ದಾಖಲೆ ಬಿಡುಗಡೆ ಮಾಡದಂತೆ ಕುಮಾರಸ್ವಾಮಿ ತಡೆದವರು ಯಾರು?: ಡಿ.ಕೆ.ಶಿವಕುಮಾರ್‌

By Kannadaprabha NewsFirst Published Sep 29, 2024, 6:14 AM IST
Highlights

ಡಿಕೆ ದಾಖಲೆಗಳನ್ನು ಈ ಕೂಡಲೇ ಬಿಡುಗಡೆ ಮಾಡಲಿ, ಬೇಡ ಎಂದವರು ಯಾರು ಎಂದು ವ್ಯಂಗ್ಯವಾಡಿದರು. ಬಿಜೆಪಿ-ಜನತಾದಳ ಎರಡೂ ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಸಿಎಂ ರಾಜೀನಾಮೆಗೆ ಬಿಜೆಪಿ ಒತ್ತಾಯ ಮಾಡುತ್ತಿದೆ. ಅವರು ಏನಾದರೂ ಮಾಡಿ ಕೊಳ್ಳಲಿ, ಪಕ್ಷ ಸಿಎಂ ಬೆಂಬಲಕ್ಕಿದೆ. ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ ಎಂದ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ 
 

ಕನಕಪುರ/ಬೆಂಗಳೂರು(ಸೆ.29): ತಮ್ಮ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ಸರ್ಕಾರದ ಏಳು ಮಂತ್ರಿಗಳು ರಾಜೀನಾಮೆ ನೀಡಬೇಕಾಗುತ್ತದೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ದಾಖಲೆ ಬಿಡುಗಡೆ ಮಾಡಬೇಡಿ ಎಂದು ಅವರನ್ನು ಹಿಡಿದುಕೊಂಡವರು ಯಾರು ಎಂದು ಪ್ರಶ್ನಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆ ದಾಖಲೆಗಳನ್ನು ಈ ಕೂಡಲೇ ಬಿಡುಗಡೆ ಮಾಡಲಿ, ಬೇಡ ಎಂದವರು ಯಾರು ಎಂದು ವ್ಯಂಗ್ಯವಾಡಿದರು. ಬಿಜೆಪಿ-ಜನತಾದಳ ಎರಡೂ ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಸಿಎಂ ರಾಜೀನಾಮೆಗೆ ಬಿಜೆಪಿ ಒತ್ತಾಯ ಮಾಡುತ್ತಿದೆ. ಅವರು ಏನಾದರೂ ಮಾಡಿ ಕೊಳ್ಳಲಿ, ಪಕ್ಷ ಸಿಎಂ ಬೆಂಬಲಕ್ಕಿದೆ. ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ ಎಂದರು. 

Latest Videos

ಡಿನೋಟಿಫೈ ಕೇಸ್: ಕುಮಾರಸ್ವಾಮಿಗೆ ಲೋಕಾ 1 ತಾಸು ವಿಚಾರಣೆ

ಸಿದ್ದು ಎಫ್‌ಐಆರ್ ಬಗ್ಗೆ ಪದೇ ಪದೇ ಚರ್ಚೆ ಬೇಕಿಲ್ಲ: 

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾ ಯುಕ್ತದಲ್ಲಿ ದಾಖಲಾಗಿರುವ ಎಫ್‌ಐಆರ್ ಕುರಿತಂತೆ ಈಗಾಗಲೇ ಎಐಸಿಸಿ ಅಧ್ಯಕ್ಷರು ಮಾತನಾಡಿದ್ದು, ಅದರ ಬಗ್ಗೆ ಪದೇಪದೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು. ನಿರ್ಮಲಾ ಸೀತಾರಾಮನ್ ವಿರುದ್ದ ಎಫ್‌ಐಆ‌ರ್ ದಾಖಲಾಗಿರುವ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರ ವಿರುದ್ಧ ಯಾರು ನೀಡಿದ್ದರು, ಯಾಕೆ ನೀಡಿದ್ದರು ಎಂಬ ಮಾಹಿತಿ ನನಗಿಲ್ಲ. ಮಾಹಿತಿ ಪಡೆದು ನಂತರ ಪ್ರತಿಕ್ರಿಯಿಸುತ್ತೇನೆ ಎಂದರು.

ಸಿಎಂ ಆಗುವ ಅರ್ಥದಲ್ಲಿ ಹೇಳಿಲ್ಲ: 

ರಾಜ್ಯದ ಸೇವೆ ಮಾಡಲು ಪ್ರಯತ್ನ ಮತ್ತು ಹೋರಾಟ ನಡೆಯುತ್ತಿದೆ ಎಂಬ ತಮ್ಮ ಹೇಳಿಕೆ ಚರ್ಚೆಗೆ ಕಾರಣವಾಗಿರುವ ಕುರಿತು ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನಾನು ಮುಖ್ಯಮಂತ್ರಿ ಹುದ್ದೆಯ ಅರ್ಥದಲ್ಲಿ ಮಾತನಾಡಲಿಲ್ಲ, ಜನರು ಸೇವೆ ಮಾಡಲು ಶಕ್ತಿ ಕೊಟ್ಟಿದ್ದಾರೆ ಎಂದು ಹೇಳಿದ್ದೇನೆ. ನೀವು (ಮಾಧ್ಯಮದವರು) ಹೊಸ ಅರ್ಥ ಸೃಷ್ಟಿಮಾಡಿದ್ದೀರಿ. ಈ ರೀತಿ ಹೇಳಿಕೆ ನೀಡಿದ್ದರೆ ದಾಖಲೆ ಕೊಡಿ ಎಂದು ಸುದ್ದಿಗಾರರನ್ನೇ ಕೇಳಿದರು.

click me!