಾಟಕದಲ್ಲಿ 70 ರಿಂದ 50 ಸ್ಥಾನಕ್ಕಿಳಿಯುವ ಭೀತಿಯೂ ಇದೆ' ಎಂದಿದ್ದಾರೆ.

ಅಲ್ಲದೇ ಅತ್ತ ಲಲಿಂಗಾಯತ ಸ್ವಾಮೀಜಿಗಳೂ ಬಿ. ಎಸ್‌. ಯಡಿಯೂರಪ್ಪ ಅವರನ್ನು ಬದಲಾಯಿಸದಂತೆ ಬಿಜೆಪಿಗೆ ನೇರ ಎಚ್ಚರಿಕೆ ಕೊಟ್ಟಿವೆ. ಅದರಲ್ಲೂ ವಿಶೇಷವಾಗಿ ಓರ್ವ ಮಠಾಧೀಶರು ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೆ ಕಾಂಗ್ರೆಸ್‌ಗೆ ಬೆಂಬಲ ನೀಡಲು ಹಿಂಜರಿಯಲ್ಲ ಎಂದು ಬಹಿರಂಗವಾಗೇ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸುತ್ತೇವೆ ಎಂದಿದ್ದಾರೆ. ಇದರಿಂದ ಬಿಜೆಪಿಯ ಮತಗಳು ಹಾಗೂ ಸಾಮಾಜಿಕ ಹಿಡಿತ ಕುಗ್ಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದ ರಾಜಕೀಯ ವಿಶ್ಲೇಷಕ ಡಾ.ಚಂದನ್ ಗೌಡ ಕೂಡಾ ಬಿ. ಎಸ್‌. ಯಡಿಯೂರಪ್ಪನವರ ಪ್ರಶ್ನಾತೀತ ನಾಯಕತ್ವ, ರಾಜಕೀಯ ಹಿಡಿತದ ಬಗ್ಗೆ ಇಂತದ್ದೇ ನಿಲುವು ವ್ಯಕ್ತಪಡಿಸಿದ್ದು, ಬಿ. ಎಸ್. ಯಡಿಯೂರಪ್ಪರಂತೆ ಬೇರಾರೂ ಲಿಂಗಾಯತರನ್ನು ಹೀಗೆ ಒಗ್ಗೂಡಿಸಿಲ್ಲ ಎಂದಿದ್ದಾರೆ. ಅಲ್ಲದೇ ಜೆಎಚ್ ಪಟೇಲ್ ಸಿಎಂ ಆಗಿದ್ದರೂ, ಅವರು ಲಿಂಗಾಯತ ನಾಯಕರಾಗಿರಲಿಲ್ಲ. ಲಿಂಗಾಯತರಲ್ಲಿ ಉಪ ಜಾತಿಗಳಿರಬಹುದು ಆದರೆ ಒಟ್ಟಾಗಿ ಎಲ್ಲರೂ ಬಿಎಸ್‌ವೈ ಅವರನ್ನು ಬೆಂಬಲಿಸುತ್ತಾರೆ. ಬಿಎಸ್‌ವೈ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸಮುದಾಯ ಯಾವತ್ತೂ ಟೀಕೆ ಮಾಡಿಲ್ಲ. ತಾವೇನು ಎಂಬುವುದನ್ನು ಈ ಹಿಂದೆ ಕೆಜೆಪಿ ಪಕ್ಷ ನಿರ್ಮಿಸಿ ಸಾಬೀತುಪಡಿಸಿದ್ದಾರೆ ಎಂದೂ ಹೇಳಿದ್ದಾರೆ. 

ಸಿಎಂ ಸ್ಥಾನಕ್ಕೆ ಬಿ. ಎಲ್. ಸಂತೋಷ್ ಹೆಸರು, ನಾಲ್ವರಿಗೆ ಡಿಸಿಎಂ ಸ್ಥಾನ?

