'ಆಡಿಯೋದ ಮಿಮಿಕ್ರೀ ಆರ್ಟಿಸ್ಟ್ ನಳಿನ್ ಕುಮಾರ್ ಕಟೀಲ್ ಎನ್ನುವುದು ಸಾಬೀತಾಯ್ತು'

By Suvarna News  |  First Published Jul 26, 2021, 3:26 PM IST

* ಬಿಎಸ್‌ವೈ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ
* ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಬಗ್ಗೆ ಕಾಂಗ್ರೆಸ್ ತಿರುಗೇಟು
* ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಬಿಜೆಪಿ ಆರೋಪ-ಪ್ರತ್ಯಾರೋಪ


ಬೆಂಗಳೂರು, (ಜು.26): ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡುತ್ತಿದ್ದಂತೆ ವಿಪಕ್ಷ ಕಾಂಗ್ರೆಸ್ ಟೀಕೆಗಳನ್ನು ಮುಂದುವರೆಸಿದೆ.

ಅದರಲ್ಲೂ ಆಡಿಯೋ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಅವರನ್ನ ಮೀರ್ ಸಾಧಿಕ್ ಯಾರು ಅಂತೆಲ್ಲಾ ವಿಚಾರಗಳನ್ನ ಪ್ರಸ್ತಾಪಿಸಿ ಬಿಜೆಪಿಗೆ ತಿರುಗೇಟು ನೀಡಿದೆ.

Latest Videos

undefined

ನಾಯಕತ್ವ ಬದಲಾವಣೆ ನಿಶ್ಚಿತವಾ? ಬಿಜೆಪಿ ಅಧ್ಯಕ್ಷರದ್ದು ಎನ್ನಲಾದ ಆಡಿಯೋನಲ್ಲಿ ಬಹಿರಂಗ

ಮೀರ್‌ಸಾದಿಕ್ ಕಟೀಲರ ಆಡಿಯೋದ ಮಿಮಿಕ್ರೀ ಆರ್ಟಿಸ್ಟ್ ಸ್ವತಃ  ನಳಿನ್ ಕುಮಾರ್ ಕಟೀಲ್ ಅವರೇ ಎನ್ನುವುದು ಸಾಭೀತಾಯ್ತು!. ಯಡಿಯೂರಪ್ಪ  ಅವರು ಬಿಜೆಪಿಯ ಆತ್ಮ ಎನ್ನುತ್ತಲೇ ಆತ್ಮ'ವಂಚನೆ' ಮಾಡಿದ ಕಟೀಲ್ ಇಂದು ಬಲು 'ಸಂತೋಷ'ದಿಂದ ಕುಣಿದು ಕುಪ್ಪಳಿಸುತ್ತಿರಬಹುದು. ಅದೇನೇ ಆದರೂ ಹಿರಿಯ ನಾಯಕನಿಗೆ ಕಣ್ಣೀರು ಹಾಕುವಂತಹ ಕಷ್ಟ ಕೊಡಬಾರದಿತ್ತು ಎಂದು ಕರ್ನಾಟಕ ಬಿಜೆಪಿಗೆ ಟ್ಯಾಗ್ ಮಾಡಿದೆ.

ಮೀರ್‌ಸಾದಿಕ್ ಕಟೀಲರ ಆಡಿಯೋದ ಮಿಮಿಕ್ರೀ ಆರ್ಟಿಸ್ಟ್ ಸ್ವತಃ ಅವರೇ ಎನ್ನುವುದು ಸಾಭೀತಾಯ್ತು! ಅವರು ಬಿಜೆಪಿಯ ಆತ್ಮ ಎನ್ನುತ್ತಲೇ ಆತ್ಮ'ವಂಚನೆ' ಮಾಡಿದ ಕಟೀಲ್ ಇಂದು ಬಲು 'ಸಂತೋಷ'ದಿಂದ ಕುಣಿದು ಕುಪ್ಪಳಿಸುತ್ತಿರಬಹುದು!

ಅದೇನೇ ಆದರೂ ಹಿರಿಯ ನಾಯಕನಿಗೆ ಕಣ್ಣೀರು ಹಾಕುವಂತಹ ಕಷ್ಟ ಕೊಡಬಾರದಿತ್ತು !

— Karnataka Congress (@INCKarnataka)

 'ಪದಚ್ಯುತಿ' ಮಾಡಿದ್ದೇಕೆ?
ಯಡಿಯೂರಪ್ಪನವರೇ ಹೇಳಿಕೊಳ್ಳುವಂತೆ ಸಮರ್ಥ ಆಡಳಿತವೇ ಆಗಿದ್ದಿದ್ದರೆ ಈ 'ಪದಚ್ಯುತಿ' ಮಾಡಿದ್ದೇಕೆ? ತಮ್ಮದು ವಿಫಲ ಸರ್ಕಾರ, ವಿಫಲ ಆಡಳಿತ, ವಿಫಲ ನಾಯಕತ್ವ ಎನ್ನುವುದನ್ನು ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡುವ ಮೂಲಕ ಒಪ್ಪಿಕೊಂಡಂತಾಗಿದೆ.

ಕರ್ನಾಟಕ ಬಿಜೆಪಿಗೆ ತಾಕತ್ತಿದ್ದರೆ, ನೈತಿಕತೆಯಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ, ರಾಜ್ಯವನ್ನು ಯಾರು ಆಳಬೇಕು ಎನ್ನುವುದನ್ನು ಜನರೇ ನಿರ್ಧರಿಸಲಿ ಎಂದು ಕಾಂಗ್ರೆಸ್, ರಾಜ್ಯ ಬಿಜೆಪಿಗೆ ಸವಾಲು ಹಾಕಿದೆ. 

ಜಗದೀಶ್ ಶೆಟ್ಟ ಹಾಗೂ ಈಶ್ವರಪ್ಪ ಸಂಪುಟದಿಂದ ಹೊರಹೋಗುತ್ತಾರೆ ಅಂತೆಲ್ಲಾ ಮಾತನಾಡಿರುವ ವಿಡಿಯೋ ವೈರಲ್ ಆಗಿತ್ತು, ಇದು ಮೀರ್ ಸಾಧಿಕ್ ಅಂದ್ರೆ ಸಿದ್ದರಾಮಯ್ಯ ಹಾಗೂ ಮಹಾನಾಯಕ ಅಂದ್ರೆ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ಕರ್ನಾಟಕ ಬಿಜೆಪಿ ಆರೋಪಿಸಿತ್ತು.
 

click me!