ಜೀವ ಇರುವವರೆಗೂ ಚುನಾವಣೆಗೆ ನಿಲ್ಲುವೆ : ರಮೇಶ ಜಿಗಜಿಣಗಿ

Kannadaprabha News   | Kannada Prabha
Published : Nov 04, 2025, 06:56 AM IST
 Ramesh Jigajinagi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ರಾಜಕಾರಣದಲ್ಲಿ ಇರುವವರೆಗೆ ನಾನು ಚುನಾವಣೆಗೆ ಸ್ಪರ್ಧಿಸುವೆ. ನನಗೇನು ವಯಸ್ಸಾಗಿಲ್ಲ. ನಾನು ರಾಜಕಾರಣದಲ್ಲಿ ಇರುವವರೆಗೆ ನೀವೆಲ್ಲಾ ಕಾರ್ಯಕರ್ತರು ನನ್ನ ಜತೆ ಇರಬೇಕು. ನಾನು ಬದುಕಿರುವವರೆಗೆ ನಿಮ್ಮ ಜತೆ ಇರುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಇಂಡಿ : ಪ್ರಧಾನಿ ನರೇಂದ್ರ ಮೋದಿ ಅವರು ರಾಜಕಾರಣದಲ್ಲಿ ಇರುವವರೆಗೆ ನಾನು ಚುನಾವಣೆಗೆ ಸ್ಪರ್ಧಿಸುವೆ. ನನಗೇನು ವಯಸ್ಸಾಗಿಲ್ಲ. ನಾನು ರಾಜಕಾರಣದಲ್ಲಿ ಇರುವವರೆಗೆ ನೀವೆಲ್ಲಾ ಕಾರ್ಯಕರ್ತರು ನನ್ನ ಜತೆ ಇರಬೇಕು. ನಾನು ಬದುಕಿರುವವರೆಗೆ ನಿಮ್ಮ ಜತೆ ಇರುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಶಾಸಕರ ಚುನಾವಣೆಯಲ್ಲಿ ಯಾಕೆ ಹೆಚ್ಚಿನ ಮತಗಳು ಬರುವುದಿಲ್ಲ

ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ನಡೆದ ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜನ್ಮಭೂಮಿ ಇಂಡಿ ತಾಲೂಕಿನಿಂದ ದೆಹಲಿವರೆಗೆ ನನ್ನನ್ನು ನಿಮ್ಮ ಮನೆಯ ಸಹೋದರನಂತೆ ಅಪ್ಪಿಕೊಂಡು ಆಶೀರ್ವಾದ ಮಾಡಿದ್ದೀರಿ. ಆದರೆ ನನಗೆ ಒಂದು ನೋವು ಕಾಡುತ್ತಿದೆ. ಇಂಡಿ ತಾಲೂಕಿನಲ್ಲಿ ಪ್ರತಿ ಬಾರಿಯು ಸಂಸದರ ಚುನಾವಣೆಯಲ್ಲಿ ನನ್ನನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡುವ ಕಾರ್ಯಕರ್ತರು ಶಾಸಕರ ಚುನಾವಣೆಯಲ್ಲಿ ಯಾಕೆ ನಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತಗಳು ಬರುವುದಿಲ್ಲ? ಇದರಿಂದ ನನ್ನ ಶಕ್ತಿ ಕಡಿಮೆ ಮಾಡಬೇಡಿ ಎಂದರು.ನನ್ನ ರಾಜಕೀಯ ಪಾಠ ಶಾಲೆ ಇಂಡಿಯಿಂದಲೇ ಆರಂಭವಾಗಿದ್ದು, ನಾನು ಭಾವನಾತ್ಮಕ ರಾಜಕೀಯ ಮಾಡುವವನು. ವೋಟ್‌ಗಾಗಿ ಅಲ್ಲ, ನಾನು ಜೀವಂತ ಇರುವವರೆಗೂ ಚುನಾವಣೆಗೆ ನಿಲುತ್ತೇನೆ. ಜಾತ್ಯತೀತ ಹಾಗೂ ರಾಷ್ಟ್ರೀಯ ಮನೋಭಾವದಿಂದ ಕೆಲಸ ಮಾಡುತ್ತಿರುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ ಮಾತ್ರ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿಯನ್ನು ಶಾಸಕರಾಗಿ ನೋಡುವುದು ನನ್ನ ಗುರಿ

ನೂತನ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಮಾತನಾಡಿ, ತಾಲೂಕಿನ ಮುಖಂಡರು, ಕಾರ್ಯಕರ್ತರ ಸಹಕಾರದಿಂದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಮತ್ತು 2028 ಕ್ಕೆ ಶಾಸಕರ ಚುನಾವಣೆಯಲ್ಲಿ ಇಂಡಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಶಾಸಕರಾಗಿ ನೋಡುವುದು ನನ್ನ ಗುರಿ. ಇದಕ್ಕೆ ಬಿಜೆಪಿ ನಾಯಕರು, ಕಾರ್ಯಕರ್ತರು ಹಗಲಿರುಳೆನ್ನದೇ ಪಕ್ಷಕ್ಕೆ ದುಡಿಯುತ್ತೇವೆ. ಕಾರ್ಯಕರ್ತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ, ಸಿದ್ದಲಿಂಗ ಹಂಜಗಿ, ಎಸ್.ಎ.ಪಾಟೀಲ, ಕಾಸುಗೌಡ ಬಿರಾದಾರ, ಮಳುಗೌಡ ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ಶೀಲವಂತ ಉಮರಾಣಿ, ರಾಘವೇಂದ್ರ ಕಾಪಸೆ, ದೇವೆಂದ್ರ ಕುಂಬಾರ ಇತರರು ಮಾತನಾಡಿದರು.

ಮುಖಂಡರಾದ ಅನಿಲ ಜಮಾದಾರ, ರಾಜಕುಮಾರ ಸಗಾಯಿ, ಭೀಮಸಿಂಗ ರಾಠೋಡ, ರವಿಕಾಂತ ಬಗಲಿ, ರಾಜಕುಮಾರ ಸಗಾಯಿ, ಬಿ.ಎಸ್‌.ಪಾಟೀಲ, ವಿಜಯಲಕ್ಷ್ಮಿ ರೂಗಿಮಠ, ಅನಿಲಗೌಡ ಬಿರಾದಾರ, ರವಿ ವಗ್ಗೆ, ಮಹೇಶ ಹೂಗಾರ, ಸೋಮು ನಿಂಬರಗಿಮಠ, ವೆಂಕಟೇಶ ಕುಲಕರ್ಣಿ, ಸಂಜು ದಶವಂತ, ಸಂತೋಷಗೌಡ ಪಾಟೀಲ, ರಾಮಸಿಂಗ್‌ ಕನ್ನೊಳ್ಳಿ, ಸುನಂದಾ ಗಿರಣಿವಡ್ಡರ, ಮಂಜುನಾಥ ದೇವರ, ಶಿವು ಬಗಲಿ, ರಮೇಶ ಧರೆನವರ, ದತ್ತಾ ಬಂಡೆನವರ, ಸಚಿನ‌ ಬೊಳೆಗಾಂವ, ಮಲ್ಲು ವಾಲಿಕಾರ, ವಿಜುಗೌಡ ಪಾಟೀಲ ಸೇರಿ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು