ಯಡಿಯೂರಪ್ಪ ಅವರನ್ನ ಸೈಡ್ ಲೈನ್ ಮಾಡಲು ಸಾದ್ಯವೇ ಇಲ್ಲ: ಬಿವೈ ವಿಜಯೇಂದ್ರ

By Suvarna News  |  First Published Jan 15, 2023, 7:55 PM IST

ಯಡಿಯೂರಪ್ಪ ಅವರನ್ನ ಸೈಡ್ ಲೈನ್  ಮಾಡಲು ಸಾದ್ಯವೇ ಇಲ್ಲ. ಸೈಡ್ ಮಾಡಿದ್ರೇ ಯಡಿಯೂರಪ್ಪನವರನ್ನು ಕೇಂದ್ರ ಬಿಜೆಪಿ ಯಲ್ಲಿ ಸಂಸದಿಯ ಮಂಡಳಿಯ ಸದಸ್ಯ ಸ್ಥಾನ ನೀಡ್ತಿದ್ದಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.


ದಾವಣಗೆರೆ( ಜ.15): ಯಡಿಯೂರಪ್ಪ ಅವರನ್ನ ಸೈಡ್ ಲೈನ್  ಮಾಡಲು ಸಾದ್ಯವೇ ಇಲ್ಲ. ಸೈಡ್ ಮಾಡಿದ್ರೇ ಯಡಿಯೂರಪ್ಪನವರನ್ನು ಕೇಂದ್ರ ಬಿಜೆಪಿ ಯಲ್ಲಿ ಸಂಸದಿಯ ಮಂಡಳಿಯ ಸದಸ್ಯ ಸ್ಥಾನ ನೀಡ್ತಿದ್ದಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರವರು ಸ್ಪಷ್ಟ ಸಂದೇಶ ರವಾನಿಸಿದ್ರು. ‌ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಮಠದಲ್ಲಿ ನಡೆಯುತ್ತಿರುವ ಹರ ಜಾತ್ರೆಯಲ್ಲಿ ಭಾಗಿಯಾದ ಬಳಿಕ ಪ್ರತಿಕ್ರಿಯಿಸಿದ ಬಿ ವೈ ವಿಜಯೇಂದ್ರ . ಬಿಎಸ್ವೈಯವರು ಕೂಡ ಸಾಕಷ್ಟು ಬಾರಿ ಹೇಳಿದ್ದಾರೆ ಅಸಮಾಧಾನದ ಪ್ರಶ್ನೇಯೆ ಇಲ್ಲ, ಯಾರು ಕೂಡ ಸೈಡ್ ಲೈನ್ ಮಾಡುಲು ಸಾಧ್ಯವಿಲ್ಲ, ಬಿವೈ ಯಡಿಯೂರಪ್ಪನವರು ಸಕ್ರಿಯವಾಗಿ ರಾಜ್ಯರಾಜಕಾರಣದಲ್ಲಿತ್ತಾರೆ‌. ಶಿರಾ, ಕೆಆರ್ ಪೇಟೆಗೆ ಒಂದು ತಿಂಗಳ ಮುಂಚೆ ತೆರಳಿ ಚುನಾವಣೆ ಗೆದ್ದಿದ್ದೇವೆ, ಪಕ್ಷ ಯಾವುದೇ ನಿರ್ಧಾರ ಮಾಡಿದ್ರು ಅಲ್ಲಿ ಸ್ಪರ್ಧಿಸುವೆ.ಈಗ ನಮ್ಮ ತಂದೆ ಈಗ ಆಶಿರ್ವಾದ ಮಾಡಿದ್ದಾರೆ.  ಹೀಗಾಗಿ ನಾನು ಶಿಕಾರಿಪುರ ಕ್ಷೇತ್ರದಲ್ಲಿ ಓಡಾಡುತ್ತಿರುವೆ. ಯತ್ನಾಳ ಬಗ್ಗೆ ಪಕ್ಷದ  ವರಿಷ್ಠರು ನಿರ್ಧಾರ  ತೆಗೆದುಕೊಳ್ಳುತ್ತಾರೆ.

