ವರದಿ: ರವಿ ಶಿವರಾಮ್ ಪೊಲಿಟಿಕಲ್ ಬ್ಯೂರೊ, ಏಷ್ಯಾ ನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮೇ.23): ವಿಧಾನಸಭೆ ಇಂದ ಮೇಲ್ಮನೆಗೆ ಆಯ್ಕೆಯಾಗುವ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ (BJP) ಕೊನೆಗಳಿಗೆಯ ತನಕ ಗೌಪ್ಯತೆ ಕಾಪಾಡಿಕೊಂಡು ಬಿಡುಗಡೆ ಮಾಡಿದೆ. ಒಟ್ಟು ಏಳು ಸ್ಥಾನಗಳ ಪೈಕಿ ನಾಲ್ಕು ಬಿಜೆಪಿಗೆ ಲಭಿಸಿದ್ದು ಆ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಅಳೆದು ತೂಗಿ ಆಯ್ಕೆ ಮಾಡಿದೆ. ಆದ್ರೆ ವಿಜಯೇಂದ್ರಗೆ (BY Vijayendra ) ಟಿಕೆಟ್ ಮಿಸ್ ಆಗಿದೆ..
ಲಿಂಗಾಯತ ಕೋಟಾದಿಂದ ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ (Laxman Savadi) ಮತ್ತು ಹುಬ್ಬಳ್ಳಿ ಮೂಲದ ಲಿಂಗರಾಜ್ ಪಾಟೀಲ್ ನಡುವೆ ತುರುಸಿನ ಪೈಪೋಟಿ ಏರ್ಪಟಿತ್ತು. ಒಂದು ಹಂತದಲ್ಲಿ ಲಿಂಗರಾಜ್ ಪಾಟೀಲ್ ಗೆ ಟಿಕೆಟ್ ಫೈನಲ್ ಆಗಿ ಕಚೇರಿಯಿಂದ ಕರೆ ಕೂಡ ಹೋಗಿತ್ತು. ಲಿಂಗರಾಜ್ ಪಾಟೀಲ್ ಹುಬ್ಬಳ್ಳಿಯಿಂದ ಬೆಳಗಿನ ಜಾವ ಮೂರು ಗಂಟೆಗೆ ಹುಬ್ಬಳ್ಳಿ ಇಂದ ಹೊರಟು ಬೆಳಗ್ಗೆ8-30 ಕ್ಕೆ ನೇರವಾಗಿ ಬೆಂಗಳೂರು ಪಾರ್ಟಿ ಕಚೇರಿಗೆ ನಗು ಮೊಗದಲ್ಲೇ ಬಂದಿದ್ರು. ಆದರೆ ಲಕ್ಷ್ಮಣ ಸವದಿ ಮೇಲ್ಮನೆಗೆ ಮರು ಆಯ್ಕೆ ಬಯಸಿದ್ದರ ಹಿನ್ನಲೆಯಲ್ಲಿ ಲಕ್ಷ್ಮಣ ಸವದಿಗೆ ಅವಕಾಶ ನೀಡಲಾಗಿದೆ. ಕೊನೆ ಹಂತದ ತನಕ ಚರ್ಚೆ ನಡೆದು ಲಕ್ಷ್ಮಣ ಸವದಿಗೆ ಲಕ್ ಕುಲಾಯಿಸಿತು. ಟಿಕೆಟ್ ವಂಚಿತ ಲಿಂಗರಾಜ್ ಪಾಟೀಲ್ ತಮಗೆ ಬೇಸರವಾದ್ರೂ ಅದನ್ನು ತೋರಿಸಿಕೊಳ್ಳದೆ, ಮುಂದೆ ಅವಕಾಶ ಸಿಗಬಹುದು ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ..
ಲಕ್ಷ್ಮಣ ಸವದಿಗೆ 2023ರ ವಿಧಾನಸಭೆ ಟಿಕೆಟ್ ಇಲ್ಲ?
ಅಥಣಿ ವಿಧಾನಸಭೆ ಕ್ಷೇತ್ರದಿಂದ 2018 ರಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಪರಿಷತ್ ಗೆ ಮರು ಆಯ್ಕೆ ಆಗಿದ್ದಾರೆ. ಆ ಮೂಲಕ ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರಿರುವ ಮಹೇಶ್ ಕುಮಟಳ್ಳಿಗೆ ಮುಂದಿನ ಬಾರಿಯೂ ಟಿಕೆಟ್ ನೀಡಲು ಇದ್ದ ಅಡೆ ತಡೆ ನಿವಾರಣೆ ಆದಂತೆ ಆಗಿದೆ. ಕುಮಟಳ್ಳಿ ರಮೇಶ್ ಜಾರಕಿಹೊಳಿಯ ಬಲಗೈ ಬಂಟ. ರಮೇಶ್ ಮಾತಿಗೆ ಬಿಜೆಪಿ ಸೇರಿದ್ದ ಕುಮಟಳ್ಳಿಗೆ ಸಚಿವ ಸ್ಥಾನ ಕೂಡ ಪಕ್ಷ ನೀಡಿರಲಿಲ್ಲ. ಈಗ ಅಂತಿಮವಾಗಿ ಲಕ್ಷ್ಮಣ ಸವದಿಗೆ ಮೇಲ್ಮನೆ ಟಿಕೆಟ್ ನೀಡುವ ಮೂಲಕ ಅಥಣಿ ಕ್ಷೇತ್ರದ ಟಿಕೆಟ್ ಗೊಂದಲ ಬಗೆಹರಿದಂತಾಗಿದೆ.
