ಜನಾರ್ದನ ರೆಡ್ಡಿ ರಾಜಕೀಯ ರಿ-ಎಂಟ್ರಿ: 18ರ ನಂತರ ಕ್ಷೇತ್ರ ಪ್ರಕಟ?

By Govindaraj SFirst Published Dec 7, 2022, 6:22 AM IST
Highlights

ಹೊಸ ಪಕ್ಷದ ವಿಚಾರವಾಗಿ ಈಗ ಹೆಚ್ಚಿಗೆ ಮಾತನಾಡಲ್ಲ. ಇನ್ನೂ ಸಮಯ ಇದೆ. ರಾಜಕೀಯವಾಗಿ ಡಿ.18ರ ನಂತರವೇ ಮಾತನಾಡುತ್ತೇನೆ. ಆಗ ಎಲ್ಲವನ್ನೂ ಎಳೆ ಎಳೆಯಾಗಿ ನಿಮ್ಮ ಮುಂದಿಡುತ್ತೇನೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನೆಲ್ಲ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಹೇಳಿದ್ದಾರೆ.

ಗದ​ಗ/ಕೊಪ್ಪಳ (ಡಿ.07): ಹೊಸ ಪಕ್ಷದ ವಿಚಾರವಾಗಿ ಈಗ ಹೆಚ್ಚಿಗೆ ಮಾತನಾಡಲ್ಲ. ಇನ್ನೂ ಸಮಯ ಇದೆ. ರಾಜಕೀಯವಾಗಿ ಡಿ.18ರ ನಂತರವೇ ಮಾತನಾಡುತ್ತೇನೆ. ಆಗ ಎಲ್ಲವನ್ನೂ ಎಳೆ ಎಳೆಯಾಗಿ ನಿಮ್ಮ ಮುಂದಿಡುತ್ತೇನೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನೆಲ್ಲ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಹೇಳಿದ್ದಾರೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ಬಿಜೆಪಿಯಿಂದ. ಅಡ್ವಾಣಿಯವರ ರಥಯಾತ್ರೆ ಮೂಲಕ ಕೆಲಸ ಶುರು ಮಾಡಿ​ದ್ದೆ. ಏನಿದ್ದರೂ ಬಿಜೆಪಿ ಮೇಲೆ ಅಭಿಮಾನ ಇರುತ್ತದೆ. ಮುಂದೆ ಪಕ್ಷದ ವರಿಷ್ಠರು, ಹಿರಿ​ಯರು ನಾಯ​ಕ​ರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆಂದು ಕಾದು ನೋಡುತ್ತೇನೆ. ನನಗೆ ನಾಯಕರ ಸಂಪರ್ಕಕ್ಕಿಂತ ಹೆಚ್ಚಾಗಿ ಜನರ ಜೊತೆ ಸಂಪರ್ಕವಿದೆ ಎಂದರು.

ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ವಾಸ್ತವ್ಯ, ಶೀಘ್ರ ಗೃಹಪ್ರವೇಶ

ಈಗ ಜನರ ಜತೆ ಇರಬೇಕು: ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ನಿರ್ಬಂಧ ಹೇರಿದೆ. ಹೀಗಾಗಿ ಕಾರ​ಣಾಂತ​ರ​ಗ​ಳಿಂದ ಬಳ್ಳಾರಿಯಿಂದ ಹೊರಗಿರಬೇಕಿದೆ. ಬೆಂಗಳೂರಲ್ಲಿ ಇರಲು ಇಷ್ಟಇಲ್ಲ. ಹೀಗಾಗಿ ಉತ್ತರ ಕರ್ನಾಟಕ, ಬಳ್ಳಾರಿ, ಬೀದರ್‌ನಿಂದ ಬೆಳಗಾವಿವರೆಗೆ ಎಲ್ಲಿಯಾ​ದ​ರೂ ಇರಬೇಕು. ಗಂಗಾವತಿಯ ವಾತಾ​ವ​ರಣ ಮನ​ಸ್ಸಿಗೆ, ಆರೋ​ಗ್ಯಕ್ಕೆ ತೃಪ್ತಿ ನೀಡು​ತ್ತ​ದೆ. ನಮ್ಮ ಜನರ ಮಧ್ಯೆ ಇರಬೇಕು ಎನ್ನುವ ಕಾರಣಕ್ಕೆ ಅಲ್ಲಿ ಮನೆ ಮಾಡಿದ್ದೇನೆ ಎಂದ ಅವರು, 12 ವರ್ಷ ಮನೆಯಲ್ಲಿದ್ದೆ, ಈಗ ಜನರ ಜೊತೆ ಇರಬೇಕು ಎಂದು ಹೇಳಿ​ದ​ರು.

ಗದಗ ನಗರ​ದಲ್ಲಿದ್ದಾಗ ಶ್ರೀರಾಮುಲು ಅವರ ಮನೆಯಲ್ಲೇ ಇರುತ್ತೇನೆ. ರಾಮುಲು ಮನೆ ಅಂದ್ರೆ ಅದು ನಮ್ಮ ಮನೆ. ನಮ್ಮ ಮನೆ ಅಂದ್ರೆ ರಾಮುಲು ಮನೆ. ನಮ್ಮ ನಡುವೆ ರಾಜಕೀಯಕ್ಕೂ ಮೀರಿದ ಸ್ನೇಹ, ಪ್ರೀತಿ ಬಾಂಧವ್ಯವಿದೆ. ನಾವು ಒಂದೇ ಕುಟುಂಬದಂತಿದ್ದೇವೆ ಎಂದು ಹೇಳುವ ಮೂಲಕ ಸಚಿವ ಶ್ರೀರಾಮುಲು ಮತ್ತು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಸ್ಥಾಪನೆ?: ಬಿಜೆಪಿಯಿಂದ ಮುನಿಸಿಕೊಂಡಿರುವ ರೆಡ್ಡಿ

ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ಬಿಜೆಪಿಯಿಂದ ಅಡ್ವಾಣಿಯವರ ರಥಯಾತ್ರೆ ಮೂಲಕ. ಏನಿದ್ದರೂ ಬಿಜೆಪಿ ಮೇಲೆ ಅಭಿಮಾನ ಇರುತ್ತದೆ. ವರಿಷ್ಠರ ತೀರ್ಮಾನ ಕಾದು ನೋಡುತ್ತೇನೆ. ನನಗೆ ನಾಯಕರ ಸಂಪರ್ಕಕ್ಕಿಂತ ಹೆಚ್ಚಾಗಿ ಜನರ ಸಂಪರ್ಕವಿದೆ.
-ಜಿ.ಜನಾರ್ದನ ರೆಡ್ಡಿ, ಮಾಜಿ ಸಚಿವ

click me!