
ಸಿಂಧನೂರು (ಏ.22) : ಚುನಾವಣೆಗೆ ಮತ ಕೇಳುವುದು ಅಭ್ಯರ್ಥಿಗಳ ಕರ್ತವ್ಯವಾಗಿದೆ. ಆದರೆ, ವಿಶೇಷವಾಗಿ ಮುಸ್ಲಿಂ ಸಮಾಜದವರ ಮನೆಗಳಿಗೆ ತೆರಳಿ ಮಾತನಾಡಿಸುವ ನೆಪದಲ್ಲಿ ಅವರ ಕೊರಳಿಗೆ ಪಕ್ಷದ ಹೆಗಲು ಪಟ್ಟಿಹಾಕಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್‌ನವರು ದಿನಕ್ಕೆ ನಾಲ್ಕಾರು ಬಾರಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವುದು ಸರಿಯಲ್ಲ. ಮುಸ್ಲಿಂರಿಗೆ ಮೀಸಲಾತಿಯಲ್ಲಿ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದಾಗ ಹಂಪನಗೌಡರು ಕನಿಷ್ಠ ಸೌಜನ್ಯಕ್ಕಾದರು ಪತ್ರಿಕಾ ಹೇಳಿಕೆ ನೀಡಿ ಏಕೆ ಕಾಳಜಿ ತೋರಿಸಲಿಲ್ಲ ಎಂದು ಶಾಸಕ ವೆಂಕಟರಾವ್ ನಾಡಗೌಡ(Venkatarao nadagowda) ಖಾರವಾಗಿ ಪ್ರಶ್ನಿಸಿದರು.
ಶುಕ್ರವಾರ ಜೆಡಿಎಸ್ ಯುವ ಘಟಕದ ಕಾರ್ಯಾಲಯದಲ್ಲಿ ಜೆಡಿಎಸ್‌ನಲ್ಲಿದ್ದ ಮಾಜಿ ನಗರಸಭೆ ಸದಸ್ಯ ಹಾಜಿ ಮಸ್ತಾನ ಹಾಗೂ ಖದೀರಿಯ ಕಾಲೋನಿಯ ಅಬ್ದುಲ್ ಹಲಿಂ ಅವರನ್ನು ಕಾಂಗ್ರೆಸ್‌ನವರು ಒತ್ತಾಯದಿಂದ ಬೆಳಗ್ಗೆ ಕಾಂಗ್ರೆಸ್ ಹೆಗಲು ಪಟ್ಟಿಹಾಕಿ ಸೇರ್ಪಡೆ ಮಾಡಿಕೊಂಡಿದ್ದನ್ನು ಖಂಡಿಸಿ ಮಾತನಾಡಿದ ಅವರು, ಇಬ್ಬರು ಮುಖಂಡರು ಪ್ರಸ್ತುತ ನನ್ನ ಅಕ್ಕ-ಪಕ್ಕದಲ್ಲಿಯೇ ಕುಳಿತುಕೊಂಡಿದ್ದಾರೆ. ಅವರನ್ನು ಹಂಪನಗೌಡರು ಬೆಳಗ್ಗೆ ಅವರ ಮನೆಗೆ ತೆರಳಿ ಉಭಯ ಕುಶಲೋಪರಿ ಕೇಳುತ್ತಿದ್ದಾಗ ಹಿಂಬಾಲಕರು ಅವರ ಕೊರಳಿಗೆ ಪಕ್ಷದ ಹೆಗಲು ಪಟ್ಟಿಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಸರಿಯೇ? ಈ ರೀತಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮನೆ-ಮನೆಗೆ ತೆರಳಿ ಒತ್ತಾಯ ಪೂರ್ವಕವಾಗಿ ಪಕ್ಷ ಸೇರ್ಪಡೆ ಮಾಡಿಸಿಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿದರೆ ಅವರಿಗೆ ಸೋಲಿನ ಭಯ ಈಗಲೇ ಕಾಡುತ್ತಿದೆ. ಅವರು ಮೂರನೇ ಸ್ಥಾನಕ್ಕೆ ಹೋಗುತ್ತಾರೆಂಬ ಭಯದಲ್ಲಿ ಈ ರೀತಿಯಾಗಿ ಒತ್ತಾಯ ಪೂರ್ವವಾಗಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮಾಡುತ್ತಿರುವುದು ಬಾದರ್ಲಿಯಂತಹ ಹಿರಿಯ ರಾಜಕಾರಣಿಗೆ ಶೋಭೆಯಲ್ಲ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ 50-60 ಸ್ಥಾನ ಗೆಲ್ಲುವುದೆ ಕಷ್ಟ: ಸಿದ್ದರಾಮಯ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.