
ರಾಮಕೃಷ್ಣ ದಾಸರಿ
ರಾಯಚೂರು (ಫೆ.13) : ಸಾಮಾನ್ಯ ವರ್ಗಕ್ಕೆ ಮೀಸಲಿರುವ ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಮೂರು ಪಕ್ಷಗಳಿಂದ ಅರ್ಹ ಅಭ್ಯರ್ಥಿಗಳು ಯಾರು? ಎನ್ನುವ ಸಮಾಲೋಚನೆಗಳು ಸಾಮಾನ್ಯ ವಲಯದಲ್ಲಿ ಸಾಮಾನ್ಯವಾಗಿವೆ.
ಕ್ಷೇತ್ರ ಪ್ರತಿನಿಧಿಸುತ್ತಿರುವ ಬಿಜೆಪಿ ಹಾಲಿ ಶಾಸಕ ಡಾ.ಶಿವರಾಜ ಪಾಟೀಲ್(Dr shivaraj patil former MLA) ಅವರಿಂದ ಹಿಡಿದು ಕಾಂಗ್ರೆಸ್, ಜೆಡಿಎಸ್ ಸೇರಿ ಇತರೆ ಪಕ್ಷಗಳು ಸಮರ್ಥ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅತ್ಯಂತ ಜಾಗೃತಿ ಹೆಜ್ಜೆಯನ್ನಿಡುತ್ತಿವೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವ ಪಕ್ಷದವರೂ ಸ್ಪಷ್ಟವಾದ ನಿರ್ಧಾರ ಹೊರಹಾಕದೇ ಇರುವುದು ಕ್ಷೇತ್ರದಲ್ಲಿ ಭರ್ಜರಿ ಚರ್ಚಾ ವಿಷಯವಾಗಿದೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ 50-60 ಸ್ಥಾನ ಗೆಲ್ಲುವುದೆ ಕಷ್ಟ: ಸಿದ್ದರಾಮಯ್ಯ
ಕಾಂಗ್ರೆಸ್ ಟಿಕೆಟ್‌ಗೆ 17 ಜನರು ಅರ್ಜಿ ಸಲ್ಲಿಸಿದ್ದು(Siddaramaiah), ಪಕ್ಷದ ನಾಯಕರು ಮಾಜಿ ಶಾಸಕ ಸೈಯದ್ ಯಾಸೀನ್(Former MLA Syed Yasin), ಮಾಜಿ ಎಂಎಲ್ಸಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಬೋಸರಾಜು(NS Bosaraju), ಬಸವರಾಜ ಪಾಟೀಲ್ ಇಟಗಿ ಅವರ ಹೆಸರು ಅಂತಿಮಗೊಳಿಸಿ ಹೈಕಮಾಂಡ್ಗೆ ಶಿಫಾರಸ್ಸು ಮಾಡಿದ್ದಾರೆನ್ನಲಾಗಿದೆ. ಅದೇ ರೀತಿ ಜೆಡಿಎಸ್ನಿಂದ ಈ. ವಿನಯ ಕುಮಾರ, ರಾಮನಗೌಡ ಏಗನೂರು ಹೆಸರು ಕೇಳಿಬರುತ್ತಿದ್ದು, ಯಾರಿಗೆ ಟಿಕೆಟ್ ಎನ್ನುವ ಕುತೂಲಹವು ಮುಂದುವರಿದಿದೆ.
ಮುಸ್ಲಿಮರೆ ಹೆಚ್ಚಿರುವ ಕ್ಷೇತ್ರದಲ್ಲಿ ಆ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎನ್ನುವ ಕೂಗು ಬಲವಾಗಿ ಕೇಳಿಬರುತ್ತಿದೆ. ಅದರಲ್ಲಿಯೂ ಕಾಂಗ್ರೆಸ್ ಪಕ್ಷದಲ್ಲಿ ಈ ಬೇಡಿಕೆ ತುಸು ಹೆಚ್ಚಾಗಿಯೇ ಇದೆ. ಜೊತೆಗೆ ಜೆಡಿಎಸ್ನಲ್ಲಿ ಸಹ ಮುಸ್ಲಿಂ ಮುಖಂಡರಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಸೆ ಇದೆ. ಅದಕ್ಕಾಗಿಯೇ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿರುವ ಜೆಡಿಎಸ್ ರಾಯಚೂರು ನಗರ ಕ್ಷೇತ್ರದಲ್ಲಿ ಕಾದುನೋಡುವ ತಂತ್ರ ಅನುಸರಿಸುತ್ತಿದೆ.
ಇನ್ನು ಬಿಜೆಪಿ ಹಾಲಿ ಶಾಸಕ ಡಾ.ಶಿವರಾಜ ಪಾಟೀಲ್ ಅವರಿಗೆ ಟಿಕೆಟ್ ಖಚಿತ ಎನ್ನಲಾಗಿದ್ದರೂ ಸಹ ಪಕ್ಷದ ಹೈಕಮಾಂಡ್ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವ ಸಂಗತಿ ಮಾತ್ರ ನಿಗೂಢ. ಡಾ.ಶಿವರಾಜ ಪಾಟೀಲ್ ಅತೀವ ವಿಶ್ವಾಸದಲ್ಲಿಯೇ ಇದ್ದಾರೆ. ಮೂರು ಪ್ರಮುಖ ಪಕ್ಷಗಳ ಜೊತೆಗೆ ಆಪ್, ಗಾಲಿ ಜನಾರ್ದನರೆಡ್ಡಿ ಕೆಆರ್ಪಿಪಿ ಪಕ್ಷದಿಂದಲೂ ಹೆಚ್ಚಿನ ಪ್ರಭಾವ ಹೊಂದಿರುವ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಶಿವಲಿಂಗೇಗೌಡರ ಕಾಂಗ್ರೆಸ್ ಸೇರ್ಪಡೆ ಪಕ್ಕಾ: ಸಿದ್ದರಾಮಯ್ಯ
ನಮ್ಮ ಕೆಲಸವನ್ನು ನಾವು ಪ್ರಮಾಣಿಕವಾಗಿ ಮಾಡಿಕೊಂಡು ಹೋಗುತ್ತಿದ್ದೇವೆ. ಪಕ್ಷದ ಟಿಕೆಟ್ ಕೇಳಲು ಬರಬೇಕು ಎಂದು ಹೈಕಮಾಂಡ್ ಸೂಚಿಸಿದೆ. ಅರ್ಹರಿಗೆ, ಸಮರ್ಥರಿಗೆ ಟಿಕೆಟ್ ನೀಡಲು ಪಕ್ಷ ವ್ಯವಸ್ಥೆಯನ್ನು ರೂಪಿಸಿದ್ದು, ಅರ್ಹತೆಯನ್ನಾಧರಿಸಿ ಟಿಕೆಟ್ ದೊರೆಯಲಿದೆ. ಆರ್ಎಸ್ಎಸ್, ಡಿಎಸ್ಎಸ್, ಜನಸಾಮಾನ್ಯರು, ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಸೂಕ್ತ ಅಭ್ಯರ್ಥಿಯನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ.
- ಡಾ.ಶಿವರಾಜ ಪಾಟೀಲ್, ಶಾಸಕ, ರಾಯಚೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.