ಯಾರೋ ಒಬ್ಬ ಘೋಷಣೆ ಕೂಗಿದ್ರೆ ಅವರನ್ಯಾಕೆ (ನಾಸಿರ್ ಹುಸೇನ್) ಜವಾಬ್ದಾರಿ ಮಾಡೋದು ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ.
ವಿಜಯಪುರ (ಮಾ.10): ಯಾರೋ ಒಬ್ಬ ಘೋಷಣೆ ಕೂಗಿದ್ರೆ ಅವರನ್ಯಾಕೆ (ನಾಸಿರ್ ಹುಸೇನ್) ಜವಾಬ್ದಾರಿ ಮಾಡೋದು ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ. ಪಾಕ್ ಪರ ಘೋಷಣೆ ಕೂಗಿದ ಪ್ರಕರಣ ಮುಗಿಯುವವರೆಗೂ ನಾಸೀರ್ ಅವರಿಗೆ ಪ್ರಮಾಣ ವಚನ ಬೋಧಿಸಬಾರದು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಪಾಕ್ ಪರ ಯಾರೇ ಘೋಷಣೆ ಕೂಗಲಿ, ಅದು ಘೋರ ಅಪರಾಧ. ಘೋಷಣೆ ಯಾರು ಕೂಗಿದ್ದಾರೆ, ಅವರನ್ನು ದೇಶದಿಂದ ಗಡಿಪಾರು ಮಾಡಬೇಕು. ಅದನ್ನು ಬಿಟ್ಟು ಇನ್ನೊಬ್ಬರನ್ನು ಹೊಣೆ ಮಾಡಲಾಗದು ಎಂದು ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ದಲಿತರು ಸಿಎಂ ಆಗಬೇಕು ಎಂಬ ಸಚಿವ ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಸಚಿವರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಆದರೆ, ಈಗ ಸಿಎಂ ಕುರ್ಚಿ ಖಾಲಿಯಿಲ್ಲ, ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಸೂಕ್ತ ಸಂದರ್ಭ ಬಂದಾಗ ದಲಿತರು ಸಿಎಂ ಆಗೋದ್ರಲ್ಲಿ ತಪ್ಪೇನಿದೆ?. ದಲಿತ ಸಿಎಂ ಆಗಲು ನಿಶ್ಚಿತವಾಗಿ ನನ್ನ ಬೆಂಬಲವಿದೆ ಎಂದರು. ನೀರಿನ ಸಮಸ್ಯೆಯಿಂದ ಐಟಿಬಿಟಿ ಕಂಪನಿಗಳು, ಕೈಗಾರಿಕೆಗಳು ರಾಜ್ಯಕ್ಕೆ ಬರಲು ಹಿಂಜರಿಯುತ್ತಿವೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ನೀರಿನ ಸಮಸ್ಯೆ ಎಲ್ಲೆಡೆ ಇದೆ. ಇಡೀ ವಿಶ್ವದಲ್ಲಿ ಬರಗಾಲವಿದೆ. ಬೆಂಗಳೂರು, ನಮ್ಮ ರಾಜ್ಯವಷ್ಟೆ ಅಲ್ಲ. ದೇಶದೆಲ್ಲೆಡೆ ಇದೆ. ನೀರಿನ ಸಮಸ್ಯೆಯನ್ನು ನಿಭಾಯಿಸುತ್ತೇವೆ. ಕೈಗಾರಿಕೆಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವುದು ಕಾಂಗ್ರೆಸ್ ಸರ್ಕಾರ: ಸಚಿವ ಸಂತೋಷ್ ಲಾಡ್
ಆರ್.ಅಶೋಕ್‌ಗೆ ಟಾಂಗ್: ರಾಜ್ಯದಲ್ಲಿ ಬರದಿಂದಾಗಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದು, ರಾಜಧಾನಿಯಲ್ಲಿ ನೀರಿನ ಸಮಸ್ಯೆಯಿಂದ ಐಟಿಬಿಟಿ ಕಂಪನಿ, ಕೈಗಾರಿಕೆಗಳಿಗೂ ಬಿಸಿ ತಟ್ಟಿದೆ. ನೀರಿನ ಸಮಸ್ಯೆಯಿಂದ ಐಟಿಬಿಟಿ ಕಂಪನಿಗಳು, ಕೈಗಾರಿಕೆಗಳು ರಾಜ್ಯಕ್ಕೆ ಬರಲು ಹಿಂಜರಿಯುತ್ತವೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೀರಿನ ಸಮಸ್ಯೆ ಎಲ್ಲೆಡೆ ಇದೆ. ಇಡೀ ವಿಶ್ವದಲ್ಲಿ ಬರಗಾಲವಿದೆ. ಬೆಂಗಳೂರು, ನಮ್ಮ ರಾಜ್ಯವಷ್ಟೆ ಅಲ್ಲ. ದೇಶದೆಲ್ಲೆಡೆ ಇದೆ. ನೀರಿನ ಸಮಸ್ಯೆಯನ್ನು ನಿಭಾಯಿಸುತ್ತೇವೆ. ಕೈಗಾರಿಕೆಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ.