ಬಿಜೆಪಿಯಿಂದ ಬಿಎಸ್‌ವೈ ಕಡೆಗಣನೆ ವದಂತಿ ನಂಬಬೇಡಿ: ವಿಜಯೇಂದ್ರ

Tap to resize

Latest Videos

ಸ್ಯಾಂಟ್ರೋ ರವಿ ಅವರನ್ನ ರಕ್ಷಣೆ ಮಾಡುವುದಾದ್ರೆ  ಅವರನ್ನು ಬಂಧನ ಮಾಡುವ ಪ್ರಶ್ನೇಯೆ ಉದ್ಭವಾಗ್ತಿರಲಿಲ್ಲ, ಸ್ಯಾಟ್ರೋ ರವಿ ಬಂಧನದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿರವರ ಆರೋಪಗಳಿಗೆ ಗೃಹ ಸಚಿವರು ಉತ್ತರ ಕೊಡುತ್ತಾರೆ ಎಂದರು ಜಾರಿಕೊಂಡರು. ಇನ್ನು ಪರಿಷತ್ ಸದಸ್ಯ ಸಿಪಿ ಯೋಗಿಶ್ವರ್ ಪಕ್ಷದ ವಿರುದ್ಧದ ಆಡಿದ ಆಡಿಯೋ ವೈರಲ್ ಕುರಿತು ಕೇಳಿದ ಪ್ರಶ್ನೆಗೆ ಬಿವೈ ವಿಜಯೇಂದ್ರ ನನ್ನ ಗಮನಕ್ಕೆ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇನ್ನು ಯತ್ನಾಳ್ ಹಾಗು ಸಿಪಿ ಯೋಗೇಶ್ವರ್ ರವರು ಪಕ್ಷದ ವಿರುದ್ಧ ಹೇಳಿಕೆ ನೀಡ್ತಿರುವುದು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಸೂಕ್ತ ಸಂಧರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತರೆ, ಇನ್ನು ಹಳ್ಳಿ ಹಕ್ಕಿ ವಿಶ್ವನಾಥ್ ರವರು ಕಾಂಗ್ರೆಸ್ ಪಕ್ಷ ಸೇರಿರುವುದರಿಂದ ಪಕ್ಷಕ್ಕೆ ನಷ್ಟ ಇಲ್ಲ, ಯಾರೋ ಒಬ್ಬಿಬರು ಪಕ್ಷ ಬಿರುಡುವುದ್ದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ. 

ಸ್ಯಾಂಟ್ರೋ ರವಿ ಪ್ರಕರಣ: ನಮ್ಮ ಸರ್ಕಾರ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ: ಬಿಎಸ್‌ವೈ

ಅಭಿಮಾನಿಗಳಿಂದ ಕೇಳಿ ಬಂತು ಮುಂದಿನ ಸಿಎಂ ಬಿವೈ ವಿಜಯೇಂದ್ರ ಘೋಷಣೆ:
ದಾವಣಗೆರೆ ಜಿಲ್ಲೆಯ ಹರಿಹರದ ಹನಗವಾಡಿ ಗ್ರಾಮದ ಬಳಿ ಇರುವ ಪಂಚಮಸಾಲಿ ಮಠದದಲ್ಲಿ ನಡೆಯುತ್ತಿರುವ ಹರ ಜಾತ್ರೆಯಲ್ಲಿ ಮುಂದಿನ ಸಿಎಂ ಬಿವೈ ವಿಜಯೇಂದ್ರ ಎಂಬ ಘೋಷಣೆ ಬಿಜೆಪಿ ಕಾರ್ಯಕರ್ತರಿಂದ ಕೇಳಿಬಂದಿದೆ.  ಹರ ಜಾತ್ರೆಯ ಎರಡನೇ ದಿನ ಇಂದು ಲಿಂಗೈಕ್ಯರಾದ ಸಿದ್ದೇಶ್ವರ ಸ್ವಾಮೀಜಿ ಯವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಠದ ಆವರಣಕ್ಕೆ ಆಗಮಿಸಿದ ವಿಜಯೇಂದ್ರವರು ಮುಂದಿನ ಸಿಎಂ ಬಿವೈ ವಿಜಯೇಂದ್ರ ಎಂಬ ಘೋಷಣೆ ಕೇಳಿ ಬಂತು. ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿವೈ ವಿಜಯೇಂದ್ರವರಿಗೆ ಕಾರ್ಯಕರ್ತರು ಮುಂದಿನ ಸಿಎಂ ರಾಜಹುಲಿ ಎಂದು ಘೋಷಣೆ ಹಾಕಿದರು.

click me!