5 ವರ್ಷದ ಬಳಿಕ ಕೊಲೆಗಾರನನ್ನು ಹುಡುಕಿಕೊಟ್ಟ Facebook!
ಬಿಜೆಪಿ ಅಲಿಖಿತ ನಿಯಮ ವಿಜಯೇಂದ್ರಗೆ ಅಡ್ಡಿ
ಮೇ 14 ರಂದು ನಡೆದಿದ್ದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ವಿಜಯೇಂದ್ರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಆದ್ರೆ ಹೈಕಮಾಂಡ್ ವಿಜಯೇಂದ್ರಗೆ ಟಿಕೆಟ್ ನೀಡಲ್ಲ ಎನ್ನುವ ಬಲವಾದ ಮಾಹಿತಿ ಕೂಡ ಸಿಕ್ಕಿತ್ತು.ಆದ್ರೂ ಬಿಎಸ್ ಯಡಿಯೂರಪ್ಪನವರ () ಒತ್ತಡದ ಕಾರಣಕ್ಕೆ ಕೋರ್ ಕಮಿಟಿ ಸಭೆಯಲ್ಲಿ ಆರ್ ಅಶೋಕ್ ವಿಜಯೇಂದ್ರ ಹೆಸರನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿದ್ರು. ಹೀಗಾಗಿ ಅಂದಿನ ಕೋರ್ ಕಮಿಟಿ ಸಭೆಯಲ್ಲಿ ಒಂದೇ ಒಂದು ಲೈನ್ ಚರ್ಚೆ ಮಾಡದೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಜಯೇಂದ್ರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿತ್ತು.
ಆದ್ರೆ ಹೈಕಮಾಂಡ್ ಕುಟುಂಬ ರಾಜಕೀಯದ ಕಾರಣ ಮುಂದಿಟ್ಟು, ಒಂದೇ ಕುಟುಂಬದ ಮೂವರಿಗೆ ಅವಕಾಶ ನೀಡಿದ್ರೆ ನೈತಿಕವಾಗಿ ಕಾರ್ಯಕರ್ತರಿಗೆ ಉತ್ತರ ನೀಡೊದು ಕಷ್ಟ ಮತ್ತು ರಾಜಕೀಯವಾಗಿ ಪ್ರತಿಪಕ್ಷಗಳನ್ನು ಕುಟುಂಬ ರಾಜಕೀಯದ ಹೆಸರಲ್ಲಿ ವಾಗ್ದಾಳಿ ಮಾಡುವ ಅಸ್ತ್ರ ಕಳೆದುಕೊಳ್ಳುತ್ತೇವೆ ಎನ್ನುವ ಕಾರಣಕ್ಕೆ ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿಜಯೇಂದ್ರಗೆ ಪಾರ್ಟಿಯಲ್ಲಿ ಬೇರೆ ಬೇರೆ ಜವಬ್ದಾರಿ ಇದೆ ಎನ್ನೋದನ್ನ ರಾಜ್ಯಾಧ್ಯಕ್ಷ ಕಟೀಲ್ ಸೂಚ್ಯವಾಗಿ ಹೇಳಿದ್ದಾರೆ.
ಉದಯಪುರ ಮಾದರಿಯಲ್ಲೇ ಕರ್ನಾಟಕದಲ್ಲೂ CONGRESS ಚಿಂತನ ಮಂಥನ ಸಭೆ
ಹೇಮಲತಾ ನಾಯಕ್ ಮೇಲ್ಮನೆಗೆ
ಇನ್ನು ಮಹಿಳಾ ಕೋಟಾದಲ್ಲಿ ಯಾರಿಗೆ ಅವಕಾಶ ನೀಡಬೇಕು ಎನ್ನುವ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಒಂದು ಹಂತದಲ್ಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ, ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ಹೆಸರು ಚರ್ಚೆಯಲ್ಲಿ ಇತ್ತು. ಆದರೆ ಅಂತಿಮವಾಗಿ ಕೊಪ್ಪಳ ಮೂಲಕ ಎಸ್ ಟಿ ಸಮುದಾಯಕ್ಕೆ ಸೇರಿದ ಹೇಮಲತಾ ನಾಯಕ್ ಗೆ (Hemalatha Nayak) ಅವಕಾಶ ನೀಡಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಂಕುಮ ಬಳೆ ಕಳುಹಿಸಿದ್ದ ಹೇಮಲತಾ
ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯನವರು ಒಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ರು. ನಾಮ ಇಟ್ಟವರ ಕಂಡ್ರೆ ಭಯ ಆಗುತ್ತೆ ಎಂದು ಸುದ್ದಿ ಆಗಿದ್ರು , ಆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ರಾಜ್ಯ ಬಿಜೆಪಿ ಕಾರ್ಯದರ್ಶಿ ಹೇಮಲತಾ ಸಿದ್ದರಾಮಯ್ಯರಿಗೆ ಬಳೆ ಕುಂಕುಮ ಕಳುಹಿಸಿ ವಿರೋಧ ವ್ಯಕ್ತಪಡಿಸಿದ್ದರು.