2023 ರ ರಾಜ್ಯ ವಿಧಾನ ಸಭೆ ಚುನಾವಣಾ ತಯಾರಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲು ರಾಜ್ಯದಲ್ಲಿ ಉಸ್ತುವಾರಿ ರಣದೀಪ್ ಸುರ್ಜೇವಾಲಾ ನೇತೃತ್ವದಲ್ಲಿ ಜೂನ್ 2 ರಿಂದ ಎರಡು ದಿನಗಳ ಕೈ ನಾಯಕರ ಚಿಂತನ ಮಂಥನ ಸಭೆ ನಡೆಯಲಿದೆ.
ಬೆಂಗಳೂರು (ಮೇ.25): ರಾಜಸ್ಥಾನದ ಉದಯ್ ಪುರದಲ್ಲಿ ನಡೆಸಿದ ರೀತಿಯಲ್ಲಿಯೇ ರಾಜ್ಯದಲ್ಲೂ ಕಾಂಗ್ರೆಸ್ (Congress) ಚಿಂತನ ಮಂಥನ ಸಭೆ ನಡೆಸಲು ತಯಾರಿ ನಡೆಸಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ (randeep surjewala) ನೇತೃತ್ವದಲ್ಲಿ ಜೂನ್ 2 ರಿಂದ ಎರಡು ದಿನಗಳ ಕೈ ನಾಯಕರ ಚಿಂತನ ಮಂಥನ ಸಭೆ ನಡೆಯಲಿದ್ದು, ಬಣ ರಾಜಕಾರಣ ಪರಿಹರಿಸಿಕೊಳ್ತಾರಾ ಎಂದು ಕಾದು ನೋಡಬೇಕಿದೆ.
ಮುಖ್ಯವಾಗಿ ಈ ಚಿಂತನ ಮಂಥನ ಸಭೆಯಲ್ಲಿ 2023 ರ ರಾಜ್ಯ ವಿಧಾನ ಸಭೆ ಚುನಾವಣಾ ತಯಾರಿ ಕುರಿತು ಚರ್ಚೆ ನಡೆಯಲಿದೆ. ಮುಂಬರುವ ಸಾರ್ವತ್ರಿಕ ಚುನಾವಣೆ ಹಾಗೂ, ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ನೀತಿ ನಿಲುವುಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗಬೇಕಾ. ಬೇಡವಾ? ಚುನಾವಣೆ ಪೂರ್ವದಲ್ಲೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಹೆಚ್ಚು ಲಾಭ ಕೊಡಲಿದೆಯಾ ಇಲ್ವಾ? ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದೇ ಸೂಕ್ತನಾ.? ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ (dk shivakumar) ನಡುವಿನ ಬಣ ರಾಜಕೀಯ ವಿಚಾರ, ಜೊತೆಗೆ ಬಣ ರಾಜಕೀಯ ಸರಿದೂಗಿಸಿ, ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕಾರ್ಯಕ್ರಮಗಳ ಕುರಿತು ಮಾತ್ರವಲ್ಲ ಡಿಕೆಶಿ - ಸಿದ್ದರಾಮಯ್ಯ (siddaramaiah) ಒಗ್ಗಟ್ಟು ಪ್ರದರ್ಶಿಸುವಂತೆ ರಾಜ್ಯ ಪ್ರವಾಸಗಳ ಕಾರ್ಯಕ್ರಮ ರೂಪಿಸುವ ಬಗ್ಗೆ ಹಿರಿಯ ನಾಯಕರ ಜೊತೆ ಸುರ್ಜೇವಾಲಾ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
Mangaluru ಮಸೀದಿಯಲ್ಲಿ ದೈವೀ ಶಕ್ತಿ ಇತ್ತೆಂದ ತಾಂಬೂಲ ಪ್ರಶ್ನೆ
ಇದರ ಜೊತೆಗೆ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡ ರೂಪಿಸುವ ವಿಚಾವಾಗಿ ಕೂಡ ಚರ್ಚೆ ನಡೆಯಲಿದೆ. ಚುನಾವಣೆ 6 ತಿಂಗಳ ಮೊದಲೇ 150 ಅಭ್ಯರ್ಥಿಗಳ ಅಂತಿಮಗೊಳಿಸುವ ನಿಟ್ಟಿನಲ್ಲಿ ಹೈಕಮಾಂಡ್ ಸೂಕ್ತ ಅಭ್ಯರ್ಥಿಗಳ ಲಿಸ್ಟ್ ಕಳಿಸುವ ಜವಾಬ್ದಾರಿ ಚುನಾವಣಾ ಸಮಿತಿಗೆ ವಹಿಸುವ ಬಗ್ಗೆ ಮತ್ತು ಕಳೆದ ಚುನಾವಣೆಯಲ್ಲಿ 5 ಸಾವಿರ ಮತಗಳಿಗಿಂತ ಕಡಿಮೆ ಅಂತರದಲ್ಲಿ ಸೋತವರನ್ನ ಪರಿಗಣಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಹಾಲಿ ಶಾಸಕರಿಗೆಲ್ಲರಿಗೂ ಟಿಕೆಟ್ ನೀಡುವ ವಿಚಾರದಲ್ಲಿ ಕೆಪಿಸಿಸಿ ಹಾಗು ಎಐಸಿಸಿ ಸಮೀಕ್ಷೆ ಆಧರಿಸಿ ಟಿಕೆಟ್ ನೀಡುವ ಬಗ್ಗೆ , ಅಭ್ಯರ್ಥಿಗಳ ಕುರಿತು ತಳಮಟ್ಟದ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಧ್ಯಕ್ಷರು, ಕ್ಷೇತ್ರ ಉಸ್ತುವಾರಿ ಪದಾಧಿಕಾರಿಗಳಿಂದ ಐದು ಹಂತದಲ್ಲಿ ವರದಿ ಪಡೆಯಲು ಜೊತೆಗೆ ಎಐಸಿಸಿ ವೀಕ್ಷಕರು, ಕಾರ್ಯಾಧ್ಯಕ್ಷರುಗಳಿಂದ ವರದಿ ಪಡೆಯಲು ಯೋಜನೆ ರೂಪಿಸುವ ಬಗ್ಗೆ, ಉದಯಪುರ ಸಭೆ ನಿರ್ಧಾರದಂತೆ ಶೇ 50 ರಷ್ಟು ಅಭ್ಯರ್ಥಿಗಳು 50 ವಯಸ್ಸಿನೊಳಗಿನವರನ್ನ ಆಯ್ಕೆ ಮಾಡುವ ಕುರಿತು ಈ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಚರ್ಚೆ ನಡೆಯಲಿದೆ.
ನೆಚ್ಚಿನ ಕಾರಿನಲ್ಲಿ ಬಂದು ಪತ್ನಿ ಸಮೇತ ನಾಮಪತ್ರ ಸಲ್ಲಿಸಿದ Basavaraj Horatti
ಸಮುದಾಯಗಳ ಸಮಾವೇಶ:
ಸಭೆಯಲ್ಲಿ ನಡೆಯಲಿರುವ ಚರ್ಚೆಗಳು:
ಚುನಾವಣಾ ಪ್ರಣಾಳಿಕೆ ರಚನೆಗೆ ಪ್ರತ್ಯೇಕ ಸಮಿತಿ ರಚನೆ
ಮನೆ ಮನೆಗೆ ಕಾಂಗ್ರೆಸ್ ಕಾರ್ಯಕರ್ತರ ಭೇಟಿ