ಇದಕ್ಕೆ ಪರ್ಮನೆಂಟ್ ಪ್ಲಾನ್ ಮಾಡುತ್ತೇವೆ. ಮಲಪ್ರಭಾ, ಕೃಷ್ಣ ಹಾಗೂ ಕಾವೇರಿಯಿಂದ ಪರ್ಮನೆಂಟ್ ಪ್ಲಾನ್ ಮಾಡೋ ಆರಂಭಿಕ ಚರ್ಚೆ ನಡೆದಿವೆ ಎಂದು ಹೇಳಿದರು. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆಯಾಗಿದೆ. ಕಾಂಗ್ರೆಸ್ ಮುಖಂಡ ರಾಜು ಆಲಗೂರಗೆ ಟಿಕೆಟ್ ಘೋಷಣೆಯಾಗಿದೆ. ಶಿವರಾತ್ರಿಯ ಶುಭ ದಿನದಂದು ಘೋಷಣೆಯಾಗಿದ್ದು, ರಾಜು ಆಲಗೂರಗೆ ಅಭಿನಂದನೆ ಸಲ್ಲಿಸುವೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಾವೆಲ್ಲ ಸೇರಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ.
ರಾಜ್ಯ ಸರ್ಕಾರದಿಂದ ಗಾಂಧೀಜಿ, ಅಂಬೇಡ್ಕರ್ ಆಶಯ ಸಾಕಾರ: ಬಿ.ಕೆ.ಹರಿಪ್ರಸಾದ್
ಜಿಲ್ಲೆಯ ಸಚಿವರು, ಶಾಸಕರ ಒಟ್ಟಾಭಿಪ್ರಾಯದಂತೆ ರಾಜು ಆಲಗೂರ ಅಭ್ಯರ್ಥಿಯಾಗಿದ್ದಾರೆ ಎಂದರು. ದಲಿತ ಸಮಾಜದ ಬಲಗೈ ಬಲಕ್ಕೆ ಟಿಕೆಟ್ ನೀಡಬೇಕೆಂಬುದು ಬಹಳ ದಿನಗಳ ಅಂಬೇಡ್ಕರ್ ವಾದಿಗಳ ಬೇಡಿಕೆಯಾಗಿತ್ತು. ಹಾಗಾಗಿ ಎಲ್ಲರ ಆಶಯದಂತೆ ಟಿಕೆಟ್ ನೀಡಲಾಗಿದೆ. ನಿಶ್ಚಿತವಾಗಿ ಗೆಲುವು ನಮ್ಮದೆ. ರಾಜು ಆಲಗೂರ ಸಂಸದರಾಗುವುದರಲ್ಲಿ ಸಂಶಯವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾನು ವಿಜಯಪುರ ಜಿಲ್ಲೆಯ ಸಂಸದನಾಗಿದ್ದೇ ಕೊನೆಯಾಗಿತ್ತು. ಈಗ ರಾಜು ಆಲಗೂರ ಗೆಲ್ಲುವ ಮೂಲಕ ಗೆಲುವಿನ ಅಭಿಯಾನ ಪ್ರಾರಂಭವಾಗುತ್ತದೆ ಎಂದು ಹೇಳಿದರು.