'10 ರೂ. ಲಂಚ ಪಡೆದಿದ್ದು ಹೌದಾದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ'

By Suvarna News  |  First Published Feb 27, 2021, 6:45 PM IST

ಬೇರೆಯವರ ಬಳಿ ಲಂಚ ಕೇಳುವ ಸ್ಥಿತಿ ನನಗೆ ಬಂದಿಲ್ಲ‌. ಒಂದು ವೇಳೆ 10 ರೂ. ಲಂಚ ಪಡೆದಿದ್ದು ಹೌದಾದರೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ನಿರಾಣಿ ಹೇಳಿದ್ದಾರೆ.


ಕೊಪ್ಪಳ, (ಫೆ.27): ಫೌಂಡೇಷನ್ ಮೂಲಕ ನಾವು  5000 ಕೋಟಿ ರೂ. ವ್ಯವಹಾರ ನಡೆಸುತ್ತಿದ್ದು, 75 ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇವೆ. ನನಗೆ ಯಾರಾದರೂ 10 ರೂ.  ಲಂಚ ಕೊಟ್ಟಿದ್ದೇನೆ ಎಂದು ಸಾಬೀತು ಮಾಡಿದರೆ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸವಾಲು ಹಾಕಿದರು. 

ಇಂದು (ಶನಿವಾರ) ಕೊಪ್ಪಳ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನಾನು ಉದ್ಯಮಿಯಾಗಿದ್ದು, 5-10 ಲಕ್ಷಕ್ಕೆ ಬೇರೆಯವರಿಂದ ಒಡ್ಡುವಂತಹ ದಯಾನಿಯ ಸ್ಥಿತಿಗೆ ಬಂದಿಲ್ಲ ಎಂದರು.

Latest Videos

undefined

ಕ್ರಷರ್ ಮಾಲೀಕರಿಗೆ ರಾಜ್ಯ ಸರ್ಕಾರ ಡೆಡ್‌ಲೈನ್

 ನನ್ನ ಫೌಂಡೇಷನ್ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದೇನೆ. 10-20 ಲಕ್ಷದ ಬದಲಿಗೆ 10 ರೂ. ಕೊಟ್ಟಿರುವುದು ಸಾಬೀತಾದರೆ ಒಂದೇ ಒಂದೂ ಕ್ಷಣವೂ  ಅಧಿಕಾರದಲ್ಲಿ ಇರುವುದಿಲ್ಲ ಎಂದರು.

ಇಲಾಖೆಯಲ್ಲಿ ನನ್ನ ಹೆಸರು ಹೇಳಿಕೊಂಡು ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೂ ಸಹಿಸುವುದಿಲ್ಲ. ಅಂಥಹ ಮಾಹಿತಿ ಇದ್ದರೆ ನೇರವಾಗಿ ನನಗೆ ದೂರು ಕೊಡಬಹುದು.ಇಲಾಖೆಯನ್ನು ಸಾಧ್ಯವಾದಷ್ಟು ಪಾರದರ್ಶಕವಾಗಿ ಮುನ್ನಡೆಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು. 

click me!