ಕರ್ನಾಟಕ ವಿಧಾನಸಭೆ 2018ರ ಚುನಾವಣೆ ಪಕ್ಷಗಳ ಬಲಾಬಲ ಎಷ್ಟಿದೆ?: 2023ಕ್ಕೆ ಏನಾಗಲಿದೆ.!

By Sathish Kumar KH  |  First Published Mar 29, 2023, 5:39 PM IST

ಕರ್ನಾಟಕ ವಿಧಾನಸಭೆಯ 222 ಕ್ಷೇತ್ರಗಳಿಗೆ ನಡೆದ 2018ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷಗಳ ಬಲಾಬಲ ಎಷ್ಟಿತ್ತು? ಸರ್ಕಾರ ರಚಿಸಲು ಮಾಡಿದ ಕಸರತ್ತಿನ ಮಾಹಿತಿ ಇಲ್ಲಿದೆ ನೋಡಿ.


ಬೆಂಗಳೂರು (ಮಾ.29): ರಾಜ್ಯವೇ ಎದುರು ನೋಡುತ್ತಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ- 2023ರ ದಿನಾಂಕ ಘೋಷಣೆಯಾಗಿದೆ. ಮೇ 10 ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮಾಡುವ ಮೂಲಕ ಫಲಿತಾಂಶ ಪ್ರಕಟವಾಗಲಿದೆ. ಆದರೆ, 2018ರಲ್ಲಿ ಯಾವ ಪಕ್ಷಗಳ ಬಲಾಬಲ ಎಷ್ಟಿತ್ತು ಇಲ್ಲಿದೆ ನೋಡಿ ಮಾಹಿತಿ.

ಕೇಂದ್ರ ಚುನಾವಣಾ ಆಯೋಗದಿಂದ ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ಮೂಲಕ ರಾಜಕೀಯ ಪಕ್ಷಗಳ ಚುನಾವಣಾ ಅಖಾಡ ಗರಿಗೆದರಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಮೈಕೊಡವಿಕೊಂಡು ಸ್ಪರ್ಧೆಗೆ ಸಿದ್ಧವಾಗುತ್ತಿವೆ. ಆದರೆ, ಕಳೆದ ಚುನಾವಣೆಯಲ್ಲಿ 2018ರಲ್ಲಿ ರಾಜ್ಯದಲ್ಲಿ ಇದ್ದ ವಿಧಾನಸಭಾ ಬಲಾಬಲ ಎಂಬುದರ ಬಗ್ಗೆ ಒಮ್ಮೆ ಮೆಲುಕು ಹಾಕೋಣ, ಯಾವ ಪಕ್ಷದಿಂದ ಎಷ್ಟು ಜನ ಮಸದಸ್ಯರಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ. 

Tap to resize

Latest Videos

ಪ್ರಸ್ತುತ ರಾಜ್ಯದಲ್ಲಿ ಪಕ್ಷಗಳ ಬಲಾಬಲ:  ರಾಜ್ಯದಲ್ಲಿ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿವೆ. ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿಯನ್ನು ಹಿಡಿಯಲು 113 ಶಾಸಕರ ಬೆಂಬಲ ಬೇಕಾಗುತ್ತದೆ. ಇನ್ನು ಪ್ರಸ್ತುತ ರಾಜ್ಯದಲ್ಲಿ ಪಕ್ಷಗಳವಾರು ಶಾಸಕರ ಸಂಕ್ಯಾಬಲವನ್ನು ನೋಡಿದರೆ, ಅಧಿಕಾರದಲ್ಲಿರುವ ಬಿಜೆಪಿ 118 ಸ್ಥಾನಗಳನ್ನು ಹೊಂದಿದೆ. ವಿರೋಧ ಪಕ್ಷವಾಗಿರುವ ಕಾಂಗ್ರೆಸ್ 69, ಪರಾಜ್ಯದ ಪ್ರಭಲ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ 32 ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್ಪಿ) 1 (ಈಗ ಬಿಜೆಪಿ ಸೇರ್ಪಡೆ) ಹಾಗೂ ಪಕ್ಷೇತರರು 2 ಶಾಸಕರಾಗಿದ್ದಾರೆ. ಉಳಿದಂತೆ 2 ಸ್ಥಾನಗಳು ತೆರವಾಗಿವೆ.

ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ, 13ಕ್ಕೆ ಮತ ಎಣಿಕೆ: ಚುನಾವಣಾ ಆಯೋಗ ಘೋಷಣೆ

2018ರಲ್ಲಿ ನಡೆದ ಚುನಾವಣಾ ಫಲಿತಾಂಶ: 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಗಳಿಗೂ ಬಹುಮತ ಸಿಕ್ಕಿರಲಿಲ್ಲ. ಬಿಜೆಪಿ ಏಕಮಾತ್ರ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಮೇ 12, 2018ರಲ್ಲಿ ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಎರಡು ಕ್ಷೇತ್ರಗಳಾ ದ ರಾಜರಾಜೇಶ್ವರಿ ನಗರ ಹಾಗೂ ಜಯನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಮತ ಚೀಟಿ ಅಕ್ರಮ ಆರೋಪ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಹಾಗೂ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ನಿಧನದಿಂದ ಜಯನಗರ ಕ್ಷೇತ್ರದ ಚುನಾವಣೆ ಮೇ 28 ರಂದು ನಡೆದಿತ್ತು.

