
ಬೆಂಗಳೂರು: ಸ್ಟಿಂಗ್ ಆಪರೇಷನ್ ತಿರುಗುಬಾಣ ಯಾರಿಗೆ ಎಂದು ಹೇಳ್ತೀನಿ. ಯಾರೂ ಗಾಬರಿ ಆಗಬೇಕಿಲ್ಲ. ಯಾರೀ ಅದು ಕಮಿಷನರ್? ಅವರು ಪೊಲೀಸ್ ಕಮಿಷನರಾ? ಹೆಡ್ ಕ್ಲರ್ಕ್ ಗಿಂತ ಕಡೆಯಾಗಿ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆಸಲಾಗಿದೆ ಎನ್ನಲಾದ ಚರ್ಚಾಸ್ಪದ 'ಸ್ಟಿಂಗ್ ಆಪರೇಷನ್' ಪ್ರಕರಣಕ್ಕೆ ಸಂಬಂಧಿಸಿದ ಮೊಬೈಲ್ ಫೋನ್ ಎಕ್ಸ್‌ಚೇಂಜ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲೇ ನಡೆದಿದೆ ಎಂಬ ಸತ್ಯಾಂಶ ತಿಳಿದುಬಂದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಇವತ್ತು ಹೇಳಿದ್ದಾರೆ. ಇದಕ್ಕೆ ಕುಮಾರಸ್ವಾಮಿ ತೀವ್ರ ಅಸಮಾಧಾನಗೊಂಡಿದ್ದಾರೆ.
ಅವರು ಯಾರ ಹಂಗಿನಲ್ಲಿ ಕೆಲಸ ಮಾಡ್ತಿದ್ದಾರೆ. ಜಾಗ ಉಳಿಸಿಕೊಳ್ಳೋಕೆ ಏನೆಲ್ಲಾ ಮಾಡ್ತಿದ್ದಾರೆ ಎಂದು ಗೊತ್ತಿದೆ. ತಿರುಗುಬಾಣ ಯಾರಿಗೆ ಎಂದು ನಾಳೆ ಸುದ್ದಿಗೋಷ್ಟಿಯಲ್ಲಿ ಹೇಳ್ತೀನಿ. ತನಿಖೆ ಯಾವ ಮಟ್ಟಕ್ಕೆ ಹೋಗ್ತಾ ಇದೆ. ಈ ಸರ್ಕಾರದ ಆಡಳಿತ ಯಾವ ರೀತಿ ಇದೆ ಹೇಳ್ತೀನಿ. ಈ ಕುಮಾರಸ್ವಾಮಿಯನ್ನ ಈ ಸರ್ಕಾರ, ಈ ಅಧಿಕಾರಿಗಳು ಟಚ್ ಮಾಡೋಕೆ ಆಗಲ್ಲ. ಕುಮಾರಸ್ವಾಮಿಯನ್ನ ಅಷ್ಟು ಸುಲಭವಾಗಿ ಇವರು ಎದುರಿಸಲು ಆಗಲ್ಲ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಯಾರನ್ನೆಲ್ಲಾ ರಕ್ಷಣೆ ಮಾಡ್ತಿದೆ? ಸಿದ್ದರಾಮಯ್ಯ ಸ್ಟೇ ತಗೊಂಡಿದ್ದಾರೆ. ಡಾ.ಯತೀಂದ್ರ ಸಿದ್ದರಾಮಯ್ಯ ನಮ್ಮ ಪಕ್ಷದವರೇ ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ ಟ್ರೈಲರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ.. ಇದೆಲ್ಲಾ ಯಾವ ಟ್ರೈಲರ್? ನಾನು ಸಿನಿಮಾ ಮಾಡಿರೋನು. ಇವರು ಈಗ ಸಿನಿಮಾ ಮಾಡೋಕೆ ಶುರು ಮಾಡಿದ್ದಾರೆ. ಇವರ ಸಿನಿಮಾ ಬಗ್ಗೆ ನಾಳೆ ನಾನು ಸಂಪೂರ್ಣವಾಗಿ ಹೇಳ್ತೀನಿ ಎಂದಿದ್ದಾರೆ.
‘ಪ್ರಜ್ವಲ್ ಪ್ರಸಾದ್ ಖರೀದಿ ಮಾಡಿದ್ದ ಮೊಬೈಲ್ ಮೂಲಕವೇ ಈ ಸ್ಟಿಂಗ್ ವೀಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಇದನ್ನು ರಿತೇಶ್ ಪಾಂಡೆ ಮುಖಾಂತರ ಅಪ್‌ಲೋಡ್ ಮಾಡಿಸಲಾಗಿದೆ. ಆದರೆ ಅಪ್‌ಲೋಡ್ ಮಾಡಲು ಸೂಚನೆ ನೀಡಿದ್ದ ಸೂತ್ರಧಾರ ಯಾರು ಎಂಬುದರ ಕುರಿತು ವಿಸ್ತೃತ ತನಿಖೆ ನಡೆಸಲಾಗುತ್ತಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಮೊಬೈಲ್ ಎಕ್ಸ್‌ಚೇಂಜ್ ಆಗಿರುವುದಕ್ಕೆ ಪೂರಕವಾದ ಮಹತ್ವದ ದಾಖಲೆಗಳು ಈಗಾಗಲೇ ಪತ್ತೆಯಾಗಿವೆ. ಅಲ್ಲದೆ, ಮೊಬೈಲ್ ಖರೀದಿ ಮಾಡಿದ ಅಂಗಡಿಯ ಸಿಸಿಟಿವಿ (CCTV) ದೃಶ್ಯಾವಳಿಗಳೂ ಸಹ ಪೊಲೀಸರಿಗೆ ಸಿಕ್ಕಿವೆ. ಮುಂದಿನ ದಿನಗಳಲ್ಲಿ ಸ್ಥಳ ಮಹಜರು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.