ಸ್ವಾಮೀಜಿಗಳು, ಮಠಾಧೀಶರೆಲ್ಲರೂ ಯಡಿಯೂರಪ್ಪ ಅವರಿಗೆ ಇನ್ನುಳಿದ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕೆಂದು ಬಯಸಿದ್ದರು, ಇದು ಒಂದು ರೀತಿಯಲ್ಲಿ ಸಮಂಜಸವಾಗಿದೆ ಏಕೆಂದರೆ ಅವರು ಮೊದಲಿನಿಂದಲೂ ಪಕ್ಷವನ್ನು ನಿರ್ಮಿಸಿದರು ಮತ್ತು ಗೌರವಕ್ಕೆ ಅರ್ಹರು ಎಂದು ಡಾ. ಚಂದನ್ ಗೌಡ ಹೇಳಿದ್ದಾರೆ.

"ಅವರು (ಹೈಕಮಾಂಡ್) ಬಿಎಸ್‌ವೈ ಪದತ್ಯಾಗ ಹೇಗೆ ನಿರ್ವಹಿಸುತ್ತದೆ ಎಂಬುವುದರ ಮೇಲೆ ಎಲ್ಲವೂ ನಿಂತಿದೆ. ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ವ್ಯವಸ್ಥೆ ಮುಖ್ಯಮಂತ್ರಿ ಮತ್ತು ಡಿವೈಸಿಎಂ ಆಯ್ಕೆ ವಿಚಾರ ಇಂತಹ ವಿಚಾರಗಳಲ್ಲಿ ಅಭಿಪ್ರಾಯ ಪಡೆದರೆ ಪಕ್ಷಕ್ಕೆ ಅಷ್ಟೊಂದು ಹೊಡೆತ ಬೀಳುವುದಿಲ್ಲ. ಆಧರೆ ಒಂದು ವೇಳೆ ಬಿಎಸ್‌ವೈ ಅವರನ್ನು ತೀರಾ ಕಡೆಗಣಿಸಿ ಎತಮ್ಮಿಚ್ಛೆಯಂತೆ ನಡೆದುಕೊಂಡರೆ ಪರಿಣಾಮ ಕೊಂಚ ಕೆಟ್ಟದಿರಬಹುದೆಂಬ ಅಭಿಪ್ರಾಯ ಡಾ. ಚಂದನ್ ಗೌಡ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿದ್ದ ಬಳಿಕ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಪಡೆದಿದ್ದ 12 ಕ್ಕೂ ಹೆಚ್ಚು ಮಂತ್ರಿಗಳ ಭವಿಷ್ಯವೂ ಏನಾಗುತ್ತದೆ ಎನ್ನಲು ಸಾಧ್ಯವಿಲ್ಲ. ಈವರೆಗೆ ಬಿ. ಎಸ್. ಯಡಿಯೂರಪ್ಪ ಇದ್ದರು, ಆದರೆ ಇನ್ಮುಂದೆ ಅವರನ್ನು ರಕ್ಷಿಸಲು ರಾಜಾಹುಲಿಯೂ ಇಲ್ಲ. ಹೀಗಿರುವಾಗ ಇದು ಒಂದು ರೀತಿಯಲ್ಲಿ, ಅವರು ತಮ್ಮ ಮೂಲ ಪಕ್ಷಗಳಿಗೆ ಮರಳಲು ಒಂದು ಕಾರಣವಾಗಬಹುದು. ವಿರೋಧ ಪಕ್ಷಗಳೂ ತಮ್ಮ ಸ್ಥಾನವನ್ನೇರಿಸಲು ಅವರನ್ನು ಮರಳಿ ಕರೆಯಬಹುದು. ಕಾಂಗ್ರೆಸ್ ನಿಜವಾಗಿಯೂ ಲಾಭ ಪಡೆಯಲು ಬಯಸಿದರೆ, ಇದೊಂದು ಸುವರ್ಣ ಅವಕಾಶವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

click me!