222 ಕ್ಷೇತ್ರಗಳಿಗೆ ಮಾತ್ರ ಚುನಾವಣೆ: 2018ರಲ್ಲಿ ಮೇ 15 ರಂದು ನಡೆದ ಮತ ಎಣಿಕೆಯಲ್ಲಿ 222 ಕ್ಷೇತ್ರಗಳ ಪೈಕಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38, ಪಕ್ಷೇತರರು 2 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಈ ವೇಳೆ ಯಾವೊಂದು ಪಕ್ಷಕ್ಕೂ ಬಹುಮತ ಸಾಬೀತು ಮಾಡಲು ಸಾಧ್ಯವಾಗಲಿಲ್ಲ. ಅತಂತ್ರ ಸ್ಥಿತಿ ಉಂಟಾಗಿತ್ತು. ಸರ್ಕಾರ ಸ್ಥಾಪನೆಗೆ ಬೇಕಾಗಿದ್ದ 113 ಮ್ಯಾಜಿಕ್ ನಂಬರ್ ತಲುಪುವಲ್ಲಿ ಯಾವೊಂದು ಪಕ್ಷಕ್ಕೂ ಸಾಧ್ಯವಾಗಿರಲಿಲ್ಲ. ಇನ್ನು ಮೇ 28 ರಂದು ಬಾಕಿ ಇದ್ದ ಎರಡು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆ ಮೂಲಕ 2018 ರಲ್ಲಿ ಕಾಂಗ್ರೆಸ್ ಒಟ್ಟು 71 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು ಆದರೂ ಮ್ಯಾಜಿಕ್‌ ನಂಬರ್‌ ಯಾವ ಪಕ್ಷಕ್ಕೂ ಸಿಗಲಿಲ್ಲ. ಈ ವೇಳೆ ಸರ್ಕಾರ ಸ್ಥಾಪನೆ ಮಾಡುವುದಾಗಿ ಮುಂದೆ ಬಂದ ಬಿ.ಎಸ್. ಯಡಿಯೂರಪ್ಪ ಅವರು ಬಹುಮತ ಸಾಬೀತು ಮಾಡಲಾಗದೇ ಒಂದು ವಾರ ಅಧಿಕಾರ ನಡೆಸಿ ರಾಜೀನಾಮೆ ಕೊಟ್ಟರು.

ಮೈತ್ರಿ ಸರ್ಕಾರದ ರಚನೆ: ನಂತರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೊಂಡು ಎಚ್.ಡಿ. ಕುಮಾರಸ್ವಾಮಿ ಎರಡನೇ ಬಾರಿಗೆ ಮುಖ್ಯಮಂತ್ರಿ ಆದರು. ಆದರೆ, 17 ಜನ ಶಾಸಕರು ಸಮ್ಮಿಶ್ರ ಸರ್ಕಾರವನ್ನು ವಿರೋಧಿಸಿ ಪಕ್ಷಾಂತರ ಮಾಡಲು ಸಿದ್ಧವಾಗಿದ್ದರು. ಆದರೆ, ಪಕ್ಷಾಂತರ ಕಾಯ್ದೆ ಜಾರಿಯಾದ್ದರಿಂದ ಎಲ್ಲ ಶಾಸಕರ ಸ್ಥಾನವನ್ನು ಅನರ್ಹಗೊಳಿಸಲಾಯಿತು. ನಂತರ ನಡೆದ ಚುನಾವಣೆಯಲ್ಲಿ 13ಕ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಮ್ಯಾಜಿಕ್‌ ನಂಬರ್‌ ಸಿಕ್ಕಿತು. ಈ ಮೂಲಕ ಪಕ್ಷೇತರ ಒಬ್ಬ ಶಾಸಕ ಹಾಗೂ ಬಿಎಸ್‌ಪಿಯ ಶಾಸಕರೂ ಕೂಡ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಸರ್ಕಾರ ರಚನೆಗೊಂಡಿದೆ. ಈಗ ಈ ಸರ್ಕಾರದ ಅಧಿಕಾರವೂ ಪೂರ್ಣಗೊಳ್ಳುತ್ತಿದೆ.

ಬಳ್ಳಾರಿ ಪಾಲಿಕೆಗೆ 23 ವರ್ಷದ ಯುವತಿ ಮೇಯರ್‌: ರಾಜ್ಯದ ಕಿರಿಯ ಮೇಯರ್‌ ಹೆಗ್ಗಳಿಕೆ

ಪ್ರತಿ ಕ್ಷೇತ್ರಕ್ಕೆ ಸರಾಸರಿ 11 ಅಭ್ಯರ್ಥಿಗಳ ಸ್ಪರ್ಧೆ: ಇನ್ನು 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಬರೋಬ್ಬರಿ 2,622 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಪೈಕಿ 217 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇನ್ನು ಪ್ರತಿ ಕ್ಷೇತ್ರಕ್ಕೆ ಸರಾಸರಿ ಮಾಡಿದಲ್ಲಿ 11 ಜನರು ಸ್ಪರ್ಧೆ ಮಾಡಿದ್ದರು. ಮತ್ತೊಂದೆಡೆ ರಾಜ್ಯದ 224 ಕ್ಷೇತ್ರಗಳಲ್ಲಿ 36 ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಕ್ಷೇತ್ರವಾಗಿದ್ದರೆ, 15 ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಕ್ಷೇತ್ರವಾಗಿವೆ. ಇನ್ನು ಪ್ರತಿ ಕ್ಷೇತ್ರಗಳಲ್ಲಿ ಈ ಬಾರಿ ಸ್ಪರ್ಧೆ ಮಾಡುವವರ ಸಂಖ್ಯೆ ಹಚ್ಚಾಗಲಿದೆ ಎಂಬ ನಿರೀಕ್ಷೆಯಿದೆ.

click me!