ನನ್ನ ಮಕ್ಕಳು, ಮೊಮ್ಮಕ್ಕಳು BJPಯಲ್ಲೇ ಇರಬೇಕೆಂದು ವಿಲ್ನಲ್ಲಿ ಬರೆದಿಟ್ಟು ಬಿಡುತ್ತೇನೆ ಎಂದು ಕರ್ನಾಟಕದ ಸಚಿವರೊಬ್ಬರು ಹೇಳಿಕೆ ಕೊಟ್ಟಿದ್ದಾರೆ.
ಉಡುಪಿ, (ಫೆ.26): 25 ವರ್ಷ ಬಿಜೆಪಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ.ಕರ್ನಾಟಕದಲ್ಲಿ ಬಿಜೆಪಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ರಾಜ್ಯದ ಭವಿಷ್ಯ ಇರೋದೇ ಭಾರತೀಯ ಜನತಾ ಪಕ್ಷದಲ್ಲಿ. ಅದಕ್ಕೆ ನಾವು ಬಿಜೆಪಿಗೆ ಬಂದಿದ್ದೇವೆ ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಉಡುಪಿಯಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಗೆ ಬಂದು ಒಳ್ಳೆಯ ಕೆಲಸವನ್ನ ಮಾಡಿದೆ. ನಾನು ನನ್ನ ಮಕ್ಕಳು, ಮೊಮ್ಮಕ್ಕಳು ಬಿಜೆಪಿಯಲ್ಲೇ ಇರ್ತೇವೆ. ಅವರೆಲ್ಲರೂ ಬಿಜೆಪಿಯಲ್ಲಿರಬೇಕೆಂದು ವಿಲ್ನಲ್ಲಿ ಬರೆದಿಟ್ಟು ಬಿಡುತ್ತೇನೆ. ಬಿಜೆಪಿ ಬಿಟ್ಟು ಯಾರು ಹೋಗಲ್ಲ ಎಂದು ಹೇಳಿದರು.
undefined
ಪಂಚ ರಾಜ್ಯ ಚುನಾವಣೆ ಡೇಟ್ ಫಿಕ್ಸ್, ರೈತ ಜನಾಂದೋಲನದಲ್ಲಿ ಟ್ವಿಸ್ಟ್: ಫೆ.26ರ ಟಾಪ್ 10 ಸುದ್ದಿ!
ಇನ್ನು ಇದೇ ವೇಳೆ ಮೈಸೂರು ಪಾಲಿಕೆಯಲ್ಲಿ ಮೇಯರ್ ಚುನಾವಣೆ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನಕ್ಕೆ ಸಂಬಂಧಿಸಿದಂತೆ ಕ್ರೀಡಾ ಸಚಿವ ನಾರಾಯಣಗೌಡ ಪ್ರತಿಕ್ರಿಯಿಸಿದ್ದು, ಈ ತರಹ ತುಂಬಾ ಬೆಳವಣಿಗೆ ಆಗುತ್ತವೆ, ಕಾದುನೋಡಿ. ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಗಲಾಟೆ ದೊಡ್ಡಮಟ್ಟಕ್ಕೆ ಆಗುತ್ತೆ ಎಂದರು.
ಗುಜರಾತ್ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಧಾನಿ ಮೋದಿ ಹೆಸರಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತವಾದ ಬಗ್ಗೆ ಕ್ರೀಡಾಂಗಣ ಅಭಿವೃದ್ಧಿಯಾಗಿದ್ದು ಮೋದಿಯವರಿಂದ ಅಲ್ವಾ. ಆಕ್ಷೇಪ ವ್ಯಕ್ತಪಡಿಸುವುದು ಕೇವಲ ರಾಜಕಾರಣ. ಈ ರಾಜಕಾರಣಕ್ಕೆ ಯಾರು ತಲೆ ಕೆಡಿಸಿಕೊಳ್ಳಬಾರದು. ಅಭಿವೃದ್ಧಿಗೆ ಮೋದಿ ಕಾರಣ ಅಂದ್ಮೇಲೆ ಅವರ ಹೆಸರು ಇಡೋದ್ರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.