ಮೈತ್ರಿ ಬಗ್ಗೆ ಹಾದಿ-ಬೀದಿಯಲ್ಲಿ ಚರ್ಚಿಸೋಲ್ಲ : ಪ್ರೀತಂಗೌಡ

Kannadaprabha News   | Kannada Prabha
Published : Feb 12, 2026, 04:16 AM IST
Preetham Gowda

ಸಾರಾಂಶ

ಮೈತ್ರಿ ವಿಚಾರವಾಗಿ ಬೀದಿಯಲ್ಲಿ ಚರ್ಚಿಸೋದು ಬೇಡ. ನಾಲ್ಕು ಗೋಡೆ ಮಧ್ಯೆ ಚರ್ಚಿಸಬೇಕೆಂಬ ಸಲಹೆ ಕೊಟ್ಟಿದ್ದಾರೆ. ಆ ಸಲಹೆ ಸರಿಯಾಗಿದೆ ಹಾಗಾಗಿ ನಾನು ಸೈಲೆಂಟ್ ಆಗಿದ್ದೇನೆ. ಜೆಡಿಎಸ್‌ನವರು ಮುಖ್ಯಮಂತ್ರಿ, ಅಭ್ಯರ್ಥಿ ಆಯ್ಕೆ ವಿಚಾರವಾಗಿ ಚರ್ಚಿಸಬಾರದು, ದೆಹಲಿ ನಾಯಕರು ಚರ್ಚಿಸಿ ತೀರ್ಮಾನಿಸಲಿದ್ದಾರೆ.

ಪಾಂಡವಪುರ : ನಾನು ಎನ್‌ಡಿಎ ಮೈತ್ರಿ ಪರವಾಗಿದ್ದೇನೆ. ಮೈತ್ರಿಯ ರೀತಿ-ರಿವಾಜುಗಳನ್ನು ತೀರ್ಮಾನಿಸೋದು ದೆಹಲಿಯ ನಾಯಕರು. ಹಾಗಾಗಿ ಅವರ ಸೂಚನೆಯನ್ನು ಪ್ರೀತಂಗೌಡ ಸೇರಿದಂತೆ ಎಲ್ಲಾ ಮೈತ್ರಿಯ ನಾಯಕರು ಪಾಲನೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಹೇಳಿದರು.

ಹಾದಿ-ಬೀದಿಯಲ್ಲಿ ಚರ್ಚಿಸೋದು ಬೇಡ

ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತ ಅಶೋಕ್ ಎಂಬುವರ ಮನೆಗೆ ಭೇಟಿಕೊಟ್ಟು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈತ್ರಿಯ ವಿಚಾರವಾಗಿ ಹಾದಿ-ಬೀದಿಯಲ್ಲಿ ಚರ್ಚಿಸೋದು ಬೇಡ. ನಾಲ್ಕು ಗೋಡೆ ಮಧ್ಯೆ ಚರ್ಚಿಸಬೇಕೆಂಬ ಸಲಹೆ ಕೊಟ್ಟಿದ್ದಾರೆ. ಆ ಸಲಹೆ ಸರಿಯಾಗಿದೆ ಹಾಗಾಗಿ ನಾನು ಸೈಲೆಂಟ್ ಆಗಿದ್ದೇನೆ. ಜೆಡಿಎಸ್‌ನವರು ಸಹ ಮುಂದಿನ ಮುಖ್ಯಮಂತ್ರಿ, ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚಿಸಬಾರದು, ಆ ವಿಚಾರವಾಗಿ ದೆಹಲಿಯ ನಾಯಕರು ಚರ್ಚಿಸಿ ತೀರ್ಮಾನಿಸಲಿದ್ದಾರೆ ಎಂದರು.

ಗೊಂದಲ ಬಗೆಹರಿಸುವ ಕೆಲಸ ಮಾಡಿದ್ದೇವೆ

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕಾರ್ಯಕರ್ತರನ್ನು ಉದ್ದೇಶದಿಂದ ಮಾತನಾಡಿದಾಗ ನಮ್ಮ ಕಾರ್ಯಕರ್ತರಿಗೆ ಸ್ವಲ್ಪಗೊಂದಲ ಇತ್ತು ಹಾಗಾಗಿ ಗೊಂದಲ ಬಗೆಹರಿಸುವ ಕೆಲಸ ಮಾಡಿದ್ದೇವೆ ಅಷ್ಟೆ. ಚಿಕ್ಕವರೇ ಆಗಲಿ ದೊಡ್ಡವರೇ ಆಗಲಿ ರಚನಾತ್ಮಕ ಸಲಹೆಗಳು ಬಂದರೆ ಅದನ್ನು ಎರಡು ಕಡೆಯವರು ಪಾಲನೆ ಮಾಡಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಎರಡು ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ಮೈತ್ರಿಯ ನಾಯಕರು ತೀರ್ಮಾಸಲಿದ್ದಾರೆ ಎಂದರು.

ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ 2028ರವರೆಗೂ ಎಲ್ಲಾ ಚುನಾವಣೆಗಳನ್ನು ಎದುರಿಸುತ್ತೇವೆ. 2028ಕ್ಕೂ ವಿಜಯೇಂದ್ರ ಅವರ ನೇತೃತ್ವದಲ್ಲಿ ಹಾಗೂ ಎನ್‌ಡಿಎ ಮೈತ್ರಿಕೂಟದಿಂದ 160ಕ್ಕೂ ಅಧಿಕ ಸ್ಥಾನ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷ ನನಗೆ ಸಂಘಟನೆ ಮಾಡುವ ಜವಾಬ್ದಾರಿಕೊಟ್ಟಿದೆ. ಪಕ್ಷ ಬೆಳೆಸುವುದಷ್ಟೇ ನನ್ನ ಧ್ಯೇಯವಾಗಿದೆ. ಈಗಾಗಲೇ ಪಕ್ಷ ಸಂಘಟನೆ ಮಾಡುವ ವಿಚಾರವಾಗಿ ಮಂಡ್ಯದಲ್ಲಿ ಹಲವು ಸಂಘಟನಾತ್ಮಕ ಕಾರ್ಯಕರ್ತರ ಸಭೆ ನಡೆಸಿದ್ದೇವೆ. ಇದೀಗ ಮೈಸೂರು ಜಿಲ್ಲೆಯಲ್ಲಿ ಸಂಘಟಕನಾತ್ಮಕ ಸಭೆಯನ್ನು ನಡೆಸಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಎಲ್ಲರ ಜತೆಗೂಡಿ ಪಕ್ಷ ಸಂಘಟನೆ ಮಾಡಲಿದ್ದೇವೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ತಾಲೂಕು ಅಧ್ಯಕ್ಷ ಧನಂಜಯ್, ಟೌನ್ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಅಶೋಕ್, ಆನಂದ್, ನವೀನ್ ಸೇರಿದಂತೆ ಹಲವರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Epstein Files: ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ಅನಿಲ್ ಅಂಬಾನಿ ಹೆಸರು, ಯಾಕಿನ್ನೂ ಜೈಲಲ್ಲಿಲ್ಲ? - ರಾಹುಲ್ ಗಾಂಧಿ ಪ್ರಶ್ನೆ
Rahul Gandhi: ಅಮೆರಿಕದ ಪ್ರಾಬಲ್ಯಕ್ಕೆ ಜಗತ್ತು ಸವಾಲು; ಆರ್ಥಿಕ ಸಮೀಕ್ಷೆ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?